ಚಾಮರಾಜನಗರದ ಒಂದೇ ಪ್ರದೇಶದಲ್ಲಿ 7 ಬಗೆಯ ಖನಿಜಗಳು ಪತ್ತೆ

0

ಚಾಮರಾಜನಗರದ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜಗಳು ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಸಂರಕ್ಷಿಸಿ ಇಲ್ಲೊಂದು ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಷಾನ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ನಡೆಸುತ್ತಿದ್ದ ವೇಳೆ ಚಾಮರಾಜನಗರ ಸಮೀಪವೇ ಇರುವ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ರೀತಿಯ ಖನಿಜಗಳು ಪತ್ತೆಯಾಗಿರುವುದು ಕಂಡು ಬಂದಿದೆ.

ಸರ್ಕಾರಕ್ಕೆ ಸೇರಿದ ಸರ್ವೆ ನಂಬರ್ 124 ರಲ್ಲಿ ಫೆಲ್ ಸೈಟ್, ಗ್ರಾನೈಟ್ ಫ್ಯೂಷೈಟ್, ಕ್ವಾರ್ಟ್ ಜೈಟ್, ಡೋಲೆರೈಟ್ ಡೈಕ್, ಸ್ಮೋಕಿ ಕ್ವಾರ್ಟಜ್, ಪೆಗ್ಮಟೈಟ್, ಗ್ರಾನೈಟ್ ಗ್ನೈಸ್ ಎಂಬ ಖನಿಜಗಳು ಪತ್ತೆಯಾಗಿವೆ. ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಬಗೆಯ ಖನಿಜಗಳು ಕಂಡು ಬರುವುದು ತೀರಾ ಅಪರೂಪ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಷಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ.

ಒಂದೇ ಪ್ರದೇಶದಲ್ಲಿ ವಿವಿಧ ರೀತಿಯ ಖನಿಜಗಳು ಪತ್ತೆಯಾಗಿರುವ ಈ ಪ್ರದೇಶವನ್ನು ಸಂರಕ್ಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಇಲ್ಲೊಂದು ಪ್ರಕೃತಿದತ್ತವಾದ ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ ಸ್ವಾಭಾವಿಕ ಭೂಗರ್ಭ ಸಂಗ್ರಹಾಲಯ (ಜಿಯಲಾಜಿಕಲ್ ಮ್ಯೂಸಿಯಂ) ಸ್ಥಾಪಿಸಿ ಜಿಲ್ಲೆಯ ಇತರ ಕಡೆ ದೊರೆಯುವ ಶಿಲಾ ಮಾದರಿ ಹಾಗು ಖನಿಜಗಳ ಮಾದರಿಗಳನ್ನು ಇಲ್ಲಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಪ್ರಾಕೃತಿಕ ಭೂಗರ್ಭ ಸಂಗ್ರಹಾಲಯ ಸ್ಥಾಪಿಸುವುದರಿಂದ. ಭೂಮಿಯ ಶಿಲಾಸ್ತರಗಳ ಉಗಮ ಹಾಗು ರಚನೆ ಬಗ್ಗೆ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಷ್ಟೆ ಅಲ್ಲ ಇದನ್ನೊಂದು ಪ್ರವಾಸಿ ತಾಣವನ್ನಾಗಿ ರೂಪಿಸಲು ಜಿಲ್ಲಾಡಳಿತ ಯೋಜನೆ ಸಿದ್ದಪಡಿಸುತ್ತಿದೆ.

LEAVE A REPLY

Please enter your comment!
Please enter your name here