ನಿಪ್ಪಾಣಿ
“ಜನರ ಸೇವೆಗಾಗಿ ತಾಲೂಕು ಪಂಚಾಯತ್ ನ ನೂತನ ಕಾರ್ಯಾಲಯ ಉದ್ಘಾಟನೆ”
ನಿಪ್ಪಾಣಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಭಾರತರತ್ನ ದಿ. ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯ ನಿಮಿತ್ತ ಭಾವಚಿತ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಪೂಜೆ ಪುಷ್ಪ ನಮನ ಸಲ್ಲಿಸಿದ ಬಳಿಕ ತಾಲೂಕು ಪಂಚಾಯತ್ ನ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜಿ ಅವರ ನೇತೃತ್ವದಲ್ಲಿ 2009ರಲ್ಲಿ ನಿಪ್ಪಾಣಿ ತಾಲೂಕಾಗಿ ಘೋಷಣೆಯಾಯಿತು.
ನಂತರ ಬೇರೆ ಸರ್ಕಾರವು ಅಧಿಕಾರದ ಗದ್ದುಗೆಗೇರಿದ ಮೇಲೆ ತಾಲ್ಲೂಕಿನ ವಿಷಯ ಹಾಗೆಯೇ ಉಳಿದುಕೊಂಡಿತು. ನಂತರ ಸತತ ಪ್ರಯತ್ನ ಹಾಗೂ ಒತ್ತಾಯಗಳಿಗೆ ಮಣಿದ ಸರಕಾರವು ನಿಪ್ಪಾಣಿಯನ್ನು ಘೋಷಿಸಿತು. ಅದರ ಫಲವಾಗಿ ಇಂದು ತಾಲೂಕು ಪಂಚಾಯತ್ ನ ನೂತನ ಕಾರ್ಯಾಲಯ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಕೃಷಿ ನಿರ್ದೇಶಕರಾದ ಶ್ರೀ ಮಂಜುನಾಥ ಜನಮಟ್ಟಿ,ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸಮೀರ ಮುಲ್ಲಾ, ಶ್ರೀ ಮಲ್ಲಿಕಾರ್ಜುನ ಉಳಾಗಡ್ಡಿ, ಪೌರಾಯುಕ್ತರಾದ ಶ್ರೀ ಮಹಾವೀರ ಬೋರಣ್ಣವರ, ಸಿಡಿಪಿಓ ಶ್ರೀಮತಿ ಸುಮಿತ್ರಾ ಡಿ. ಬಿ., ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಸಿದ್ದು ನರಾಟೆ, ಶ್ರೀಮತಿ ಸುಮಿತ್ರಾ ಉಗಳೆ, ಬಿಇಓ ಶ್ರೀಮತಿ ರೇವತಿ ಮಠದ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೋಟಿವಾಲೆ, ಉಪಾಧ್ಯಕ್ಷರಾದ ಶ್ರೀ ಎಂ.ಪಿ ಪಾಟೀಲ, ನಿರ್ದೇಶಕರಾದ ಶ್ರೀ ಪಪ್ಪು ಪಾಟೀಲ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
निपाणी
“जनसेवेसाठी तालुका पंचायतीचे नवीन कार्यालयाचे उद्घाटन”
निपाणी येथे राष्ट्रपिता महात्मा गांधीजी आणि भारताचे माजी प्रधानमंत्री लाल बहादूर शास्त्रीजी, यांच्या जयंती निमित्ताने त्यांच्या प्रतिमेला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी पुष्पहार अर्पण केल्यानंतर तालुका पंचायतीच्या नवीन कार्यालयाचे उद्घाटन करून, कार्यक्रमास उद्देशून संबोधित केले.
श्री बी.एस. येडियुरप्पा जी, आणि माजी मुख्यमंत्री श्री जगदीश शेट्टर जी, यांच्या नेतृत्वात 2009 मध्ये निपाणी तालुक म्हणून घोषणा केली होती. नंतर दुसऱ्या सरकाराचे सत्ता आल्यानंतर तालुक्याचा विषय तसाच राहिला होता. नंतर सातत्याने अनेक प्रयत्न व मागण्यांनंतर सरकारने निपाणी तालुक्याची घोषणा केली. याचा परिणाम म्हणून आज तालुका पंचायतीच्या नवीन कार्यालयाचे उद्घाटन सोहळा संपन्न झाला.
यावेळी कृषी संचालक श्री मंजुनाथ जनमट्टी, श्री समीरा मुल्ला, कार्यकारी अधिकारी समीर मुल्ला, श्री मल्लिकार्जुन उळागड्डी, आयुक्त श्री महावीर बोरण्णवर, सीडीपीओ श्रीमती सुमित्रा डी बी, जिल्हा पंचायत सदस्य श्री सिद्दु नराटे, श्रीमती सुमित्रा उगळे, बिईओ श्रीमती रेवती मठद, हालसिद्धनाथ साखर कारखान्याचे अध्यक्ष श्री चंद्रकांत कोटीवाले, उपाध्यक्ष श्री एम पी पाटील, संचालक श्री पप्पु पाटील, व नगरसेवक उपस्थित होते.