ಜರ್ಮನ್​ ಹಂದಿ ಮಾಂಸ ಆಮದು ನಿಷೇಧಿಸಿದ ಚೀನಾ.; ಕಾರಣ ಈ ವೈರಸ್​ ಭಯ

0

ಜಗತ್ತಿಗೇ ಕರೊನಾ ವೈರಸ್​ ಹಬ್ಬಲು ಕಾರಣವಾದ ಚೀನಾ ದೇಶ ಇದೀಗ ಮತ್ತೊಂದು ವೈರಸ್ ನೆಪವೊಡ್ಡಿ ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಹಂದಿ ಉತ್ಪನ್ನಗಳನ್ನು ನಿಷೇಧಿಸಿದೆ.
ನಮ್ಮಲ್ಲಿ ಆಫ್ರಿಕನ್​ ಹಂದಿ ಜ್ವರ ಕಾಣಿಸಿಕೊಂಡಿದೆ. ಕಾಡಾನೆಗಳಲ್ಲಿ ಪ್ರಕರಣ ಪತ್ತೆಯಾಗಿದೆ ಎಂದು ಕಳೆದವಾರ ಜರ್ಮನಿ ಹೇಳಿತ್ತು. ಇದೇ ಕಾರಣಕ್ಕೆ, ಬಹುದೊಡ್ಡ ಪ್ರಮಾಣದಲ್ಲಿ ಚೀನಾದಿಂದ ಹಂದಿ ಮಾಂಸವನ್ನು ಆಮದು ಮಾಡಿಕೊಳ್ಳುತ್ತಿದ್ದ ಚೀನಾ ಅದನ್ನು ನಿಲ್ಲಿಸಿದೆ.

ಜರ್ಮನಿಯ ಹಂದಿ ಮಾಂಸ, ಉತ್ಪನ್ನಗಳನ್ನು ನಿಷೇಧಿಸಿದ್ದಾಗಿ ಚೀನಾದ ಕೃಷಿ ಸಚಿವಾಲಯ ಮತ್ತು ಕಸ್ಟಮ್ಸ್​ ಏಜೆನ್ಸಿ ಘೋಷಣೆ ಮಾಡಿವೆ.

ಜಗತ್ತಿನಲ್ಲಿ ಹಂದಿ ಮಾಂಸ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾಕ್ಕೆ ಮೊದಲ ಸ್ಥಾನ. ಈ ದೇಶ ಜರ್ಮನಿ, ಯುಎಸ್​, ಸ್ಪೇನ್​, ಕೆನಡಾ ಮತ್ತು ಬ್ರೆಜಿಲ್​​ಗಳಿಂದ ಆಮದು ಮಾಡಿಕೊಳ್ಳುತ್ತದೆ. ಜರ್ಮನಿಯ ಹಂದಿ ಮಾಂಸ ನಿಷೇಧಿಸಿದ್ದರಿಂದ ಉಳಿದ ರಾಷ್ಟ್ರಗಳಿಗೆ ಅನುಕೂಲವಾಗಲಿದೆ.

2020ರ ಜನವರಿಯಿಂದ ಏಪ್ರಿಲ್​​ವರೆಗೆ ಜರ್ಮನಿ ಸುಮಾರು,424 ಮಿಲಿಯನ್​ ಯುರೋ ಮೌಲ್ಯದ 1,58,000 ಟನ್​​ಗಳಷ್ಟು ಹಂದಿ ಮಾಂಸವನ್ನು ಚೀನಾಕ್ಕೆ ರಫ್ತು ಮಾಡಿದೆ. ಈಗ ಏಕಾಏಕಿ ನಿಷೇಧ ವಿಧಿಸಿದ್ದನ್ನು ಜರ್ಮನ್​ ವಿರೋಧಿಸುತ್ತಿದೆ. ಅಲ್ಲಿನ ಹಂದಿ ಸಾಕಣೆ ರೈತರು ಚೀನಾದ ಕ್ರಮವನ್ನು ಖಂಡಿಸುತ್ತಿದ್ದಾರೆ. (ಏಜೆನ್ಸೀಸ್)

LEAVE A REPLY

Please enter your comment!
Please enter your name here