“ಜನಸೇವೆಯೇ ನಮ್ಮುಸಿರು, ಕೊವಿಡ್ ವಿರುದ್ಧದ ಹೋರಾಟಕ್ಕಿಂದು ನಮ್ಮದೇ ಕೊವಿಡ್ ಆಸ್ಪತ್ರೆ “

0

ನಿಪ್ಪಾಣಿ
ನಿಪ್ಪಾಣಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಸಿಬಿಎಸಸಿ ಶಾಲೆಯಲ್ಲಿ ಜೊಲ್ಲೆ ಉದ್ಯೋಗ ಸಮೂಹ, ಆಯುಷ್ಮಾನ್ ಭಾರತ್, ಸುವರ್ಣ ಕರ್ನಾಟಕ ಮತ್ತು ನಿಪ್ಪಾಣಿ ಪರಿಸರದಲ್ಲಿರುವ ಎಲ್ಲಾ ಖಾಸಗಿ ವೈದ್ಯರು ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕರೋನ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ನಿರ್ಮಿಸಲಾದ ಕೊವಿಡ್ ಆಸ್ಪತ್ರೆಯನ್ನು ಚಿಕ್ಕೋಡಿಯ ಚರಮೂರ್ತಿ ಮಠದ ಪ.ಪೂ.ಶ್ರೀ ಸಂಪಾದನ ಮಹಾಸ್ವಾಮಿಗಳು, ಚಿಂಚಣಿಯ ಸಿದ್ಧಸಂಸ್ಥಾನ ಮಠದ ಪ.ಪೂ.ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು.

ಈ ಆಸ್ಪತ್ರೆಯು 16 ಮಾನಿಟರ್ ಗಳನ್ನೊಳಗೊಂಡ ಸುಸಜ್ಜಿತ ಕೇಂದ್ರೀಕೃತ ಆಕ್ಸಿಜನ್ ಬೆಡ್ ಹಾಗೂ ಚಿಕಿತ್ಸೆಗಾಗಿ 24 ಬೆಡ್ ಗಳನ್ನೊಳಗೊಂಡಂತೆ, ಒಟ್ಟು 40 ಬೆಡ್ ಗಳನ್ನು ಹೊಂದಿದೆ. ಇಲ್ಲಿ ಸೊಂಕಿರಿಗೆ ಬೇಕಾಗುವ ಎಲ್ಲಾ ರೀತಿಯ ಚಿಕಿತ್ಸೆ, ಪೌಷ್ಟಿಕ ಆಹಾರ, ಅತ್ಯುತ್ತಮ ವಸತಿ, ಪೇಷೆಂಟ್ ಕಿಟ್, ಕುಡಿಯಲು ಹಾಗೂ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಗಳನ್ನು ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಮಾಡಲಾಗಿದೆ. ಹಾಗೆಯೇ, ನಿಸ್ವಾರ್ಥರಾಗಿ ಕೊವಿಡ್ ಚಿಕಿತ್ಸೆಗೆ ಮುಂದಾಗಲಿರುವ ಎಲ್ಲಾ ಸ್ಥಳೀಯ ವೈದ್ಯರಿಗೆ ಹಾಗೂ ಈ ಆಸ್ಪತ್ರೆ ನಿರ್ಮಿಸಲು ಸರ್ವ ಸಹಕಾರ ನೀಡಿರುವ ಎಲ್ಲ ಸ್ಥಳೀಯ ಸಂಘ ಸಂಸ್ಥೆಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಆಯುಷ್ಮಾನ ಭಾರತದ ರೀಜಿನಲ್ ಅಧಿಕಾರಿಗಳಾದ ಶ್ರೀ ವೆಂಕಣ್ಣ ಡಂಗಿ, ಜಿಲ್ಲಾಧಿಕಾರಿಗಳದ ಶ್ರೀ ಎಂ. ಜಿ. ಹಿರೇಮಠ, ಉಪವಿಭಾಗಧಿಕಾರಿಗಳಾದ ಶ್ರೀ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ಶ್ರೀ ದರ್ಶನ ಎಚ್.ವಿ, ಎಡಿಎಚ್ಓ ಶ್ರೀಮತಿ ಶೈಲಜಾ ತಮ್ಮನ್ನವರ,ತಾಲೂಕು ವೈದ್ಯಾಧಿಕಾರಿಗಳಾದ ಡಾ. ವಿಠ್ಠಲ ಶಿಂಧೆ, ತಹಶಿಲ್ದಾರರಾದ ಶ್ರೀ ಪ್ರಕಾಶ್ ಗಾಯಕವಾಡ, ಶ್ರೀ ಸುಭಾಷ ಸಂಪಗಾವಿ, ಪೌರಾಯುಕ್ತರಾದ ಶ್ರೀ ಮಹಾವೀರ ಬೋರಣ್ಣವರ, ಡಿವೈಎಸ್ಪಿ ಶ್ರೀ ಮನೋಜಕುಮಾರ ನಾಯಿಕ,ಸಿಪಿಐ ಶ್ರೀ ಸಂತೋಷ ಸತ್ಯನಾಯಿಕ, ವೈದ್ಯಾಧಿಕಾರಿಗಳಾದ ಡಾ. ಸೀಮಾ ಗುಂಜ್ಯಾಳೆ, ವೈದ್ಯಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

