ಚೀನಾದ ದುಸ್ಸಾಹಸ ತಡೆಯುವ ನಿಟ್ಟಿನಲ್ಲಿ ಭಾರತ, ಅಮೆರಿಕ ಜಪಾನ್, ಆಸ್ಟ್ರೇಲಿಯಾ ರಣತಂತ್ರ

0

ಇಂಡೋ-ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ ಚೀನಾದ ಆರ್ಭಟಕ್ಕೆ ಅಂಕುಶ ಹಾಕಿ ಅಲ್ಲಿ ಮುಕ್ತ ವಾತಾವರಣ ನಿರ್ಮಿಸುವ ಸಲುವಾಗಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಒಂದಾಗಿ ಕಾರ್ಯಯೋಜನೆ ರೂಪಿಸುತ್ತಿವೆ. ಇಲ್ಲಿ ಮುಕ್ತವಾಗಿರುವ ಹಾಗೂ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಬಲಪಡಿಸಲು ಈ ನಾಲ್ಕು ದೇಶಗಳು ನಿರ್ಧರಿಸಿವೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರೈಸ್ ಪಾಯ್ನೆ ಹಾಗೂ ಜಪಾನ್​ನ ನೂತನ ಪ್ರಧಾನಿ ಯೋಶಿಹಿಡೆ ಸುಗಾ ಅವರು ಇಂದು ಟೋಕಿಯೋದಲ್ಲಿ ಭೇಟಿಯಾಗಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿದರು ಎಂದು ಜಪಾನ್ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂಡೋ-ಪೆಸಿಫಿಕ್ ಸಾಗರ ಪ್ರದೇಶಗಳೆಂದರೆ ಹಿಂದೂ ಮಹಾಸಾಗರ (ಇಂಡಿಯನ್ ಓಷನ್) ಹಾಗೂ ಪೆಸಿಫಿಕ್ ಮಹಾಸಾಗರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಾಗಿವೆ. ಅಮೆರಿಕದಿಂದ ಹಿಡಿದು ಜಪಾನ್, ಭಾರತದವರೆಗೆ ಒಟ್ಟು 24 ದೇಶಗಳು ಈ ಇಂಡೋ-ಪೆಸಿಫಿಕ್ ವ್ಯಾಪ್ತಿಗೆ ಬರುತ್ತವೆ. ಇವುಗಳ ಪೈಕಿ ನಾಲ್ಕು ಪ್ರಮುಖ ಪ್ರಜಾತಂತ್ರ ದೇಶಗಳೆನಿಸಿರುವ ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಅನ್ನು ಸಾಂಕೇತಿವಾಗಿ ಕ್ವಾಡ್ ಎಂದು ಕರೆಯಲಾಗುತ್ತದೆ. ಈ ಸಾಗರ ಪ್ರದೇಶದ ವ್ಯಾಪ್ತಿಗೆ ಬರದಿದ್ದರೂ ಚೀನಾ ದೇಶ ಬಹಳ ಆಕ್ರಮಣಕಾರಿ ಧೋರಣೆಯಿಂದ ಇತರ ದೇಶಗಳಿಗೆ ತಲೆನೋವಾಗಿದೆ. ಸೌತ್ ಚೀನಾ ಸಮುದ್ರ ಹಾಗೂ ಇಂಡೋ-ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಚೀನಾ ಬಹಳ ಅತಿಕ್ರಮಣಕ್ಕೆ ಪ್ರಯತ್ನ ಪಡುತ್ತಲೇ ಇದೆ. ಚೀನಾದ ಈ ವರ್ತನೆಯಿಂದ ಬಹಳಷ್ಟು ದೇಶಗಳು ಬಾಧಿತವಾಗಿವೆ. ಇದಕ್ಕೆ ಒಂದು ಅಂಕುಶ ಹಾಕಲು ಕ್ವಾಡ್ ತಂಡ ನಿಶ್ಚಯಿಸಿದೆ. ADIA-Reliance Retail – ಅಬುಧಾಬಿಯ ಎಡಿಐಎಯಿಂದ ರಿಲಾಯನ್ಸ್ ರೀಟೇಲ್​ನಲ್ಲಿ 5,512 ಕೋಟಿ ರೂ ಹೂಡಿಕೆ

