ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡ್ತಿದೆ ಈ ಕಂಪನಿ

0

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅಗ್ಗದ ಪ್ಲಾನ್ ಗಳನ್ನು ನೀಡ್ತಿವೆ. ಇದ್ರಲ್ಲಿ ವೋಡಾಫೋನ್ ಇಂಡಿಯಾ ಹಿಂದೆ ಬಿದ್ದಿಲ್ಲ. ವೋಡಾಫೋನ್ ಇಂಡಿಯಾ ಈಗ ಎರಡು ಅಗ್ಗದ ಯೋಜನೆಯನ್ನು ಬಿಡುಗಡೆ ಮಾಡಿದೆ.

ಕಂಪನಿಯು 109 ಮತ್ತು 169 ರೂಪಾಯಿಗಳ ಯೋಜನೆ ಬಿಡುಗಡೆ ಮಾಡಿದೆ. 109 ರೂಪಾಯಿ ಯೋಜನೆ 20 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವು ಡೇಟಾ ಮತ್ತು ಕರೆ ಜೊತೆಗೆ ಇತರ ಸೌಲಭ್ಯಗಳನ್ನು ಪಡೆಯುತ್ತೀರಿ. ಒಟ್ಟು 1 ಜಿಬಿ ಡೇಟಾ ಮತ್ತು 300 ಎಸ್‌ಎಂಎಸ್ ನಿಮಗೆ ಲಭ್ಯವಾಗಲಿದೆ. ವೊಡಾಫೋನ್ ಪ್ಲೇ ಮತ್ತು ಜಿ 5 ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಹ ಸಿಗ್ತಿದೆ.

ವೊಡಾಫೋನ್‌ನ 169 ರೂಪಾಯಿಗಳ ಯೋಜನೆಯಲ್ಲೂ 109 ಯೋಜನೆಯ ಎಲ್ಲ ಸೌಲಭ್ಯ ಸಿಗ್ತಿದೆ. ಗ್ರಾಹಕರು ಪ್ರತಿದಿನ 1 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ಪಡೆಯುತ್ತಾರೆ. ಇದಲ್ಲದೆ ವೊಡಾಫೋನ್ ಪ್ಲೇ ಮತ್ತು ಜಿ 5 ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಿಗ್ತಿದೆ.ಈ ಯೋಜನೆಯ ಸಿಂಧುತ್ವವು 20 ದಿನಗಳು.

LEAVE A REPLY

Please enter your comment!
Please enter your name here