ಚಡಚಣ ತಾಲೂಕ ಪಂಚಾಯ್ತಿ ಕಚೇರಿಯಲ್ಲಿ ನೂತನ ತಾ. ಪಂ ಅಧ್ಯಕ್ಷೆ ಗಂಗೂಬಾಯಿ ಬಿರಾದಾರ ಅಧ್ಯಕ್ಷೆ ಹಾಗೂ ಸುಜ್ಞಾನಿ ಬಿರಾದಾರ ಉಪಾಧ್ಯಕ್ಷೆ ಹುದ್ದಗೆ ಗುರುವಾರ ಪದಗ್ರಹಣ ಮಾಡಿದರು.

0

ಚಡಚಣ / ವಿಜಯಪುರ ನ್ಯೂಸ್…

ಚಡಚಣ ತಾಲೂಕ ಪಂಚಾಯ್ತಿ ಕಚೇರಿಯಲ್ಲಿ ನೂತನ ತಾ. ಪಂ ಅಧ್ಯಕ್ಷೆ ಗಂಗೂಬಾಯಿ ಬಿರಾದಾರ ಅಧ್ಯಕ್ಷೆ ಹಾಗೂ ಸುಜ್ಞಾನಿ ಬಿರಾದಾರ ಉಪಾಧ್ಯಕ್ಷೆ ಹುದ್ದಗೆ ಗುರುವಾರ ಪದಗ್ರಹಣ ಮಾಡಿದರು.

ಪಕ್ಷ-ಭೇದ ಮರೆತು ಅಭಿವೃದ್ಧಿಗೆ ಶ್ರಮಿಸಿ: ಕಟಕದೊಂಡ

ಚಡಚಣ. ಪಕ್ಷ-ಭೇದ ಮರೆತು ತಾಲೂಕು ಪಂಚಾಯ್ತಿ ಪ್ರತಿಯೊಬ್ಬ ಸದಸ್ಯರು ಸಮಗ್ರ ತಾಲೂಕು ಅಭಿವೃದ್ಧಿಗೆ ಶ್ರಮಿಸಿ ಮಾದರಿಯ ತಾಲೂಕು ಮಾಡಬೇಕು ಎಂದು ಮಾಜಿ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು. ಪಟ್ಟಣದ ತಾಲೂಕ ಪಂಚಾಯ್ತಿ ಕಚೇರಿಯಲ್ಲಿ ನೂತನ ತಾ. ಪಂ ಅಧ್ಯಕ್ಷೆ ಗಂಗೂಬಾಯಿ ಬಿರಾದಾರ ಅಧ್ಯಕ್ಷೆ ಸುಜ್ಞಾನಿ ಬಿರಾದಾರ ಉಪಾಧ್ಯಕ್ಷೆ ಹುದ್ದಗೆ ಗುರುವಾರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾ.ಪಂ ಸದಸ್ಯ ರವಿದಾಸ ಜಾಧವ ಮಾತನಾಡಿ, ಒಟ್ಟು ಸದಸ್ಯರನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ತಾಲೂಕಿನ ಸಮಗ್ರ ಅಭಿವೃದ್ಧಿ ಮಹತ್ತರ ಜವಾಬ್ದಾರಿ ಪದಗ್ರಹಣ ಮಾಡಿರುವ ನೂತನ ತಾಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ರ ಮೇಲಿದೆ. ತಾಲೂಕು ಪಂಚಾಯ್ತಿ ಸದಸ್ಯರಿಗೆ ಅನುಧಾನದ ಕೊರತೆ ಇದ್ದರು ವಿವಿಧ ನಿಗಮಗಳಿಂದ ವಿಶೇಷ ಅನುದಾನ ತರುವುದರ ಮೂಲಕ ಅಭಿವೃದ್ಧಿ ಮಾಡೋಣ ಎಂದ ಅವರು, ಇಂಚಗೇರಿ ಮತಕ್ಷೇತ್ರದಲ್ಲಿ ಸುಮಾರು ಎರಡು ಲಕ್ಷ ಶಶಿ ನೆಟ್ಟು ಪೋಷಣೆ ಮಾಡಿದ್ದೇವೆ ಅದರಂತೆ ಅಭಿವೃದ್ಧಿ ಜೊತೆಗೆ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಮತಕ್ಷೇತ್ರದಲ್ಲಿ ಲಕ್ಷಾಂತರ ಶಶಿಗಳು ನೆಡುವುದರ ಮೂಲಕ ಮಾದರಿಯ ತಾಲೂಕು ಮಾಡೋಣ ಎಂದರು. ಈ ಕಾರ್ಯಮದಲ್ಲಿ ತಾ. ಪಂ ಸದಸ್ಯ ಧೂಳೇಶ ಕಾಂಬಳೆ, ಮುಖಂಡರಾದ ಬಸುಸಾಹುಕಾರ ಬಿರಾದಾರ,ಮಹಾದೇವ ಹಿರೇಕುರಬರ ಮಾತನಾಡಿ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮದಿಂದ ಪ್ರಥಮ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಗಾದಿಗೇರಲು ಸಾಧ್ಯವಾಯಿತು ಎಂದರು. ನೂತನ ಅಧ್ಯಕ್ಷೆ ಗಂಗೂಬಾಯಿ ಬಿರಾದಾರ ಮಾತನಾಡಿ, ತಾಲೂಕು ಪಂಚಾಯ್ತಿ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ತಾಲೂಕಿನ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಕತ್ರಳಾದ ಅಮೃತಾನಂದ ಮಹಾಸ್ವಾಮೀಜಿ ಅಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಜ್ಞಾನಿ ಬಿರಾದಾರ,ಸದಸ್ಯರಾದ ಶಿವಾಜಿ ವಾಲಿಕಾರ, ದ್ಯಾಮಣ್ಣ ಕಾಂಬಳೆ, ಮುಖಂಡರಾದ ಶಿವರಾಜಸಾಹುಕಾರ ಭೈರಗೊಂಡ, ಕಾಮೇಶ ಪಾಟೀಲ, ಬಾಳಪ್ಪಗೌಡ ಕಾಮಗೊಂಡ, ರಾಜು ಶಿಂಗೆ, ರಾಜು ಲೌಗಿ, ಸದು ಶಿಂಗೆ, ಚಂದ್ರಮ ಶಿಂಗೆ, ಚಾಂದಸಾಬ ಗೋಳೇಕರ, ಮುಸ್ತಾಕ ಮುಲ್ಲಾ, ಭೀರಪ್ಪ ಲಚ್ಯಾಣ, ಮುತ್ತೂಗೌಡ ಬಿರಾದಾರ, ಬಸವರಾಜ ಸೊರೆಗಾವ, ಸಿದ್ದಪ್ಪ ತೇಲಿ, ಬಿ ಎಮ್ ಬಿರಾದಾರ್ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here