ಬಳ್ಳಾರಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಹರಡುತ್ತಿರುವ ಮಹಾಮಾರಿ ಕರೋನಾ ವೈರಸ್ ನಿಯಂತ್ರಿಸಲು ಇನ್ನಷ್ಟು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನ ಕೈಗೊಳ್ಳುವಂತೆ ಹಲವು ಅಂಶಗಳನ್ನೊಳಗೊಂಡ ಬೇಡಿಕೆಗಳನಿಟ್ಟು ಕಠಿಣ ಕ್ರಮ ಜರುಗಿಸುವಂತೆ” ಕಂಪ್ಲಿ ತಹಸೀಲ್ದಾರ್ ಶ್ರೀಮತಿ.ಎಂ.ರೇಣುಕಾ ರವರ ಮುಖಾಂತರ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ರವಾನಿಸುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ವತಿಯಿಂದ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ಮೋಹನ್ ಕುಮಾರ್ ದಾನಪ್ಪ ನೇತೃತ್ವದಲ್ಲಿ ಪ್ರತಿಭಟನಾ ಮನವಿ ಪತ್ರ ಸಲ್ಲಿಸಲಾಯಿತು!
ಗೆ,
ಮಾನ್ಯ ಜಿಲ್ಲಾಧಿಕಾರಿಗಳು
ಬಳ್ಳಾರಿ ರವರಿಗೆ
ಮಾನ್ಯರೇ
ವಿಷಯ : – ಜಿಲ್ಲೆಯಲ್ಲಿ ಎಗ್ಗಿಲ್ಲದೇ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ಪ್ರತಿಭಟನಾ ಮನವಿ
***
ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಪ್ರಪಂಚದ್ಯಾಂತ ಹರಡಿರುವ ಮಹಾಮಾರಿ ಕೋರೋನ ವೈರಸ್ ಎಗ್ಗಿಲ್ಲದೇ ಸಾಗುತ್ತಿದ್ದು ದೇಶದಲ್ಲಿ ಒಂಭತ್ತು ಲಕ್ಷಕ್ಕೂ ಹೆಚ್ಚು ರಾಜ್ಯದಲ್ಲಿ 51 ಸಾವಿರಕ್ಕೂ ಅಧಿಕ ಬಳ್ಳಾರಿ ಜಿಲ್ಲೆಯಲ್ಲಿ 2000 ಜನರಿಗೆ ಕೋವಿಡ್ -19 ಸೋಂಕು ಧೃಡಪಟ್ಟಿದ್ದು ಇದುವರೆಗೂ ಜಿಲ್ಲೆಯಲ್ಲಿ 51 ಜನ ಮೃತಪಟ್ಟಿದ್ದು ಪ್ರತಿ ದಿನ 90 ರಿಂದ 100 ಜನರಿಗೆ ಸೋಂಕು ಧೃಡಪಡುತ್ತಿರುವುದು ಆತಂಕದ ವಿಷಯವಾಗಿರುತ್ತದೆ ಜಿಲ್ಲೆಯ ಜನರು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕುತ್ತಿರುತ್ತಾರೆ, ಹೀಗಿದ್ದರೂ ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳಲ್ಲಿ , ಬಸ್ ಗಳಲ್ಲಿ , ಬೀದಿ ಬದಿಯ ವ್ಯಾಪಾರಸ್ಥರು , ತರಕಾರಿ ಅಂಗಡಿಗಳಲ್ಲಿ ಮತ್ತು ಸರ್ಕಾರಿ ಕಛೇರಿಗಳಲ್ಲಿ ಹಾಗೂ ಇನ್ನಿತರಡೆಯಲ್ಲಿ ಸುರಕ್ಷತಾ ವಿಧಾನಗಳನ್ನು ಬಳಸದೇ ಬೇಜವಾಬ್ದಾರಿತನ ತೋರುತ್ತಿರುವುದರಿಂದ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚುವ ಆಂತಕ ಸೃಷ್ಟಿಯಾಗಿರುತ್ತದೆ ಆದ್ದರಿಂದ ಈ ಕೆಳಕಂಡ ನಮ್ಮ ಬೇಡಿಕೆಗಳನ್ನು
