ಜಲಮಂಡಳಿ ಕಿಯೋಸ್ಕ್ ನಿಂದ 2.94 ಲಕ್ಷ ರೂ.ನಾಪತ್ತೆ, ಕ್ಯಾಷಿಯರ್ ಅಮಾನತು

0

ಸಾರ್ವಜನಿಕರು ಕಟ್ಟಿದ್ದ 2 ಲಕ್ಷ 94 ಸಾವಿರ ರೂಪಾಯಿ ಕಿಯೋಸ್ಕ್ ನಿಂದ ನಾಪತ್ತೆಯಾದ ಬಳಿಕ ಬನಶಂಕರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ನನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಮಾನತು ಮಾಡಿದೆ.

ಈ ಸಂಬಂಧ ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಕೂಡಾ ದಾಖಲಾಗಿದೆ. ಕ್ಯಾಷಿಯರ್ ಲಕ್ಷ್ಮೀಪುತ್ರ ನಿಂಗಪ್ಪ ನನ್ನು ಕಳೆದ ವರ್ಷವಷ್ಟೇ ಬನಶಂಕರಿಯ ಬನಗಿರಿ ಕಚೇರಿಗೆ ನಿಯೋಜಿಸಲಾಗಿತ್ತು.

ಸೆಪ್ಟೆಂಬರ್ 28 ರಂದು ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೀರಿನ ಬಿಲ್ ಮತ್ತು ನಗದನ್ನು ಲೆಕ್ಕ ಹಾಕುವಾಗ 2 ಲಕ್ಷದ 94 ಸಾವಿರದ 60 ರೂಪಾಯಿ ನಾಪತ್ತೆಯಾಗಿರುವುದು ಕಂಡುಬಂದಿತ್ತು ಎಂದು ಮಂಡಳಿ ಮುಖ್ಯಸ್ಥ ಎನ್. ಜಯರಾಮ್ ಹೇಳಿದ್ದಾರೆ.

ಕ್ಯಾಷಿಯರ್ ಶಂಕಿತ ಚಟುವಟಿಕೆಗಳ ಬಗ್ಗೆ ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾನೆ. ಆತನ ಮನೆಯಲ್ಲಿ ವಿಚಾರಣೆ ನಡೆಸಿದ್ದೇವೆ. ಕಿಯೋಸ್ಕ್ ನಲ್ಲಿನ ಹಣದ ಬಗ್ಗೆ ಸಿಬ್ಬಂದಿಯೇ ಸಂಪೂರ್ಣ ಹೊಣೆಯಾಗಿರುತ್ತಾರೆ. ಈ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಬೆಂಗಳೂರಿನಾದ್ಯಂತ ಬಿಡಬ್ಲ್ಯೂಎಸ್ ಎಸ್ ಬಿಯ 74 ಕಿಯೋಸ್ಕ್ ಗಳಿವೆ. ಕಚೇರಿ ಅವಧಿ ಮುಗಿದರೂ ಇದರ ಮೂಲಕ ಸಾರ್ವಜನಿಕರು ಶುಲ್ಕವನ್ನು ಕಟ್ಟಬಹುದಾಗಿದೆ.

ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ

LEAVE A REPLY

Please enter your comment!
Please enter your name here