ಟಿಪ್ಪು ಗೈಝ್ ಗೋಳಿಕಟ್ಟೆ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘಟನೆಯ ಅಧ್ಯಕ್ಷ ಅಶ್ರಫ್ ಪಾಲ್ತೋಡಿ ಧ್ವಜಾರೋಹಣ ಗೈಯ್ಯುವ ಮೂಲಕ ಗೋಳಿಕಟ್ಟೆಯಲ್ಲಿರುವ ಸಂಘಟನೆ ಕಛೇರಿ ಮುಂಭಾಗದಲ್ಲಿ ಆಚರಿಸಲಾಯಿತು.
ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 92% ಅಂಕ ಪಡೆದು ಕನ್ಯಾನ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದು ಸಂಘಟನೆಗೂ,ಊರಿಗೂ ಕೀರ್ತಿ ತಂದುಕೊಟ್ಟ ಬಾತಿಶ್ ಪಾಲ್ತೋಡಿ ಅವರಿಗೆ ಸಂಘಟನೆ ವತಿಯಿಂದ ಕಿರು ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ಯಾನ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ , ಮಾಜಿ ಸದಸ್ಯರಾದ ಮಜೀದ್ ಚೆಡವು, ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ MK ಕುಂಞಿ ಹಾಜಿ ,ಧಾರ್ಮಿಕ ನೇತಾರರಾದ ಕಾದರ್ ಸಅದಿ ,ಕೆ.ಎಂ ಅಶ್ರಫ್ ಸಖಾಫಿ,ಅಝೀಝ್ ಮದನಿ, ಟಿಪ್ಪು ಗೈಝ್ ಗೌರವಾಧ್ಯಕ್ಷರಾದ ಮಹ್ಮೂದ್ ಮಡಕುಂಜ, ಮುಹಮ್ಮದ್ ಹಾಜಿ ಬಂಡಿತ್ತಡ್ಕ ,ಸುಲೈಮಾನ್ ಪಾಲ್ತೋಡಿ ,ಇಸ್ಮಾಯಿಲ್ ಪಾಡಿ,ಅಬ್ದುಲ್ಲ ಗೋಳಿಕಟ್ಟೆ, ಪತ್ರಿಕಾ ವರದಿಗಾರ ಗಂಗಾಧರ್ ಕನ್ಯಾನ, ಕೆರೀಂ ಪೆರ್ನಡ್ಕ ಸೇರಿದಂತೆ ಸಂಘಟನೆಯ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.ಕೊನೆಯಲ್ಲಿ ನೆರೆದವರಿಗೆ ಸಿಹಿ ತಿಂಡಿ ಹಂಚಲಾಯಿತು.