ಜಾತಿ ಧರ್ಮ ನೋಡದೆ ಅಂತ್ಯಕ್ರಿಯೆ ನಡೆಸುತ್ತಿರುವ ಕಾರ್ಯಕರ್ತರು | ಬಾಗಲಕೋಟೆ ಜಿಲ್ಲೆಯ ಜಮಖಂಡಿ ಯಲ್ಲಿ ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ |

0

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಯಲ್ಲಿ ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಜನರು ಮೃತ ಶವಗಳಿಂದಲೂ ಕೊರೊನಾ ಹರಡಬಹುದು ಎಂಬ ಮೂಢನಂಬಿಕೆಗೆ ಒಳಗಾಗಿ ತಮ್ಮ ಪ್ರದೇಶದ ಬಳಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡದ ಘಟನೆಗಳು ಜರುಗುತ್ತಿವೆ.

ಜಾತಿ ಧರ್ಮ ನೋಡದೆ ಅಂತ್ಯಕ್ರಿಯೆ ನಡೆಸುತ್ತಿರುವ ಪಿಎಫ್‌ಐ ಕಾರ್ಯಕರ್ತರು.

ಮೃತ ವ್ಯಕ್ತಿಯ ಕುಟುಂಬಸ್ಥರೇ ಶವ ಸಂಸ್ಕಾರಕ್ಕೆ ಹೆದರುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾ ಸೋಂಕಿತ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರೂ ಮೃತದೇಹದೊಂದಿಗೆ ನಡೆಯುತ್ತಿರುವ ಅಮಾನವೀಯ ರೀತಿ ಇನ್ನೂ ಕಡಿಮೆಯಾಗಿಲ್ಲ.

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಹೆದರದೆ ಪಿಎಫ್‌ಐ ಕಾರ್ಯಕರ್ತರು ಕೆಲವು ದಿನಗಳ ಹಿಂದೆ ಜಮಖಂಡಿ ನಗರದ ಆಲಗೂರ ಆರ್.ಸಿ ಹತ್ತಿರ ಅನಾಥ ಶವದ ಅಂತ್ಯಸಂಸ್ಕಾರ ನೆರವೇರಿಸಿದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು.
ಮೃತಪಟ್ಟವರ ಸಂಪ್ರಾದಾಯಕ್ಕೆ ತಕ್ಕಂತೆ, ಘನತಯಿಂದ, ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ನಿಸ್ವಾರ್ಥ ಮನುಷ್ಯರಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಜನ ಹೆದರುತ್ತಿರುವುದನ್ನು ಅರಿತ ಪಿಎಫ್‌ಐ ಮತ್ತು ನಗರಸಭೆಯ ಪರವಾನಿಗೆ ಪಡೆದು ಇದುವರೆಗೂ ಕೋವಿಡ್‌ನಿಂದ ಹಾಗೂ ಸಾಮಾನ್ಯವಾಗಿ ಮೃತಪಟ್ಟ 8 ಕಿಂತ ಹೆಚ್ಚು ಅಂತ್ಯಸಂಸ್ಕಾರ ಮಾಡಿದ್ದಾರೆ.

ಸಮೀಪದ ವಿಜಯಪೂರ ಜಿಲ್ಲೆಯಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಕಾರಣಕ್ಕೆ ಮತ್ತು ಸಾಮಾನ್ಯ ಮೃತಪಟ್ಟ ವ್ಯಕ್ತಿಯಗಳ ಶವಸಂಸ್ಕಾರ ಮಾಡಲು ಯಾರು ಮುಂದೆ ಬಾರದಿದ್ದಾಗ ಪಿ.ಎಫ್‌.ಐ ಕಾರ್ಯಕರ್ತರು ಶವಸಂಸ್ಕಾರ ಮಾಡುತ್ತಿದ್ದಾರೆ.

ಸರ್ಕಾರ ಕೊರೊನಾದಿಂದ ಮೃತಪಟ್ಟವರನ್ನು ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ಎಂಬ ಮಾರ್ಗಸೂಚಿಗಳನ್ನು ಕೊಟ್ಟಿದ್ದು ಅದರಂತೆಯೇ ನಮ್ಮ ಸ್ವಂತ ಖರ್ಚಿನಲ್ಲಿ ಪಿ.ಪಿ.ಇ ಕಿಟ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಿದ್ದು ಇದೆ. ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಅಂತ್ಯಸಂಸ್ಕಾರ ನೇರವೇರಿಸುತ್ತಿದ್ದೆವೆ ಎಂದು
ತಾಲೂಕಾ ಅಧ್ಯಕ್ಷ ಶ್ರೀ ಅಸ್ಗರ ಅಲಿ ಶೇಖ
ಕಾರ್ಯದರ್ಶಿ: ಶ್ರೀ ಮೋಹಸಿನ ಗಡೇಕರ. ಮಾಧ್ಯಮಕ್ಕೆ ಹೇಳಿಕೆಯನ್ನು ಕೊಟ್ಟರು

ವರದಿಗಾರರು: ಪರಶುರಾಮ ಕಾಂಬ್ಳೆ ಸತೀಶ್ ಧೂಪ್ ಜಮಖಂಡಿ.

LEAVE A REPLY

Please enter your comment!
Please enter your name here