ಅಂದಹಾಗೆ, ಇದು ಕ್ವಾಡ್ ದೇಶಗಳ ಎರಡನೇ ಸಚಿವಮಟ್ಟದ ಸಭೆಯಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶವನ್ನು ಮುಕ್ತವಾಗಿ ಬಿಡುವುದು ಇಲ್ಲಿಯ ಶಾಂತಿ ಮತ್ತು ಸಮೃದ್ಧಿಗೆ ಸಹಕಾರಿ ಎಂಬುದನ್ನು ಅಂತರರಾಷ್ಟ್ರೀಯ ಸಮುದಾಯ ಒಪ್ಪುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರದ ಮೂಲ ನೀತಿಯಾಗಿದೆ ಎಂದು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಹೇಳಿದ್ದಾರೆ.

ಈಗ ಕೊರೋನಾ ವೈರಸ್ ಪಿಡುಗು ಸೇರಿದಂತೆ ಹಲವು ಸವಾಲುಗಳನ್ನ ಜಾಗತಿಕವಾಗಿ ಎದುರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ನಿಲುವಿಗೆ ಸಹಮತ ಇರುವ ದೇಶಗಳೊಂದಿಗೆ ನಮ್ಮ ಸಹಕಾರವನ್ನು ಹೆಚ್ಚಿಸುವ ಸಮಯ ಇದಾಗಿದ ಎಂದು ಜಪಾನ್ ಪಿಎಂ ತಿಳಿಸಿದ್ದಾರೆ.

ಕಾನೂನಿಗೆ ಬದ್ಧವಾಗಿರುವ, ಪಾರದರ್ಶಕವಾಗಿರುವ, ಅಂತರರಾಷ್ಟ್ರೀಯ ಸಾಗರದಲ್ಲಿ ಮುಕ್ತವಾಗಿ ಸಂಚರಿಸುವ, ಇತರ ದೇಶಗಳ ಸಾರ್ವಭೌಮತೆಯನ್ನು ಗೌರವಿಸುವ, ಶಾಂತಿಯುತವಾಗಿ ವಿವಾದಗಳನ್ನ ಬಗೆಹರಿಸುವಂತಹ ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನ ರೂಪಿಸಲು ನಾವು ಬದ್ಧರಾಗಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಮುನ್ನಡೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗ ಈ ನಾಲ್ಕು ದೇಶಗಳು ಹೆಜ್ಜೆ ಇರಿಸುತ್ತಿವೆ. ಹೇರಳ ಖನಿಜ ಸಂಪತ್ತುಗಳಿಂದ ಸಮೃದ್ಧವಾಗಿರುವ ಸೌಥ್ ಚೀನಾ ಸಾಗರದ ಬಹುತೇಕ ಭಾಗದ ಮೇಲೆ ಚೀನಾ ಹಕ್ಕು ಚಲಾಯಿಸುತ್ತಿದೆ. ಇಲ್ಲಿ ವಿಯೆಟ್ನಾಮ್, ಮಲೇಷ್ಯಾ, ಫಿಲಿಪ್ಪೈನ್ಸ್, ಬ್ರೂನೇ, ತೈವಾನ್ ದೇಶಗಳೂ ಕೂಡ ಸೌಥ್ ಚೀನಾದಲ್ಲಿ ಹಕ್ಕು ಹೊಂದಿದ್ದರೂ ಚೀನಾದ ಏಕಮುಖಿ ಧೋರಣೆ ಈ ಎಲ್ಲಾ ದೇಶಗಳಿಗೆ ತಲೆನೋವು ತಂದಿದೆ. ಇಲ್ಲಷ್ಟೇ ಅಲ್ಲ, ಈಸ್ಟ್ ಚೀನಾ ಸಮುದ್ರದಲ್ಲೂ ಚೀನಾ ತಂಟೆತನ ಇದೆ. ಇಲ್ಲಿ ಜಪಾನ್ ಎದುರು ಚೀನಾ ಕಿತಾಪತಿ ಮಾಡುತ್ತಿದೆ. ಜಪಾನ್​ಗೆ ಸೇರಿದ ಕೆಲ ದ್ವೀಪಗಳು ತನ್ನವು ಎಂದು ಚೀನಾ ಹೇಳಿಕೊಳ್ಳುತ್ತಿದೆ. Nobel Prize: ಕಪ್ಪು ಕುಳಿ ಸಂಶೋಧನೆ; ಮೂವರಿಗೆ ಭೌತ ವಿಜ್ಞಾನ ನೊಬೆಲ್​