ಬೇಡಿಕೆಗಳು
1 , ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಸ್ಥಳೀಯ ಮತ್ತು ಜಿಲ್ಲೆಯಿಂದ ಜಿಲ್ಲೆಗೆ , ಜಿಲ್ಲೆಯಿಂದ ರಾಜ್ಯ ವ್ಯಾಪ್ತಿಗೆ ಸಂಚರಿಸುವ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ , ಮಾಸ್ಕ್ ಗಳನ್ನು ಧರಿಸದೇ ಇದ್ದರು ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಪ್ರಶ್ನಿಸದೇ ನಿರ್ಲಕ್ಷ್ಯವಹಿಸಿ ಎಗ್ಗಿಲ್ಲದೆ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿರುತ್ತಾರೆ ಆದ್ದರಿಂದ ಕಡ್ಡಾಯವಾಗಿ ಪ್ರತಿ ಪ್ರಯಾಣಿಕ ಮಾಸ್ಕ್ ಹಾಕಿರುವುದನ್ನ ಖಾತ್ರಿ ಪಡಿಸಿಕೊಂಡು ಬಸ್ಸಿನೊಳಗೆ ಪ್ರವೇಶ ನೀಡಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಬೇಕು ಹಾಗೂ ನಿಯಮ ಉಲ್ಲಂಘಿಸಿದ ಚಾಲಕ ಮತ್ತು ನಿರ್ವಾಹಕನ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ,
ಎ ) ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕನ ವಿವರ ಪಡೆಯುತ್ತಿದ್ದು ಸರಿಯಷ್ಟೇ ಆದರೆ ಪ್ರಯಾಣಿಕರು ತಮ್ಮ ವಿವರಗಳನ್ನು ತಪ್ಪಾಗಿ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಆದ್ದರಿಂದ ಇನ್ನು ಮುಂದೆ ಸಾರ್ವಜನಿಕ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು
ಬಿ ) ಬಸ್ಸಿನ ಕೆಲವು ಚಾಲಕರು ಮತ್ತು ನಿರ್ವಾಹಕರು ಬೇಜವಾಬ್ದಾರಿತನದಿಂದ ಮಾಸ್ಕ್ ಧರಿಸದೇ , ಸ್ಯಾನಿಟೈಸರ್ ಬಳಸದೇ ಕಾರ್ಯನಿರ್ವಹಿಸುತ್ತಿರುವುದು ಕಂಟಕದ ವಿಷಯವಾಗಿರುತ್ತದೆ ಆದ್ದರಿಂದ ಚಾಲಕರು ಮತ್ತು ನಿರ್ವಾಹಕರಿಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಹಾಗೂ ಕೈಗಳಿಗೆ ಗ್ಲೋಸ್ ಹಾಕಿಕೊಂಡು ಪ್ರಯಾಣಿಕರೊಂದಿಗೆ ವ್ಯವಹರಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು
