ಛೋಟಾ ಮುಂಬೈಗೂ ನಶೆ ಲೋಕದ ನಂಟು: ರಾಗಿಣಿ ಮೊಬೈಲ್ ನಲ್ಲಿದ್ದ ಫೋಟೋ ಹೇಳಿದ್ದೇನು.?

0

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುತ್ತಿದೆ. ಸಿಸಿಬಿ ವಶದಲ್ಲಿರುವ ತುಪ್ಪದ ಬೆಡಗಿ ನಟಿ ರಾಗಿಣಿ ಮೊಬೈಲ್ ನಿಂದ ಹಲವಾರು ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಗೂ ಛೋಟಾ ಮುಂಬೈ ಹುಬ್ಬಳ್ಳಿಗೂ ಲಿಂಕಿದೆ ಎಂಬ ಸಂಗತಿ ಇದೀಗ ಬಯಲಾಗಿದೆ. ಗೋವಾದಲ್ಲಿ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಜತೆ ನಟಿ ರಾಗಿಣಿ ದ್ವಿವೇದಿ ಇರುವ ಫೋಟೋಗಳು ರಾಗಿಣಿ ಮೊಬೈಲ್ ನಲ್ಲಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ್ ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಅಲ್ಲದೇ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಗಿರೀಶ್ ಗದಿಗೆಪ್ಪಗೌಡರ ಮನೆಯನ್ನು ತಪಾಸಣೆ ನಡೆಸಿರುವ ಸಿಸಿಬಿ ಪೊಲೀಸರು ಹಲವು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಗಿರೀಶ್, ಗೋವಾದಲ್ಲಿ ಕ್ಯಾಸಿನೋ ಟೇಬಲ್ ನ್ನು ಖರೀದಿಸಿದ್ದು, ಇಲ್ಲಿ ನಡೆಯುವ ಕ್ಯಾಸಿನೋ ಪಾರ್ಟಿಗೂ ಸ್ಯಾಂಡಲ್ ವುಡ್ ನಟಿ ರಾಗಿಣಿಗೂ ಲಿಂಕಿದೆ ಎನ್ನಲಾಗುತ್ತಿದೆ. ಒಟ್ಟಾರೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಹಾಗೂ ಕಾಂಗ್ರೆಸ್ ಮುಖಂಡನ ವಿಚಾರಣೆಯಿಂದ ಇನ್ನಷ್ಟು ಮಾಹಿತಿಗಳು ಬಯಲಾಗಬೇಕಿದೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here