ಚಿನ್ನದ ಮೇಲೆ ಸಾಲ ಪಡೆಯುವುದು ಸುಲಭ ಹಾಗೂ ಸರಳ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಮೇಲೆ ಸಾಲ ಪಡೆಯುವುದಕ್ಕೆ ಬೇಡಿಕೆ ಹೆಚ್ಚಿದೆ. ಚಿನ್ನದ ಗುಣಮಟ್ಟ, ಪ್ರಮಾಣ ಕೂಡ ಸಾಲ ಪಡೆಯುವುದಕ್ಕೆ ಮುಖ್ಯವಾಗುತ್ತದೆ. ಚಿನ್ನದ ಮೇಲಿನ ಸಾಲ ಅಲ್ಪಾವಧಿಯದ್ದಾಗಿರುತ್ತದೆ. ಮರುಪಾವತಿ ವಿಧಾನ ಒಂದೊಂದು ಸಂಸ್ಥೆಯಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ.
ಅಂದ ಹಾಗೆ ಬ್ಯಾಂಕ್ ಗಳು ಹಾಗೂ ಚಿನ್ನದ ಎನ್ ಬಿಎಫ್ ಸಿಗಳಲ್ಲಿ ಸಾಲದ ಮೇಲಿನ ಬಡ್ಡಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 7.75% + GST
ಕೆನರಾ ಬ್ಯಾಂಕ್: 1 ವರ್ಷದ MCLR (7.65%)
ಬ್ಯಾಂಕ್ ಆಫ್ ಮಹಾರಾಷ್ಟ್ರ: 8%
ಯುಕೋ ಬ್ಯಾಂಕ್: 8.5%
ಇಂಡಿಯನ್ ಬ್ಯಾಂಕ್: 8.5- 8.75%
ಪಿಎನ್ ಬಿ: 8.6- 9.15%
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 7.15- 9.2%
ಇಂಡಸ್ ಇಂಡ್ ಬ್ಯಾಂಕ್: 10.5- 16%
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: 18% ತನಕ
ಕೊಟಕ್ ಮಹೀಂದ್ರಾ ಬ್ಯಾಂಕ್: 10.5- 17%
ಆಕ್ಸಿಸ್ ಬ್ಯಾಂಕ್: 9.5- 17%
ಎಚ್ ಡಿಎಫ್ ಸಿ ಬ್ಯಾಂಕ್: 9.9- 17.9%+ GST
ಐಸಿಐಸಿಐ ಬ್ಯಾಂಕ್: 10- 19.76%
ಮುತ್ತೂಟ್ ಫೈನಾನ್ಸ್: 12- 27%
ಮಣಪ್ಪುರಂ ಫೈನಾನ್ಸ್: ಗರಿಷ್ಠ 29%
ಫೆಡರಲ್ ಬ್ಯಾಂಕ್: 8.5%ನಿಂದ ಆರಂಭ
ಯೂನಿಯನ್ ಬ್ಯಾಂಕ್: MCLR+ 1.65%ರಿಂದ MCLR+2.4%
ಇದರ ಜತೆಗೆ ಆಯಾ ಬ್ಯಾಂಕ್ ಗಳಿಂದ ಇತರ ಶುಲ್ಕಗಳು ಎಂದು ವಸೂಲಿ ಮಾಡಲಾಗುತ್ತದೆ. ಅದು ಚಿನ್ನದ ಗುಣಮಟ್ಟ ಅಳೆಯುವುದಕ್ಕೆ ಹಾಗೂ ಇತರ ಪ್ರೊಸೆಸಿಂಗ್ ಶುಲ್ಕ ಆಗಿರುತ್ತದೆ.