ಜಿಲ್ಲಾ ಹಾಗೂ ತಾಲೂಕ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗಿ ದಳ ಸಹಯೋಗದಲ್ಲಿ ವಿಶ್ವ ಹಿಂದೂ ಪರಿಷತ್ ಸಂಸ್ಥಾಪನಾ ದಿನಾಚರಣೆ

0

ಸಿಂದಗಿ: ಜಿಲ್ಲಾ ಹಾಗೂ ತಾಲೂಕ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗಿ ದಳ ಸಹಯೋಗದಲ್ಲಿ ವಿಶ್ವ ಹಿಂದೂ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ನಗರದ ರಾಗರಂಜಿನಿ ಸ್ಟುಡಿಯೋದಲ್ಲಿ ಆಚರಿಸಲಾಯಿತು.

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಮುಂಬೈನ ಸಾಂದೀಪನಿ ಆಶ್ರಮದಲ್ಲಿ 1964 ಆಗಷ್ಟನಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಯಿತು. ನಿರಂತರವಾಗಿ ಎರಡು ದಿನಗಳ ಕಾಲ ಆಶ್ರಮದಲ್ಲಿ ಸಭೆ ನಡೆಸಲಾಯಿತು. ವಿಶ್ವದ ವಿವಿಧ ಭಾಗಗಳಲ್ಲಿರುವ ಹಿಂದುಗಳನ್ನು ಒಂದು ಗುಡಿಸಲೂ ವಿಶ್ವ ಹಿಂದೂ ಪರಿಷತನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಮುತ್ತು ಶಾಬಾದಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತನ್ ಸದಸ್ಯ ಮಲ್ಲು ಪೂಜಾರ ಮಾತನಾಡಿ, ವಿಶ್ವ ಹಿಂದೂ ಪರಿಷತನ್ ಪ್ರಮುಖ ದ್ಯಯೋದ್ಯಶಗಳಲ್ಲಿ ಹಿಂದೂ ಸಮಾಜವನ್ನು ಸಂಘಟಿಸುವುದು, ಧಾರ್ಮಿಕ ತತ್ವ, ಆಚಾರ ವಿಚಾರ, ನೈತಿಕ ಮತ್ತು ಆದ್ಯಾತ್ಮಿಕ ಸಿದ್ಧಾಂತಗಳನ್ನು ವಿಶ್ವಾದ್ಯಂತ ಪಸರಿಸುವುದು ಈ ಸಂಸ್ಥೆಯ ಕಾರ್ಯವಾಗಿದೆ. ಮತ್ತು ಹಿಂದುಗಳಲ್ಲಿನ ವಿವಿಧತೆಯಲ್ಲಿ ಏಕತೆ ತರುವ ಹಾಗೂ ಹಲವು ಜಾತಿಯ ಬೇಲಿಯನ್ನು ಕಿತ್ತು ಹಾಕಿ ನಾವೆಲ್ಲರೂ ಒಂದು ಎನ್ನುವ ಭಾವನೆಯನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಶೈಲ ಯಳಮೇಲಿ, ಅರೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಶಬ್ಬೀರ ಪಟೇಲ್, ಶೇಖರಗೌಡ ಹರನಾಳ, ರಮೇಶ ಬ್ಯಾಕೋಡ, ಯಮನಪ್ಪ ಚೌಧರಿ, ಪಂಡಿತ ಯಂಪುರೆ, ಶ್ರೀಶೈಲಗೌಡ ಬೊಮ್ಮನಜೊಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..

ಇದೇ ಸಂದರ್ಭದಲ್ಲಿ ಅಕ್ಷತಾ ಅಲ್ದಿ ಹಾಗೂ ಪ್ರಹ್ಲಾದ ಜೋಶಿ ಪ್ರಾರ್ಥಿಸಿದರು.

ವರದಿ: ಮಹಾಂತೇಶ ನೂಲಾನವರ,

LEAVE A REPLY

Please enter your comment!
Please enter your name here