ಚೀನಾ ವಸ್ತು ಬಹಿಷ್ಕರಿಸಿ, ಸ್ವದೇಶಿ ವಸ್ತು ಬಳಸಲು ಕ್ಷತ್ರಿಯ ಸಮಾಜದಿಂದ ಕರೆ ಮತ್ತು ಪ್ರತಿಭಟನೆ

0

ಚೀನಾ ವಸ್ತು ಬಹಿಷ್ಕರಿಸಿ,ಸ್ವದೇಶಿ ವಸ್ತು ಬಳಸಲು ಕ್ಷತ್ರಿಯ ಸಮಾಜದಿಂದ ಕರೆ ಮತ್ತು ಪ್ರತಿಭಟನೆ

ಹರಿಹರ : ಚೀನಾ ದೇಶದ ಕಳಪೆ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಸಾರ್ವಜನಿಕರು ಬಳಸುವಂತೆ ನಗರದ ಗಾಂಧಿನಗರದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಗಾಂಧಿ ವೃತ್ತದ ಬಳಿ ಚೀನಾ ದೇಶದ ವಸ್ತುಗಳನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಿ  ಜನತೆಗೆ ಕರೆ ನೀಡಿದರು.
ಈ ಸಮಯದಲ್ಲಿ ರವೀಂದ್ರ ನವಲೆ ಮಾತನಾಡಿ ದೇಶದ ಗಡಿ ಭಾಗದಲ್ಲಿ ಚೀನಾ ಸೈನಿಕರು ನಮ್ಮ ಭಾರತೀಯ ಸೈನಿಕರಿಗೆ ಅನವಶ್ಯಕ ತೊಂದರೆ ಕೊಡುತ್ತಿದ್ದಾರೆ ಅಲ್ಲದೆ ನಾನಾರೀತಿಯ ಕಿರುಕುಳ ಗಳನ್ನು ಸಹ ಕೊಡುತ್ತಿದ್ದಾರೆ ಇದನ್ನು ಭಾರತೀಯ ರಾದ ನಾವು ವಿರೋಧಿಸುತ್ತೇವೆ.
ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ವತಿಯಿಂದ ಮಾಜಿ ಸೈನಿಕರು ನಾನಾ ಕಾರಣಗಳಿಂದ ಸೈನ್ಯದಿಂದ ವಾಪಾಸಾಗಿರುವ ಸೈನಿಕರು ಗಳನ್ನು ಸೇರಿಸಿ ಒಂದು ವ್ಯವಸ್ಥಿತವಾದ ಸಂಘವನ್ನು ರಚನೆ ಮಾಡಿ ಯುದ್ಧ ಮಾಡುವ ಸಂದರ್ಭ ಬಂದರೆ ರಕ್ಷಣೆಗೆ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವ ನಿಟ್ಟಿನಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಬಿ ಇಂಡಿಯನ್, ಬೈ ಇಂಡಿಯನ್, ಸೇವ್ ಇಂಡಿ ಯಾ ಎಂಬ ಘೋಷವಾಕ್ಯ ದೊಡನೆ ಪ್ರತಿಭಟನೆ ನಡೆಸಿದ ಸಮಾಜದ ಸದಸ್ಯರುಗಳು ಭಾರತೀಯ ವಸ್ತುಗಳನ್ನು ಖರೀದಿಸಿ ದೇಶದ ಆರ್ಥಿಕ ಸಬಲತೆಗೆ ಎಲ್ಲರೂ ಕೈಜೋಡಿಸೋಣ ಎಂದು ಸಾರ್ವಜನಿಕ ರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಮಾಜದ ಅಧ್ಯಕ್ಷ ಸುರೇಶ್ ತೇಲ್ಕರ್, ಶಾಮರಾವ್ ಕುಂಠೆ , ಮಂಜು ತೇಲ್ಕರ್, ಗಣೇಶ್ ಬೇಂದ್ರೆ, ಶ್ರೀನಿವಾಸ್ ಬಾಯ್ ಜೋಡೆ ಇನ್ನೂ ಮುಂತಾದವರು ಭಾಗವಹಿಸಿದ್ದರು.

ವಿಡಿಯೋ

 

LEAVE A REPLY

Please enter your comment!
Please enter your name here