ಜೀವದ ಹಂಗು ತೊರೆದು ಸಮಾಜದ ಹಿತ ಕಾಪಾಡಲು ಹಗಲಿರುಳು ದುಡಿಯುತ್ತಿರುವ ಶ್ರಮಿಕರಿಗೆ ಸಹಾಯಹಸ್ತ!

0

ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮಹದಾಸೆಯಿಂದ ಬೋರಗಾಂವ ಪಟ್ಟಣದಲ್ಲಿ, ಕೊರೋನಾ ಸಾಂಕ್ರಾಮಿಕ ವೈರಸ್ ಪರಿಹಾರಾರ್ಥವಾಗಿ, “ಜೊಲ್ಲೆ ಉದ್ಯೋಗ ಸಮೂಹ”ದ ವತಿಯಿಂದ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ಅನುಪಸ್ಥಿತಿಯಲ್ಲಿ ಜನಪ್ರತಿನಿಧಿಗಳು, ಊರಿನ ಹಿರಿಯರು, ಮಹಿಳೆಯರು ಒಡಗೂಡಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಕೊಡೆಗಳನ್ನು ವಿತರಿಸಿದರು.

ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ಕಾಲಿಟ್ಟಿಗಿನಿಂದ ಇಲ್ಲಿಯವರೆಗೆ, ವೈರಸ್ ಕುರಿತು ಜಾಗೃತಿ ಹಾಗೂ ಸಾರ್ವಜನಿಕರ ಹಿತಕ್ಕಾಗಿ, ಇಂತಹ ಭಯದ ವಾತಾವರಣದಲ್ಲಿಯೂ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹೋದರಿಯರು ಹಾಗೂ ಮೇಲ್ವಿಚಾರಕಿಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಸಂಕಷ್ಟದ ಸಂದರ್ಭದಲ್ಲಿ ಅವರ ಸಾಮಾಜಿಕ ಸೇವೆ ಸ್ಮರಣೀಯವಾದದ್ದು.

LEAVE A REPLY

Please enter your comment!
Please enter your name here