ಈಸ್ಟ್ ಚೀನಾ ಸಮುದ್ರ ಕೂಡ ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿದೆ. ಅಷ್ಟೇ ಅಲ್ಲ, ಜಾಗತಿಕ ವ್ಯಾಪಾರದ ಸಮುದ್ರ ಮಾರ್ಗ ಕೂಡ ಇಲ್ಲಿಯೇ ಹೋಗುತ್ತದೆ. ಇಲ್ಲಿಯೂ ಚೀನಾ ಹಕ್ಕು ಚಲಾಯಿಸುತ್ತಿರುವುದು ಜಗತ್ತಿನ ಅನೇಕ ದೇಶಗಳಿ ಕೆಂಗಣ್ಣಿಗೆ ಕಾರಣವಾಗಿದೆ. ವ್ಯಾವಹಾರಿಕ ಹಿತಾಸಕ್ತಿ ಹೊಂದಿರುವುದರಿಂದಲೇ ಅಮೆರಿಕ ಕೂಡ ಹೆಚ್ಚು ಮುತುವರ್ಜಿಯಿಂದ ಇಲ್ಲಿನ ವ್ಯವಹಾರಗಳಲ್ಲಿ ಭಾಗಿಯಾಗುತ್ತಿದೆ. ಹೀಗಾಗಿಯೇ, ಸೌಥ್ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕೆಗಳು ಗಸ್ತು ತಿರುಗಿ ಚೀನಾಗೆ ಸೆಡ್ಡು ಹೊಡೆಯುತ್ತಿವೆ.

ಭಾರತ ಇರುವ ನಾಲ್ಕು ಕ್ವಾಡ್ ದೇಶಗಳ ಗುಂಪಿಗೆ ಕೆನಡಾ ಸೇರಿದಂತೆ ಹಲವು ದೇಶಗಳು ಬೆಂಬಲ ವ್ಯಕ್ತಪಡಿಸಿವೆ. ಇಂಡೋ-ಪೆಸಿಫಿಕ್ ಸಾಗರ ಪ್ರದೇಶದ ವ್ಯಾಪ್ತಿಗೆ ಬರದಿದ್ದರೂ ಕೆನಡಾ ಈಗ ಚೀನಾ ವಿರುದ್ಧ ಸಿಡಿದೇಳಲು ಪ್ರಾರಂಭಿಸಿದೆ. ಮುಕ್ತ ವಾತಾವರಣಕ್ಕೆ ಅಡ್ಡಿಯಾಗಿರುವ ಚೀನಾ ವಿರುದ್ಧ ಅನೇಕ ಕಟು ಕ್ರಮಗಳನ್ನ ಕೈಗೊಳ್ಳಲು ಕೆನಡಾ ಮುಂದಾಗಿದೆ. ತನ್ನ ವರ್ತನೆ ಮತ್ತು ದುಸ್ಸಾಹಸಗಳಿಂದ ವಿಶ್ವದ ಅನೇಕ ದೇಶಗಳನ್ನ ಎದುರುಹಾಕಿಕೊಳ್ಳುತ್ತಿರುವ ಚೀನಾ ಮುಂದೆಯೂ ಇದೇ ಧೋರಣೆ ಅನುಸರಿಸಿದರೆ ಅಚ್ಚರಿ ಇಲ್ಲ.

LEAVE A REPLY

Please enter your comment!
Please enter your name here