ಸಿ ) ಬಸ್ಸಿನ ನಿಗದಿತ ಪ್ರಯಾಣ ತಲುಪಿ ನಂತರದ ಪ್ರಯಾಣ ಮಾಡುವ ಮುಂಚೆ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಬೇಕು
2 , ಬೀದಿ ಬದಿಯ ವ್ಯಾಪಾರಿಗಳಾದ , ಹಣ್ಣು , ತರಕಾರಿ , ಫಾಸ್ಟ್ ಫುಡ್ , ಟೀ ಚಹಾ ಬಂಡಿಗಳಲ್ಲಿ ಹಾಗೂ ಇತರೆ ಎಲ್ಲಾ ಬೀದಿ ಬದಿಯ ವ್ಯಾಪಾರಿಗಳು ಕನಿಷ್ಟ ಸುರಕ್ಷತಾ ವಿಧಾನಗಳನ್ನು ಅನುಸರಿಸದೇ ನಿರ್ಲಕ್ಷ್ಯವಹಿಸುತ್ತಿರುವುದು ಸೋಂಕು ಇನ್ನಷ್ಟು ಬೇಗನೆ ಹರಡಲು ಮುಖ್ಯ ಕಾರಣವಾಗಿರುತ್ತದೆ ಆದ್ದರಿಂದ ಇಂತಹ ವ್ಯಾಪಾರಿಗಳ ವಿರುದ್ಧ ಗರಿಷ್ಟ ಮಟ್ಟದ ದಂಡ ವಿಧಿಸಬೇಕು ಹಾಗೂ ಕಡ್ಡಾಯವಾಗಿ ಮಾಸ್ಟ್ , ಕೈಗವಸು ( ಹ್ಯಾಂಡ್ ಗೌಸ್ ) ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಸಿ ಮುಚ್ಚಳಿಕೆ ಬರೆಸಿಕೊಳ್ಳಬೇಕು ಹಾಗೂ ನಿಯಮ ಮೀರಿದರೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ -2005 ರಡಿಯಲ್ಲಿ ಹಾಗೂ ಭಾರತ ದಂಡ ಸಂಹಿತೆಯ ಕಲಂ -269 ರಡಿಯಲ್ಲಿ ಕ್ರಿಮಿನಲ್ ಮೊಕದ್ದೊಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು
3 , ದಿನಸಿ ಅಂಗಡಿ , ಬೇಕರಿ , ತಂಪು ಪಾನೀಯ , ಹೋಟೆಲ್ ಗಳಲ್ಲಿ ಉಪಹಾರ (ಖಾನಾವಳಿ) ಗೃಹಗಳಲ್ಲಿ . ಬಟ್ಟೆ , ಜುವೇಲ್ಲರಿ , ಫ್ಯಾನ್ಸಿ ಸ್ಟೋರ್ , ಔಷದ ಅಂಗಡಿಗಳಲ್ಲಿ , ಜೆರಾಕ್ಸ್ ಹಾಗೂ ಇನ್ನಿತರ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಅಂಗಡಿಗಳ ಮಾಲೀಕರು ಹಾಗೂ ವಿತರಣೆದಾರರು , ನಿರ್ವಹಣೆದಾರರು ಕನಿಷ್ಟ ಪಕ್ಷ ಮಾಸ್ಕ್ ಧರಿಸದೇ ನಾಮಾಕಾವಸ್ಥೆಗೆ “ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶ” ಎಂದು ಹಾಕಿಕೊಂಡಿದ್ದು ಸಾರ್ವಜನಿಕರು ಮಾಸ್ಕ್ ಧರಿಸದಿದ್ದರು ವ್ಯಾಪಾರ ದೃಷ್ಟಿಯಿಂದ ಪ್ರಶ್ನಿಸದೇ ಹಾಗೂ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಸೋಂಕು