ಡಾ॥ಬಿ.ಆರ್.ಅಂಬೇಡ್ಕರ್‌ ನಿವಾಸ ಭಗ್ನ,ಆರೋಪಿಗಳ ರಾಷ್ಟ್ರಿಯ ಪೌರತ್ವ ರದ್ದುಗೊಳಿಸಿ-ಆಗ್ರಹ

0

ಡಾ॥ಬಿ.ಆರ್.ಅಂಬೇಡ್ಕರ್‌ ನಿವಾಸ ಭಗ್ನ,ಆರೋಪಿಗಳ ರಾಷ್ಟ್ರಿಯ ಪೌರತ್ವ ರದ್ದುಗೊಳಿಸಿ-ಆಗ್ರಹ

<-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ, ಮಹಾರಾಷ್ಟ್ರದಲ್ಲಿರುವ ಡಾ॥ಬಿ.ಆರ್

ಅಂಬೇಡ್ಕರವರ ರಾಜಗೃಹವನ್ನು ದುಷ್ಕಮಿ೯ಗಳು ಭಗ್ನಗೊಳಿಸಿದ್ದಾರೆ.ಖಾನಾಹೊಸಹಳ್ಳಿ ದಲಿತ ಸಂಘಟನೆ

ಪದಾಧಿಕಾರಿಗಳು ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಿಡಿಗೇಡಿಗಳ ರಾಷ್ಟ್ರೀಯ ಪೌರತ್ವ ರದ್ದುಗೊಳಿಸುವಂತೆ

ದಲಿತ ಮುಖಂಡರು ಕೇಂದ್ರ ಸಕಾ೯ರಕ್ಕೆ ಆಗ್ರಹಿಸಿದ್ದಾರೆ.ಈ ಸಂಬಂಧಿಸಿದಂತೆ ಮಹಾರಾಷ್ಟ್ರ ಸಕಾ೯ರ ಕಠಿಣ

ಕ್ರಮವನ್ನು ಕೈಗೊಳ್ಳಬೇಕಿದೆ,ಈ ನಿಟ್ಟಿನಲ್ಲಿ ಕನಾ೯ಟಕ ಸಕಾ೯ರ ಪ್ರಭಾವಬೀರಬೇಕು ಎಂದು ಮುಖ್ಯಮಂತ್ರಿಗಳಿಗೆ

ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.ಮನವಿ ಪತ್ರವನ್ನು ನಾಡಕಚೇರಿಯ ಉಪತಹಶಿಲ್ದಾರರಿಗೆ

ಸಲ್ಲಿಸಲಾಯಿತು.ದಲಿತ ಮುಖಂಡ ಗಂಗಾಧರ, ಬಳ್ಳಾರಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಾರ್ಯಕಾರಣಿ ಸದಸ್ಯ

ತುಂಬ್ರಗುದ್ದಿ ದುರುಗೇಶ, ಈಶ್ವರಪ್ಪ ತಾಲೂಕ್ ಸಂಘಟನೆ ಸಂಚಾಲಕರು ದಲಿತ ಸಂಘರ್ಷ ಸಮಿತಿ.ಡಿ.ಎಂ,

ಎಂ.ಚಂದ್ರಪ್ಪ ಖಾನಹೊಸಹಳ್ಳಿ,ಹೆಚ್. ಹೇಮಂತ ಸಂಚಾಲಕರು, ಹೊಸಹಳ್ಳಿ ಓಬಳೇಶ.ಕೆ

ಟಿ.ಬಸವರಾಜ ಸಂಚಾಲಕರು ದಲಿತ ಸಂಘರ್ಷ ಸಮಿತಿ, ಹೊಸಳ್ಳಿ ಸೂರ್ಯಪ್ರಕಾಶ್ ಕರ್ನಾಟಕ ರಾಜ್ಯ

ವಾಲ್ಮೀಕಿ ವೇದಿಕೆ ಸದಸ್ಯರು ಕಾನಹೊಸಹಳ್ಳಿ,ಜಿ.ಎಲ್ಲಪ್ಪ ಕೊಟ್ಟೂರು ಎಪಿಎಂಸಿ ಉಪ ಅಧ್ಯಕ್ಷರು ಸಿದ್ದಾಪುರ,

ಹೊನ್ನೂರ ಸ್ವಾಮಿ ದಲಿತ ಮುಖಂಡರು,ಕಾನಹೊಸಹಳ್ಳಿ ಲೋಕಿಕೆರೆ ಮಲ್ಲಿಕಾರ್ಜುನ

ಪತ್ರಕರ್ತರು,ಕಾನಹೊಸಹಳ್ಳಿ ವ್ಯಾಪ್ತಿಯ ವಿವಿದ ಭಾಗದ ದಲಿತ ಮುಖಂಡರು,ದಲಿತ ಪರ

ಹೋರಾಟಗಾರರು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.✍️ ವಂದೇ ಮಾತರಂ

ವಿ.ಜಿ.ವೃಷಭೇಂದ್ರ ಕೂಡ್ಲಿಗಿ

LEAVE A REPLY

Please enter your comment!
Please enter your name here