ಜನ್ಮಾಷ್ಟಮಿಯಂದು ಹುಟ್ಟಿದ ಮಗನಿಗೆ ಕೃಷ್ಣ ಎಂದು ಹೆಸರಿಟ್ಟ ಮುಸ್ಲಿಂ ವ್ಯಕ್ತಿ; ಯಾರೆಷ್ಟೇ ವಿರೋಧಿಸಿದರೂ ಬದಲಿಸಲಿಲ್ಲ

0

ಇಲ್ಲೋರ್ವ ಮುಸ್ಲಿಂ ವ್ಯಕ್ತಿ 12 ವರ್ಷಗಳ ಹಿಂದೆ ಶ್ರೀಕೃಷ್ಣಜನ್ಮಾಷ್ಟಮಿಯಂದು ಮಾಡಿದ ಒಂದು ಕೆಲಸ ಇದೀಗ ಸುದ್ದಿಯಾಗಿದೆ. ಇದೊಂದು ಕೋಮು ಸೌಹಾರ್ದಯುತವಾದ ಕಾರ್ಯವಾಗಿದ್ದು, ಹೃದಯಸ್ಪರ್ಶಿಯೂ ಹೌದು…ಮಾದರಿಯೂ ಹೌದು.
ಮಧ್ಯಪ್ರದೇಶದ ಅಝೀಜ್​ ಖಾನ್​ ಅವರಿಗೆ 12 ವರ್ಷದ ಮಗರ್ನೋ ಇದ್ದಾನೆ. ಅವರ ಹೆಸರು ಕೃಷ್ಣಾ ಎಂದು. ಈ ಬಗ್ಗೆ ಅಝೀಜ್ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

2008ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದೇ ನನಗೆ ಮಗ ಹುಟ್ಟಿದ. ಹಾಗಾಗಿ ಅವನಿಗೆ ಕೃಷ್ಣ ಎಂದು ಹೆಸರಿಟ್ಟೆ. ಇದಕ್ಕೆ ಮೊದಮೊದಲು ನನ್ನ ಕುಟುಂಬದವರು ತೀವ್ರವಾಗಿ ವಿರೋಧಿಸಿದರು. ಆದರೆ ಬರಬರುತ್ತ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಅಝೀಜ್ ಖಾನ್​ ತಿಳಿಸಿದ್ದಾರೆ.

ಅಂದು ಆಗಸ್ಟ್​ 23. ನನಗೆ ಮಗ ಹುಟ್ಟಿದ. ಅವತ್ತು ಹಿಂದುಗಳು ಜನ್ಮಾಷ್ಟಮಿ ಸಂಭ್ರಮದಲ್ಲಿದ್ದರು. ನನಗೆ ಮಗು ಹುಟ್ಟಿದ ತಕ್ಷಣವೇ ನಾನು ಕೃಷ್ಣ ಎಂದು ಹೆಸರಿಟ್ಟುಬಿಟ್ಟೆ. ನನ್ನ ಅಮ್ಮ ಆ ಹೆಸರು ಬೇಡ, ಕಾಫಿರ್​ ಎಂದು ನಾಮಕರಣ ಮಾಡೋಣ ಎಂದರು. ಆದರೆ ತಂದೆಯಾಗಿ ನನಗೆ ಮಗನಿಗೆ ಯಾವುದೇ ಹೆಸರನ್ನಾದರೂ ಇಡುವ ಸಂಪೂರ್ಣ ಹಕ್ಕು ಇದೆ. ನಾನು ಕೃಷ್ಣ ಎಂಬ ಹೆಸರನ್ನು ಇವತ್ತಿನವರೆಗೆ ಬದಲಿಸಲಿಲ್ಲ ಎಂದು ಅಝೀಜ್​ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here