ವ್ಯಾಪಿಸುತ್ತಿರುವುದಕ್ಕೆ ಮೂಲ ಕಾರಣವಾಗಿರುತ್ತದೆ ಆದ್ದರಿಂದ ಪ್ರತಿ ಅಂಗಡಿ ಮುಂಗಟ್ಟುಗಳ ಮಾಲೀಕರಿಂದ ಹಾಗೂ ನಿರ್ವಹಣೆಗಾರರಿಂದ ಕಡ್ಡಾಯವಾಗಿ ಸುರಕ್ಷತಾ ವಿಧಾನಗಳನ್ನು ಅನುಸರಿಸುವುದಾಗಿ ಮುಚ್ಚಳಿಕೆ ಬರೆಯಿಸಿಕೊಳ್ಳಬೇಕು ಹಾಗೂ ನಿಯಮ ಮೀರಿದ ಅಂಗಡಿ ಮಾಲೀಕರ ವಿರುದ್ದ ಸುಮಾರು 10 ಸಾವಿರ ರೂಪಾಯಿವರೆಗೂ ದಂಡ ವಿಧಿಸಬೇಕು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ -2005 ರಡಿಯಲ್ಲಿ ಹಾಗೂ ಭಾರತ ದಂಡ ಸಂಹಿತೆಯ ಕಲಂ -269 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ರಾಜ್ಯದಲ್ಲಿ ಕೋರೋನಾ ಸೋಂಕು ಸಂಪೂರ್ಣ ನಿಯಂತ್ರಣ ಬರುವವರೆಗೂ ಉದ್ಯಮ ಪರವಾನಿಗೆ ರದ್ದುಪಡಿಸಿ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು
4 , ಸಾರ್ವಜನಿಕರು ಸಂಚಾರಕ್ಕೆ ಬಳಸುವ ಖಾಸಗಿ ಆಟೋ , ಟ್ಯಾಕ್ಸಿ ಕಾರು ಗಳಲ್ಲಿ ಸುರಕ್ಷತಾ ವಿಧಾನಗಳನ್ನು ಬಳಸದೇ ನಿರ್ಲಕ್ಷ್ಯವಹಿಸುತ್ತಿದ್ದು ಕೇವಲ ಪೊಲೀಸರು ಹಾಗೂ ದಂಡ ವಿಧಿಸುವ ಪ್ರಾಧಿಕಾರದ ಅಧಿಕಾರಿಗಳು ಕಂಡಾಗ ಮಾತ್ರ ಮಾಸ್ಕ್ ಧರಿಸುವ ಚಾಳಿಯಲ್ಲಿ ತೊಡಗಿಕೊಂಡಿರುತ್ತಾರೆ , ಗಾಡಿಗಳಲ್ಲಿ ಯಾವುದೇ ಸ್ಯಾನಿಟೈಜ್ ಮಾಡದೇ ಇರುವುದು ಪ್ರಯಾಣಿಕರಿಗೆ ಕಂಟಕವಾಗಿರುತ್ತದೇ ಆದ್ದರಿಂದ ಪ್ರತಿ ಆಟೋ , ಟ್ಯಾಕ್ಸಿ ಕಾರ್ ಗಳಲ್ಲಿ ಡ್ರೈವರ್ಗಳಿಗೂ ಪ್ರಯಾಣಿಕರಿಗೂ ಸ್ಪರ್ಶವಾಗದಂತೆ ಮಧ್ಯ ಭಾಗದಲ್ಲಿ ಪಾರದರ್ಶಕದಿಂದ ಕೂಡಿರುವ ಪ್ಲಾಸ್ಟಿಕ್ ಕವರ್ ಅಥವಾ ಗ್ಲಾಸ್ನ್ನು ಅಳವಡಿಸಿಕೊಳ್ಳುವಂತೆ ಹಾಗೂ ಪ್ರತಿ ಪ್ರಯಾಣಿಕನ ಪ್ರಯಾಣ ಮುಗಿದ ನಂತರ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವಂತೆ, ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಹಾಗೂ ನಿಯಮ ಮೀರುವ ವಾಹನ ಚಾಲಕರ ಮತ್ತು ಮಾಲೀಕರ ವಾಹನ ಪರವಾನಿಗೆಯನ್ನು ರದ್ದು ಪಡಿಸಬೇಕು ಹಾಗೂ ವಾಹನವನ್ನು ಸೀಜ್ ಮಾಡಬೇಕು
