ಚಾಂದ ಶಿರದವಾಡ “ಉಚಿತ ಹಾಗೂ ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿ!

0

ಚಾಂದ ಶಿರದವಾಡ
“ಉಚಿತ ಹಾಗೂ ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿ!”

ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವೇ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ. ಉಚಿತ ಹಾಗೂ ಮೌಲ್ಯಯುತವಾದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಿಗೆ ಬದುಕಿನ ಬಗ್ಗೆ ಭರವಸೆ ಮೂಡಿಸುವ ಜವಾಬ್ದಾರಿಯುತ ಕೆಲಸವನ್ನು ಸರ್ಕಾರಿ ಕನ್ನಡ ಶಾಲೆಗಳು ಮಾಡುತ್ತಿವೆ. ಇಂತಹ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುವುದೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

ಈ ನಿಟ್ಟಿನಲ್ಲಿ, ನಿಪ್ಪಾಣಿ ಮತಕ್ಷೇತ್ರದ ಚಾಂದ ಶಿರದವಾಡ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸುಮಾರು 24 ಲಕ್ಷ ರೂ. ಮೊತ್ತದಲ್ಲಿ, ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ, ಜನಪ್ರತಿನಿಧಿಗಳು, ಊರಿನ ಹಿರಿಯರು, ಮಹಿಳೆಯರು ಒಡಗೂಡಿ, ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

चांद शिरदवाड
“विनामूल्य आणि उत्तम दर्जेदार शिक्षण देण्याचे लक्ष्य!”

कोणत्याही मुलास शिक्षणापासून वंचित राहू नये. शिक्षण हा चांगल्या समाजाचा पाया आहे. मुलांना त्यांच्या जीवनाविषयी आत्मविश्वास निर्माण व्हावा यासाठी जबाबदार काम सरकारी कन्नड शाळा करीत आहेत. अशा शाळांच्या विकासास समर्थन देणे हे आमचे मुख्य उद्दीष्ट आहे.

या दरम्यान निपाणी मतदार संघाच्या व्याप्तीत येणाऱ्या शिरदवाड गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 24 लाख रुपयांचा निधीतून सरकारी कन्नड उच्च प्राथमिक शाळेच्या 2 वर्ग खोली निर्माण कामकाजाचे लोकप्रतिनिधी, गावातील प्रमुख, महिला सर्वांनी मिळून भूमिपूजन करून शुभारंभ केला.

LEAVE A REPLY

Please enter your comment!
Please enter your name here