ಜಮ್ಮು-ಕಾಶ್ಮೀರದ ವಿಚಾರ ಈಗ ಔಟ್‍ಡೇಟೆಡ್ : ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿವಾದ

0

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯ ಭಾರತ-ಪಾಕಿಸ್ತಾನದ ಕಾರ್ಯಸೂಚಿಯಲ್ಲಿ ಇನ್ನು ಜಮ್ಮು-ಕಾಶ್ಮೀರದ ವಿಚಾರ ಮುಂದುವರಿಸಬೇಕಾಗಿಲ್ಲ. ಅದು ಈಗ ಔಟ್‍ಡೇಟೆಡ್ ಆಗಿದೆ. ಅಂತಹ ತರ್ಕಬಾಹಿರ ವಿಷಯಗಳು ಘನತೆವೆತ್ತ ಜಗತ್ತಿಗೆ ಅವಶ್ಯಕತೆ ಇಲ್ಲ. ಅದು ದ್ವಿಪಕ್ಷೀಯ ವಿಚಾರವಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿದೆ.

ಸೆಕ್ಯುರಿಟಿ ಕೌನ್ಸಿಲ್‍ನ ವಾರ್ಷಿಕ ವರದಿಗಾಗಿ ಯೋಜನೆ ರೂಪಿಸುವವರ್ಚುವಲ್ ಸಭೆಯಲ್ಲಿ ಪಾಕಿಸ್ತಾನದ ಯುಎನ್ ಪ್ರತಿನಿಧಿ ಮುನೀರ್ ಅಕ್ರಮ್ ಜಮ್ಮು-ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಲ್ಲದೆ ಈ ವಿಚಾರ ಮೂರು ಸಲ ಪ್ರಸ್ತಾಪವಾದರೂ ಕೌನ್ಸಿಲ್ ತನ್ನ ನಿರ್ಧಾರಗಳನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ಆಪಾದನೆ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಭಾರತದ ಪ್ರತಿನಿಧಿ ನೀಡಿದ ಪ್ರತಿಕ್ರಿಯೆ ತೀಕ್ಷ್ಣವಾಗಿತ್ತು. ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಭಾರತ, ಅಂತಾರಾಷ್ಟ್ರೀಯ ಶಾಂತಿಗೆ ತಾವೂ ಕೊಡುಗೆ ನೀಡುತ್ತಿದ್ದೇವೆ ಎನ್ನುತ್ತ ತಮ್ಮನ್ನು ರೀಬ್ರ್ಯಾಂಡ್ ಮಾಡಿಕೊಳ್ಳುವ ಪ್ರಯತ್ನವನ್ನು ಕೆಲವು ರಾಷ್ಟ್ರಗಳು ಮಾಡುತ್ತಲೇ ಇವೆ.

ದುರದೃಷ್ಟ ಎಂದರೆ ಆ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆಯ ಕಾರಂಜಿ ಮತ್ತು ಟೆರರ್ ಸಿಂಡಿಕೇಟ್‍ಗೆ ತವರು ಎಂಬುದು ಜಗತ್ತಿಗೇ ಗೊತ್ತಿದೆ ಎಂಬುದು ಅವುಗಳಿಗೆ ಇನ್ನೂ ಅರ್ಥವಾಗಿಲ್ಲ.

# ಅಜೆಂಡಾ ಸೇರಿದ್ದು ಹೀಗೆ:

ಭಾರತ-ಪಾಕಿಸ್ತಾನ ಕ್ವಶ್ಚನ್ ಎಂಬ ವಿಷಯ ಹೊಂದಿದ ಯುಎನ್‍ಎಸ್ಸಿ ಅಜೆಂಡಾಕ್ಕೆ ಜಮ್ಮು-ಕಾಶ್ಮೀರದ ವಿಚಾರ 1948ರ ಜನವರಿ 6ರ ಔಪಚಾರಿಕ ಸಭೆಯಲ್ಲಿ ಮೊಟ್ಟ ಮೊದಲ ಬಾರಿ ಸೇರಿಸಲ್ಪಟ್ಟಿತ್ತು. ಅಂದು ಪಾಕಿಸ್ತಾನದ ಬೆಂಬಲಕ್ಕೆ ನಿಂತದ್ದು ಅದರ ಸಾರ್ವಕಾಲಿಕ ಮಿತ್ರ ಚೀನಾ. ಅಲ್ಲಿಂದೀಚೆಗೆ ಕೆಲವು ಬಾರಿ ಚರ್ಚಿಸಲ್ಪಟ್ಟ ಈ ವಿಚಾರ 1965ರ ನವೆಂಬರ್ 5ರಂದು ಕೊನೆಯ ಬಾರಿ ಪರಿಗಣಿಸಲ್ಪಟ್ಟಿತ್ತು.

ಕಳೆದ ವರ್ಷ ಆಗಸ್ಟ್ 16ರಂದು ಜಮ್ಮು-ಕಾಶ್ಮೀರದ ವಿಚಾರದ ಸಮಾಲೋಚನೆಗಳನ್ನು ಕೌನ್ಸಿಲ್ ಮುಗಿಸಿತ್ತು. ಈ ವರ್ಷ ಜನವರಿಯಲ್ಲಿ ಪಾಕಿಸ್ತಾನದ ಪರವಾಗಿ ಚೀನಾ ಮತ್ತೆ ಕಾಶ್ಮೀರದ ವಿಚಾರವನ್ನು ಇತರೆ ವಿಷಯಗಳ ಅಧೀನ ಪ್ರಸ್ತಾಪಿಸಲು ಮುಂದಾಗಿತ್ತು.

ಇದು ಕ್ಲೋಸ್ಡ್ ಡೋರ್ ಮೀಟಿಂಗ್‍ನಲ್ಲಿ ಆಗಿರುವ ವಿಚಾರವಾಗಿದ್ದು ಚೀನಾ ಮಾತ್ರವೇ ಪಾಕಿಸ್ತಾನದ ಪರವಾಗಿ ನಿಂತು ಕಾಶ್ಮೀರದ ವಿಚಾರ ಪ್ರತಿಪಾದನೆ ಮಾಡಿತ್ತು.

LEAVE A REPLY

Please enter your comment!
Please enter your name here