5 , ಪ್ರಸ್ತುತ ಪುರಸಭೆ,ನಗರಸಭೆ , ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಸ್ಕ್ ಹಾಕದೇ ಇರುವವರನ್ನು ಗುರುತಿಸಿ ದಂಡ ವಿಧಿಸುತ್ತಿರುತ್ತಾರೆ ಆದರೆ ಅಧಿಕಾರಿಗಳು ಹೆಚ್ಚಿನ ಕ್ರಮ ಕೈಗೊಳ್ಳದೆ ನಿರ್ಲಕ್ಷತನದಿಂದ ಬೆರಳೆಣಿಕೆ ಸಂಖ್ಯೆಯ ಜನರಿಗೆ ಮಾತ್ರ ದಂಡ ವಿಧಿಸುತ್ತಿದ್ದು ಇದು ಹೆಚ್ಚಿನ ಪರಿಣಾಮಕಾರಿಯಾಗಿರುವುದಿಲ್ಲಾ ಆದ್ದರಿಂದ ಇನ್ನಷ್ಟು ಅಧಿಕಾರಿಗಳನ್ನು ನೇಮಿಸಿ ಸುರಕ್ಷತಾ ವಿಧಾನಗಳನ್ನ ಅನುಸರಿಸದೇ ಇರುವವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು
6 , ಸರ್ಕಾರಿ ಕಛೇರಿಗಳು , ಬ್ಯಾಂಕ್ ಗಳಲ್ಲಿ , ಸಾಮಾಜಿಕ ಅಂತರವನ್ನು ಪಾಲಿಸುವುದು , ಮಾಸ್ಕ್ ಧರಿಸುವಂತೆ ಕೇವಲ ನೋಟಿಸ್ ಬೋರ್ಡ್ಗಳಲ್ಲಿ ಅಂಟಿಸಿರುವ ಪತ್ರಗಳು ನೋಡಬಹುದಾಗಿದ್ದು ಅಧಿಕಾರಿ ಸಿಬ್ಬಂದಿಗಳು ಯಾವುದೇ ಸುರಕ್ಷತಾ ವಿಧಾನ ಬಳಸುತ್ತಿರುವುದಿಲ್ಲಾ ಹಾಗೂ ಅನ್ಯ ಕಾರ್ಯದ ಮೇಲೆ ಕಛೇರಿ ಹಾಗೂ ಬ್ಯಾಂಕ್ಗಳಿಗೆ ಬರುವ ಸಾರ್ವಜನಿಕರು ಸಾಮಾಜಿಕ ಅಂತರ ಅನುಸರಿಸದೇ ಮಾಸ್ಕ್ ಧರಿಸದೇ ಪ್ರವೇಶಿದರು ಸಾರ್ವಜನಿಕರಿಗೆ ಕನಿಷ್ಟ ಪಕ್ಷ ಸುರಕ್ಷತಾ ವಿಧಾನಗಳನ್ನು ಧರೀಸುವಂತೆಯು ಜಾಗೃತಿ ಮೂಡಿಸದೇ ಇರುವುದು ಅಧಿಕಾರಿ ಸಿಬ್ಬಂದಿಗಳ ಬೇಜಾಬ್ದಾರಿತನವಾಗಿರುತ್ತದೆ ಆದ್ದರಿಂದ ಸರ್ಕಾರದ ಎಲ್ಲಾ ಕಛೇರಿಗಳ ಹಾಗೂ ಬ್ಯಾಂಕ್ಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಬೇಕು ನಿಯಮ ಮೀರುವ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು
ಈ ನಮ್ಮ ಬೇಡಿಕೆಗಳನ್ನು ಪುರಸ್ಕರಿಸಿ ಅಗತ್ಯ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಈ ಪ್ರತಿಭಟನಾ ಮನವಿ ಮೂಲಕ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಆಗ್ರಹಿಸಲಾಗಿದೆ.
ಅಪಾರ ಗೌರವ ವಂದನೆಗಳೊಂದಿಗೆ
ಇಂತಿ ವಿಶ್ವಾಸಿಗಳು
-ಮೊಹನ್ ಕುಮಾರ್ ದಾನಪ್ಪ
ವಕೀಲರು & ಜಿಲ್ಲಾ ಗೌರವಾಧ್ಯಕ್ಷರು
ಭಾರತೀಯ ದಲಿತ ಪ್ಯಾಂಥರ್
ಜಿಲ್ಲಾ ಘಟಕ-ಬಳ್ಳಾರಿ