ಈ ವೇಳೆಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ವಸಂತ ಕುಮಾರರವರು ಹರಿಹರದ ಗಂಗಾ ನಗರ ಪ್ರತಿ ಮಳೆಗಾಲದಲ್ಲಿ ನೆರೆ ಬಂದಾಗಲೆಲ್ಲಾ ಮುಳುಗಡೆ ಪ್ರದೇಶವಾಗಿದ್ದು, ಸಧ್ಯಕ್ಕೆ ಇನ್ನಷ್ಟು ನೀರು ಬಂದರೆ ಗಂಗಾ ನಗರವೂ ಜಲಾ ವೃತವಾಗಲಿದೆ. ಗಂಗಾನಗರ ಪ್ರದೇಶದ ನಿವಾಸಿಗಳಿಗೆ ಶ್ವಾಶತ ಪರಿಹಾರ ಇಲಿಯವರೇಗೂ ಸಿಗಲ್ಲಿಲ್ಲ ಶಾಸಕರು ಹಾಗೂ ಜಿಲ್ಲಾದಿಕಾರಿಗಳು ಸುಮಾರು 7 ಎಕ್ಕರೆ ಹೊಲವನ್ನು ಗುರತ್ತಿಸಿ ಸರಕಾರೆ ಪ್ರಸ್ತಾವನೆ ಕಳಿಹಿಸಲಾಗಿದ್ದು ಶಿಘ್ರದಲ್ಲಿ ಅನುಧಾನ ಬಿಡುಗಡೆ ಮಾಡಿಸಿ ಈ ನಗರದ ನೆರೆ ಸಮಸ್ಯವನು ಶ್ವಾಶತ ಪರಿಹಾರ ಮಾಡಲು ಕ್ರಮವಹಿಸುತ್ತೇನೆ ಎಂದು ಹೇಳಿದರು.
ನಂತರ ಪೌರಯುಕ್ತೆ ಎಸ್ ಲಕ್ಷ್ಮೀ ಮಾತನಾಡಿ ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದ ಹೊಳೆ ಮೆಟ್ಟಿಲುಗಳೂ ಮುಳುಗಡೆಯಾಗಿದೆ. ಈಗಾಗಲೇ ಹರಿಹರದ ಹರಿಹರೇಶ್ವರ ದೇವಸ್ಥಾನ ಸಮೀಪ ನದಿಯಲ್ಲಿರುವ ಗೋಪುರ ಮುಳುಗಿದ್ದು, ಇಲ್ಲಿ ಸುಮಾರು 20 ಅಡಿಗೂ ಅಧಿಕ ನೀರು ನದಿಯಲ್ಲಿ ಹರಿಯುತ್ತಿದೆ.
ತುಂಬಿ ಹರಿಯುತ್ತಿರುವ ತುಂಗಭದ್ರ ನದಿ ಹಾದು ಹೋಗಿರುವ ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ನದಿ ಪಾತ್ರದ ಜನರಲ್ಲಿ ಜಲಾವೃತಗೊಂಡು ಮನೆ ಮಠ ಕಳೆದುಕೊಳ್ಳುವ ಭೀತಿ ಮನೆ ಮಾಡಿದ್ದು, ನದಿಪಾತ್ರದಲ್ಲಿ ಆಡಳಿತ ಯಂತ್ರವು ಹೈ ಅಲರ್ಟ್ ಘೋಷಿಸುವುದರ ಜೊತೆಗೆ ಸಂತ್ರಸ್ಥರಿಗೆ ಗಂಜಿ ಕೇಂದ್ರವನ್ನು ಸಹ ಆರಂಭಿಸಿಲು ತಾಲ್ಲೂಕ ಅಡಳಿತ ಹಾಗೂ ನಗರಸಭೆ ಸಜ್ಜಾಗಿದೆ ಎಂದು ತಿಳಿಸಿದರು.
ಮಲೆನಾಡಿನಲ್ಲಿ ಸತತ ಸುರಿಯುತ್ತಿರುವ ಮಳೆಯಿಂದ ತುಂಗಭದ್ರಾ ನದಿ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದೆ. ಬುಧವಾರ ಸಂಜೆಗೆ ಹೋಲಿಸಿದರೆ ಒಂದಿಷ್ಟು ಕಡಿಮೆ ಆಗಿದೆ. ಗುರುವಾರ ಸಂಜೆ ವೇಳೆಗೆ ನದಿ ನೀರಿನ ಮಟ್ಟ 10.70 ಅಡಿಯಿತ್ತು. ಮಲೆನಾಡಿನಲ್ಲಿ ಮಳೆ ಮುಂದುವರಿದಿರುವುದರಿಂದ ಏರಿಳಿತ ಕಂಡು ಬಂದಿದ್ದು ಅಪಾಯದ ಸ್ಥಿತಿ ಮುಂದುವರಿದಿದೆ.
ಹರಿಹರ ತಾಲೂಕಿನ ಉಕ್ಕಡಗಾತ್ರಿ ಕ್ಷೇತ್ರದ ಸ್ನಾನ ಘಟ್ಟ ಮುಳುಗಡೆಯಾಗಿದೆ. ಸಾರಥಿ, ಚಿಕ್ಕಬಿದರೆ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ತುಂಗಭದ್ರೆ ಹಿನ್ನೀರಿನಿಂದಾಗಿ ಸಂಪರ್ಕ ಸೇತುವೆ ಮೇಲೆ 2-3 ಅಡಿಯಷ್ಟು ನೀರು ಹರಿಯುವ ಸಾಧ್ಯತೆ ಇದೇ ರೀತಿ ಮಳೆ ಮುಂದುವರಿದರೆ ಸಾರಥಿ-ಚಿಕ್ಕಬಿದರೆ ಸಂಪರ್ಕ ಕಡಿತವಾಗಿ, ಉಕ್ಕಡಗಾತ್ರಿ ಜಲಾವೃತವಾಗಲಿದೆ. ದೀಟೂರು ಹಳೆ ಗ್ರಾಮವು ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆ ಇದೆ.
ನದಿ ಪಾತ್ರದ ಸ್ಥಳ, ಮುಳುಗಡೆ ಪ್ರದೇಶಕ್ಕೆ ಪೌರಾಯುಕ್ತೆ ಎಸ್.ಲಕ್ಷ್ಮಿಎಇಇ ಎಸ್.ಎಸ್. ಬಿರಾದರ,ಅಧಿಕಾರಿ, ಸಿಬ್ಬಂದಿ ಸಮೇತ ಸ್ಥಳಕ್ಕೆ ತೆರಳಿ, ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು. ತಾಲೂಕು ಆಡಳಿತ, ಜಿಲ್ಲಾಡಳಿತವೂ ಹೈ ಅಲರ್ಟ್ ಘೋಷಿಸಿದ್ದು, ಯಾವುದೇ ಸ್ಥಿತಿ ಎದುರಾದರೂ ಪರಿಹಾರ ಕಾರ್ಯಕ್ಕೆ ಸನ್ನದ್ಧವಾಗಿದೆ ಎಂದು ಹೇಳಿದರು.