ಚೀನಾಗೆ ಮತ್ತೊಂದು ಹೊಡೆತ ನೀಡಿದ ಭಾರತ; ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನೀ ಕಂಪನಿಗಳು ಹೊರಕ್ಕೆ

0

 ಲಡಾಖ್ ಸಂಘರ್ಷದ ಬಳಿಕ ಒಂದರ ಬಳಿಕ ಒಂದರಂತೆ ಚೀನಾಗೆ ಹೊಡೆತ ನೀಡುತ್ತಿರುವ ಭಾರತ ಇದೀಗ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನಾ ಮೂಲದ ಕಂಪನಿಗಳು ಬಿಡ್ಡಿಂಗ್ ಮಾಡುವುದರಿಂದ ಹೊರಗಿಟ್ಟಿದೆ.

ಹೌದು.. ಈ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿದ್ದು, ಭಾರತ ಸರ್ಕಾರದ ಬಹು ನಿರೀಕ್ಷಿತ ವಂದೇ ಭಾರತ್ (Vande Bharat) ಯೋಜನೆಯಡಿ 44 ಸೆಟ್‌ಗಳ ಹೈಸ್ಪೀಡ್ ರೈಲುಗಳಿಗೆ ರೈಲ್ವೆ ಅಂತಾರಾಷ್ಟ್ರೀಯ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್‌ನಲ್ಲಿ ಚೀನಾದ ಕಂಪನಿಗಳು ಕೂಡ ಟೆಂಡರ್‌ಗಳನ್ನು ಭರ್ತಿ ಮಾಡಿವೆ. ಈಗ ರೈಲ್ವೆ ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದು, ರೈಲ್ವೆ ಶೀಘ್ರದಲ್ಲೇ ಮತ್ತೆ ಹೊಸ ಟೆಂಡರ್ ನೀಡಲಿದೆ. ಇದರಲ್ಲಿ ಯಾವುದೇ ಚೀನೀ ಸಂಸ್ಥೆಯನ್ನು ಭಾಗವಹಿಸಲು ಅನುಮತಿಸುವುದಿಲ್ಲ. ಮೇಕ್ ಇನ್ ಇಂಡಿಯಾ (Make in India) ಯೋಜನೆಯಡಿ ಈ ಹೈಸ್ಪೀಡ್ ರೈಲುಗಳನ್ನು ಭಾರತದಲ್ಲಿ ನಿರ್ಮಿಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ ಎನ್ನಲಾಗಿದೆ.

ನಿನ್ನೆಯೇ ಅಂದರೆ ಶುಕ್ರವಾರವೇ ಈ ಬಗ್ಗೆ ಮಾಹಿತಿ ನೀಡಿದ್ದ ರೈಲ್ವೇ ಇಲಾಖೆ, ಕಳೆದ ವರ್ಷ ಆಹ್ವಾನಿಸಲಾಗಿದ್ದ 44 ಅರೆ-ವೇಗದ ವಂದೇ ಭಾರತ್ ರೈಲುಗಳ ನಿರ್ಮಾಣದ ಟೆಂಡರ್ ರದ್ದುಗೊಳಿಸಲಾಗಿದೆ. 44 ಅರೆ ಹೈಸ್ಪೀಡ್ ರೈಲುಗಳ (ವಂದೇ ಭಾರತ್) ನಿರ್ಮಾಣದ ಟೆಂಡರ್ ರದ್ದುಗೊಂಡಿದೆ. ತಿದ್ದುಪಡಿ ಮಾಡಿದ ಸಾರ್ವಜನಿಕ ಸಂಗ್ರಹಣೆ (‘ಮೇಕ್ ಇನ್ ಇಂಡಿಯಾ’ ಆದೇಶ) ಆದೇಶದ ಅಡಿಯಲ್ಲಿ ಒಂದು ವಾರದೊಳಗೆ ಹೊಸ ಟೆಂಡರ್ ಆಹ್ವಾನಿಸಲಾಗುವುದು ಎಂದು ಟ್ವೀಟ್ ಮಾಡಿತ್ತು.

2015 ರಲ್ಲಿ, ಚೀನಾದ ಕಂಪನಿ ಸಿಆರ್‌ಆರ್ಸಿ ಯೋಂಗ್ಜಿ ಎಲೆಕ್ಟ್ರಿಕ್ ಕಂಪನಿ ಲಿಮಿಟೆಡ್ ಮತ್ತು ಗುರುಗ್ರಾಮ್ನ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಖಾಸಗಿ ಲಿಮಿಟೆಡ್ ನಡುವೆ ಈ ಜಂಟಿ ಉದ್ಯಮವನ್ನು ರಚಿಸಲಾಯಿತು. ಕಳೆದ ತಿಂಗಳು ಟೆಂಡರ್ ತೆರೆದಾಗ 16 ಬೋಗಿಗಳ ಈ 44 ಬೋಗಿಗಳಿಗೆ ವಿದ್ಯುತ್ ಉಪಕರಣಗಳು ಮತ್ತು ಇತರ ಸರಕುಗಳನ್ನು ಪೂರೈಸುವ ಆರು ಸ್ಪರ್ಧಿಗಳಲ್ಲಿ ಚೀನಾದ ಜಂಟಿ ಉದ್ಯಮ (ಸಿಆರ್‌ಆರ್ಸಿ-ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್) ಏಕೈಕ ವಿದೇಶಿಯರಾಗಿ ಹೊರಹೊಮ್ಮಿತು.

LEAVE A REPLY

Please enter your comment!
Please enter your name here