निपाणी
“जनसेवा हीच ईश्वर सेवा मानून कोविड विरुद्ध लढण्यासाठी आमचे स्वतःचे कोविड रुग्णालय”

निपाणी येथील जोल्ले उद्योग समूहाच्या सीबीएससी शाळेत जोल्ले उद्योग समूह, आयुष्मान भारत, सुवर्ण कर्नाटक, निपाणी परिसरातील सर्व खासगी डॉक्टर आणि विविध संस्थांच्या सहकार्याने कोरोना रूग्णांच्या उपचारांसाठी निर्माण केलेल्या कोविड हॉस्पिटल चिक्कोडी चरमूर्ती मठाचे प.पू.श्री संपादन महास्वामीजी, चिंचणी सिद्धसंस्थान मठाचे प.पू.श्री अलमप्रभु महास्वामीजींच्या दिव्य सानिध्यात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी व आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले यांनी उद्घाटन केले.

या रुग्णालयात एकूण 40 बेड असून ज्यात 16 मॉनिटर आधारित सुसज्ज ऑक्सिजन बेड आणि उपचारांसाठी 24 बेड आहेत. येथे रुग्णांसाठी आवश्यक सर्व प्रकारचे उपचार, पौष्टिक भोजन, उत्कृष्ट निवासस्थान, रुग्ण किट, पिणे आणि आंघोळीसाठी गरम पाण्याची व्यवस्था जोल्ले समूहाकडून केली गेली आहे. तसेच नि: स्वार्थपणे कोविड उपचार देण्यासाठी पुढे आलेल्या सर्व स्थानिक डॉक्टरांचे आणि या रुग्णालयाच्या उभारणीस हातभार लावलेल्या सर्व स्थानिक संघ संस्थांचे आभार मानले.

यावेळी आयुष्मान भारतचे प्रादेशिक अधिकारी श्री वेंकण्ण डंगी, जिल्हाधिकारी श्री एम.जी हिरेमठ, प्रांताधिकारी श्री रवींद्र करिलिंगण्णवर, जिल्हा पंचायतचे मुख्य कार्यकारी अधिकारी, श्री दर्शन एच.वी, एडीएचओ श्रीमती शैलजा तम्मण्णवर, तालुका वैद्यकीय अधिकारी डॉ. विठ्ठल शिंदे, तहसीलदार श्री प्रकाश गायकवाड, श्री सुभाष संपगावी, आयुक्त श्री महावीर बोरण्णवर, डीवायएसपी श्री मनोजकुमार नायक, सीपीआय श्री संतोष सत्यनायक, डॉक्टर सीमा गुंज्याळे, डॉक्टर्स आणि इतर अधिकारी उपस्थित होते

LEAVE A REPLY

Please enter your comment!
Please enter your name here