ಜೂ.13ರ ರಾತ್ರಿ ನಡೆದ ಒಂದು ಘಟನೆಯನ್ನು ಈಗ ಬಿಚ್ಚಿಟ್ಟ ಸುಶಾಂತ್​ ಸಿಂಗ್​ ನೆರೆಮನೆಯವರು.

0

ನಟ ಸುಶಾಂತ್​ ಸಿಂಗ್​ ಸಾವಿನ ತನಿಖೆಯನ್ನು ಸುಪ್ರಿಂಕೋರ್ಟ್ ಸಿಬಿಐಗೆ ವಹಿಸಿದೆ. ಸಿಬಿಐ ಅಧಿಕಾರಿಗಳು ಕೂಡ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಆದರೂ ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಪ್ರತಿದಿನ, ಒಬ್ಬೊಬ್ಬರು ಒಂದು ರೀತಿಯ ಹೇಳಿಕೆ ನೀಡುತ್ತಿರುವುದು ಪ್ರಕರಣದ ಆಳವನ್ನು ತೋರಿಸುತ್ತಿದೆ.

ಇದೀಗ ಈ ಕೇಸ್​​ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ನಟ ಸುಶಾಂತ್​ ಸಿಂಗ್​ ಮೃತಪಟ್ಟ ದಿನ (ಜೂನ್​ 14)ದ ಮುನ್ನಾದಿನ ಅಂದರೆ ಜೂನ್​ 13ರಂದು ಅವರ ಮನೆಯಲ್ಲಿ ಏನೋ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವಂತೆ ಭಾಸವಾಗಿತ್ತು ಎಂದು ಸುಶಾಂತ್​ ನಿವಾಸದ ಪಕ್ಕದ ಮನೆಯವರು ಹೇಳಿಕೆ ನೀಡಿದ್ದಾರೆ

ಜೂ.13ರಂದು ರಾತ್ರಿ ಬಹುಬೇಗನೇ ಅಂದರೆ 10.30ರಿಂದ 10.45ರ ಸಮಯದಲ್ಲಿ ಸುಶಾಂತ್​ ಮನೆಯ ಎಲ್ಲ ಲೈಟ್​​ಗಳೂ ಅಸಹಜ ರೀತಿಯಲ್ಲಿ ಆಫ್ ಆಗಿದ್ದವು. ಆದರೆ ಅಡುಗೆಕೋಣೆಯ ಲೈಟ್​ ಹಾಗೇ ಉರಿಯುತ್ತಿತ್ತು. ಹಾಗಂತ ಅಂದು ಅವರ ನಿವಾಸದಲ್ಲಿ ಯಾವುದೇ ಪಾರ್ಟಿ ನಡೆಯುತ್ತಿರಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ

ಸುಶಾಂತ್​ ಸಾವಿನ ನಂತರ ಮನೆಯನ್ನೆಲ್ಲ ಪರಿಶೀಲಿಸಿ, ಕಾನೂನು ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ ಪೊಲೀಸರು ಅದರ ಮಾಲೀಕರ ವಶಕ್ಕೆ ನೀಡಿದ್ದಾರೆ. ಮನೆಯಲ್ಲಿದ್ದ ಸುಶಾಂತ್​ ವಸ್ತುಗಳನ್ನೆಲ್ಲ ಅವರ ಕುಟುಂಬದವರು ತೆಗೆದುಕೊಂಡು ಹೋಗಿದ್ದಾರೆ. ಇದೀಗ ಮಾಲೀಕ ಮನೆಯನ್ನು ಪೂರ್ತಿಯಾಗಿ ಪರಿಷ್ಕರಿಸಿದ್ದಾರೆ. ಹಳೇ ಫರ್ನೀಚರ್​​ಗಳನ್ನೆಲ್ಲ ಬದಲಿಸಿ, ಅನೇಕ ಮಾರ್ಪಾಡು ಮಾಡಿದ್ದಾರೆ ಎಂದು ಮೂಲಗಳು ತಿಳಿದಿವೆ.

LEAVE A REPLY

Please enter your comment!
Please enter your name here