ಟಿ20ಐ: ಧೋನಿ ದಾಖಲೆ ಮುರಿದ ಆಸ್ಟ್ರೇಲಿಯಾ ವಿಕೆಟ್ ಕೀಪರ್

0

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುನ್ನಡೆಸುತ್ತಿರುವ ಎಂಎಸ್ ಧೋನಿ ಅವರ ದಾಖಲೆಯನ್ನು ಆಸ್ಟ್ರೇಲಿಯಾದಲ್ಲಿಂದು ಮಹಿಳಾ ಕ್ರಿಕೆಟರ್ ರೊಬ್ಬರು ಮುರಿದಿದ್ದಾರೆ.

ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಅತಿಹೆಚ್ಚು ವಿಕೆಟ್ ಗಳಿಸಿದ ದಾಖಲೆ ಹೊಂದಿದ್ದ ಧೋನಿಯನ್ನು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಅಲಿಸ್ಸಾ ಹೀಲಿ ಹಿಂದಿಕ್ಕಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆದಿರುವ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಆಡುತ್ತಿರುವ ಅಲಿಸಾ ಹೀಲಿ ಅವರು ಈ ದಾಖಲೆ ಬರೆದಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಧೋನಿ ಅವರು 91 ವಿಕೆಟ್ ಗಳಿಸಿದ್ದರು. ಹೀಲಿ ಅವರು ಅಲಾನ್ ಬಾರ್ಡರ್ ಫೀಲ್ಡ್ ಸರಣಿಯಲ್ಲಿಂದು 92ನೇ ವಿಕೆಟ್ ಕಬಳಿಸಿದರು.

ಧೋನಿ ಅವರು ಭಾರತದ ಪರ 98 ಟಿ20ಐ ಪಂದ್ಯಗಳನ್ನಾಡಿ 91 ವಿಕೆಟ್ ಪಡೆದಿದ್ದರೆ, ಅಲಿಸ್ಸಾ ಅವರು ಆಸ್ಟ್ರೇಲಿಯಾದ ಸದರನ್ ಸ್ಟಾರ್ಸ್ ಪರ 114 ಟಿ20ಐ ಪಂದ್ಯಗಳನ್ನಾಡಿ 92 ವಿಕೆಟ್ ಕಬಳಿಸಿದ್ದಾರೆ.

ಆಗಸ್ಟ್ 15ರಂದು ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಪಂದ್ಯಗಳಿಂದ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದು, ವಿಕೆಟ್ ಕೀಪರ್ ಬ್ಯಾಟ್ಸಮನ್ ಹಾಗೂ ನಾಯಕರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿ ಆಡುತ್ತಿರುವ ಹೀಲಿ ಅವರು ಅದೇ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದಾರೆ. ಅಂದ ಹಾಗೆ, ಅಲಿಸ್ಸಾ ಅವರು ವಿಕೆಟ್ ಕೀಪರ್ ಕ್ರಿಕೆಟ್ ವೃತ್ತಿ ಆರಂಭಿಸಲು ಅವರ ಅಂಕಲ್ ಅಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ಇಯಾನ್ ಹೀಲಿ ಕಾರಣ.

LEAVE A REPLY

Please enter your comment!
Please enter your name here