ಜಿಡಿಪಿ ಎಂದರೇನು?

0

#ಜಿಡಿಪಿ_ಎಂದರೇನು?

ಕೀಲಾರದಲ್ಲಿ ನನ್ನ ಹತ್ತಿರ ಒಂದು ಗುಂಟೆ ಜಮೀನು ಇದೆ. ಅದನ್ನೇ ಒಂದು ದೇಶ ಅಂದುಕೊಳ್ಳಿ. ಆ ದೇಶದಲ್ಲಿ ನಾಲ್ಕು ಬಾಳೆಹಣ್ಣು, ನಾಲ್ಕು ಸೌತೆಕಾಯಿ ಬೆಳಿತಿನಿ. ಬಾಳೆಹಣ್ಣು ಮತ್ತು ಸೌತೆಕಾಯಿ ಬೆಲೆ ಒಂದಕ್ಕೆ ಐದು ರೂಪಾಯಿ ಅಂದುಕೊಳ್ಳಿ. ಆಗ

ಜಿಡಿಪಿ = 4 ಬಾಳೆಹಣ್ಣು * 5 ರೂಪಾಯಿ + 4 ಸೌತೆಕಾಯಿ *5 ರೂಪಾಯಿ = 40 ರೂಪಾಯಿ.

ಒಂದು ಗುಂಟೆಯ ಆ ದೇಶ ಸೃಷ್ಟಿಸಿದ ಒಟ್ಟು ಆರ್ಥಿಕ ಮೌಲ್ಯ 40 ರೂಪಾಯಿ ಕಣ್ರಪ್ಪ.

ಸರಳವಾಗಿ ಜಿಡಿಪಿ ಅಂದರೆ ಒಂದು ದೇಶ ಒಟ್ಟಾರೆಯಾಗಿ ಎಷ್ಟು ವಸ್ತುಗಳ ಉತ್ಪಾದನೆ ಮಾಡುತ್ತೆ ಮತ್ತು ಎಷ್ಟು ಸೇವಾ ಕ್ಷೇತ್ರದ ಸೇವೆಯನ್ನು ತನ್ನ ದೇಶದ ಜನರಿಗೆ ಅಥವಾ ಬೇರೆ ದೇಶದ ಜನರಿಗೆ ಒದಗಿಸುತ್ತದೆ ಅನ್ನುವುದರ ಆರ್ಥಿಕ ಮೌಲ್ಯ (ಮೇಲಿನ 40 ರೂಪಾಯಿ ಒಂದು ಉದಾಹರಣೆ) ಕಣ್ರಪ್ಪ.

ಜಿಡಿಪಿ ಇಳಿಮುಖವಾಗುತ್ತಿದೆ ಅನ್ನುವುದರ ಅರ್ಥ ಹೆಚ್ಚೆಚ್ಚು ವಸ್ತುಗಳ ಉತ್ಪಾದನೆ ಆಗುತ್ತಿಲ್ಲ, ಜನರು ಯಾವುದೇ ಸೇವೆಗಳನ್ನು ಬಯಸುತ್ತಿಲ್ಲ ಎಂದರ್ಥ. ಉತ್ಪಾದನೆ ಮತ್ತು ಸೇವೆ ಇಲ್ಲ ಅಂದರೆ ಉದ್ಯೋಗ ಇಲ್ಲ ಅಂತ ಕಣ್ರಪ್ಪ. ದಿನೇ ದಿನೇ ಉತ್ಪಾದನೆ ಇಳಿಮುಖವಾಗುತ್ತಿದ್ದರೆ ನಿರುದ್ಯೋಗ ಹೆಚ್ಚಿ ಜನರಿಗೆ ಕೊಳ್ಳುವ ಆರ್ಥಿಕ ಶಕ್ತಿ ಕಮ್ಮಿ ಆಗುವುದನ್ನೆ ಆರ್ಥಿಕ ಹಿಂಜರಿಕೆ ಅಂತಾರೆ ಕಣ್ರಪ್ಪ.

ಜಿಡಿಪಿಯ ಟೆಕ್ನಿಕಲ್ ವಿವರಣೆಯನ್ನು ಅದಷ್ಟು ಸರಳಗೊಳಿಸಿ ವಿವರಿಸಿದ್ದೇನೆ, ಓದಿ ನಿಮಗೆ ಅರ್ಥವಾದರೆ ತಪ್ಪದೇ ಶೇರ್ ಮಾಡಿ, ವಾಟ್ಸಪ್ ನಲ್ಲಿ ನಿಮ್ಮ ಸ್ನೇಹಿತರಿಗೆ ಮೆಸೇಜ್ ಮಾಡಿ.

– ನಾಗೇಗೌಡ ಕೀಲಾರ ಶಿವಲಿಂಗಯ್ಯ

LEAVE A REPLY

Please enter your comment!
Please enter your name here