ಛಲವಾದಿ ಸಮಾಜದ ಹಿರಿಯ ನಾಯಕರಾದ ಹಾವೇರಿ ಶಾಸಕ ಶ್ರೀ ನೆಹರು ಚ ಓಲೇಕಾರ್ ರವರಿಗೆ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದರು!

0

ಬಳ್ಳಾರಿ: ಕರ್ನಾಟಕ ರಾಜ್ಯದಲ್ಲಿ 35 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಛಲವಾದಿ ಸಮಾಜದವರು ಹಲವಾರು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುತ್ತಾರೆ, ಭಾರತೀಯ ಜನತಾ ಪಕ್ಷದಿಂದ 6 ಜನ ಛಲವಾದಿ ಸಮಾಜದವರು ಶಾಸಕರಾಗಿ ಆಯ್ಕೆಯಾಗಿರುತ್ತಾರೆ, ಆದರೆ ಮೂಲ ಬಿಜೆಪಿಯವರಾದ ಈ 3 ಜನರು ಸಚಿವ ಸ್ಥಾನಕ್ಕೆ ಅರ್ಹರಿದ್ದರು ಯಾರೊಬ್ಬರಿಗೂ ಸಚಿವ ಸ್ಥಾನ ನೀಡದೇ ಕೇವಲ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿರುವುದು ಛಲವಾದಿ ( ಬಲಗೈ ) ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಆದ್ದರಿಂದ ಈ 6 ಜನರಲ್ಲಿ ಶ್ರೀ ನೆಹರು ಚ ಓಲೇಕಾರರು 3 ಮೂರು ಶಾಸಕರಾಗಿ ಮತ್ತು 2 ಬಾರಿ ಕರ್ನಾಟಕ ರಾಜ್ಯ ಎಸ್ ಸಿ , ಎಸ್ ಟಿ ಆಯೋಗದ ಅಧ್ಯಕ್ಷರಾಗಿ ಹಾಗೂ ರಾಜ್ಯ ಮಟ್ಟದ ಇತರೆ ಪ್ರಾಧಿಕಾರಗಳ ಅಧ್ಯಕ್ಷರು / ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ನೆಹರು ಚ ಓಲೇಕಾರರು ಹಿರಿಯ ಅನುಭವವುಳ್ಳ ಹಾಗೂ ಸಚಿವ ಸ್ಥಾನ ಹೊಂದುವ ಎಲ್ಲಾ ಅರ್ಹತೆಯನ್ನು ಹೊಂದಿರುವ ರಾಜಕಾರಣಿಯಾಗಿರುತ್ತಾರೆ ಅಲ್ಲದೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಪಡೆಯುವವರಲ್ಲಿ ಸದ್ರಿ ಶಾಸಕರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿರುತ್ತದೆ ಆದರೆ ನಂತರದ ಬೆಳವಣಿಗೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡದೇ ಕಡೆಗಣಿಸಿರುತ್ತೀರಿ ಆದರೆ ಮುಂದಿನ ಸಚಿವ ಸಂಪುಟದ ವಿಸ್ತರಣೆಯಲ್ಲಾದರೂ ಸಚಿವ ಸ್ಥಾನ ನೀಡಲಾಗುವದೆಂಬುವ ಆಶಾಭಾವನೆಯಲ್ಲಿದ್ದ ಛಲವಾದಿ ಸಮಾಜಕ್ಕೆ ಹಾಗೂ ಶಾಸಕರಾದ ನೆಹರೂ ಓಲೇಕಾರರಿಗೆ ಡಾ, ಬಾಬು ಜಗ ಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನ ನೀಡಿರುವುದು ಮೂಗಿಗೆ ತುಪ್ಪ ಸವರುವ ತಂತ್ರವಾಗಿದ್ದು ಇದರಿಂದ ರಾಜ್ಯಾದ್ಯಂತ ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸಲು ಅಸಾಧ್ಯವಾಗಿದ್ದಲ್ಲದೆ ಹಿರಿಯ ರಾಜಕಾರಣಿ ಹಾಗೂ ಪಕ್ಷದ ನಿಷ್ಠಾವಂತ ನಾಯಕನಿಗೆ ಅನ್ಯಾಯ ಮಾಡಿದ್ದಲ್ಲದೇ ರಾಜ್ಯ ಛಲವಾದಿ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ ಆದ್ದರಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ನಾಯಕನ ನಿಷ್ಟತೆಯನ್ನು ಮತ್ತು ಅನುಭವವನ್ನು ಪರಿಗಣಿಸಿ ರಾಜ್ಯದಲ್ಲಿ ಅತಿ ಹಿಂದುಳಿದ ಛಲವಾದಿ ಸಮಾಜದ ಪ್ರಗತಿಗಾಗಿ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ನಿಗಮ ಬಿಡಿಎ ಅಥವಾ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನ ಹಾವೇರಿ ಶಾಸಕ ಶ್ರೀ ನೆಹರು ಚ ಓಲೇಕಾರ ರವರಿಗೆ ನೀಡಬೇಕು ಕಡೆಗಣಿಸಿದಲ್ಲಿ ರಾಜ್ಯಾದ್ಯಾಂತ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಉಘ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿ ಮಾನ್ಯ ಬಿ.ಎಸ್.ಯಡಿಯೂರಪ್ಪ , ಮಾನ್ಯ ಶ್ರೀ ಜೆ.ಪಿ.ನಡ್ಡಾ ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪನವರುಪತ್ರಿಕಾ ಪ್ರಕಟಣೆ ಮುಖಾಂತರ ಒತ್ತಾಯಿಸಿದರು,

LEAVE A REPLY

Please enter your comment!
Please enter your name here