ಛತ್ರಪತಿ ಶಾಹು ಮಹಾರಾಜ ವೃತ್ತಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನು ಮಾಡಿ ಗೌರವಪೂರ್ವಕವಾಗಿ ನಮಿನಿಸಲಾಯಿತು

0

ಜುಲೈ 26 ಮೀಸಲಾತಿ ಜನಕ ಛತ್ರಪತಿ ಶಾಹು ಮಹಾರಾಜರ ಜಯಂತ್ಯುತ್ಸವವನ್ನು ಜಮಖಂಡಿ ನಗರದ ಜಂಬಗಿ ರಸ್ತೆಯಲ್ಲಿರುವ ಛತ್ರಪತಿ ಶಾಹು ಮಹಾರಾಜ ವೃತ್ತಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನು ಮಾಡಿ ಗೌರವಪೂರ್ವಕವಾಗಿ ನಮಿನಿಸಲಾಯಿತು .. ಈ ಕಾರ್ಯಕ್ರಮವನ್ನು ಉದೇಶಿಸಿ ರಮೇಶ್ ಬಳೋಲಗಿಡದ ಅವರು ಮಾತನಾಡಿ ಶಾಹು ಮಹಾರಾಜರ ಕೊಡುಗೆ ಈ ದೇಶಕ್ಕೆ ಅಪಾರವಾದದ್ದು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದರೂ ಶೋಷಿತರ ಪರವಾಗಿ ಧ್ವನಿಯಾಗಿ ನಿಂತರು .ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿದ್ಯಾಭ್ಯಾಸಕ್ಕೂ ಸಹಾಯವನ್ನು ಮಾಡಿದರು .ತದನಂತರ ಯಮನಪ್ಪ ಗುಣದಾಳ ಮಾತನಾಡಿ ದೇಶಕ್ಕೆ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದು .ಶೋಷಿತರ. ದಲಿತರ. ಅಲ್ಪಸಂಖ್ಯಾತರ. ಹಿಂದುಳಿದ ವರ್ಗಗಳ .ಸಾಮಾಜಿಕವಾಗಿ ಆರ್ಥಿಕವಾಗಿ. ರಾಜಕೀಯವಾಗಿ ಧಾರ್ಮಿಕವಾಗಿ. ಮೇಲೆತ್ತುವ ಕೆಲಸವನ್ನು ಮೊಟ್ಟ ಮೊದಲ ಬಾರಿಗೆ ಮಾಡಿದವರು .ಎಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು .

ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ.
1)ರಮೇಶ್ ಬಳೋಲಗಿಡದ
2)ಯಮನಪ ಗುಣದಾಳ
3)ಶಿವಾನಂದ್ ಬಬಲೇಶ್ವರ
4)ಅಪು ತಳವಾರ
5)ಮಂಜುನಾಥ್ ಇಂಚಗೇರಿ
6)ರಾಜಕುಮಾರ್ ಲಗಳಿ
7)ಮಂಜು ಜಮಖಂಡಿ

LEAVE A REPLY

Please enter your comment!
Please enter your name here