ಡಿವಿಲಿಯರ್ಸ್​ ಸೂಪರ್​ ಮ್ಯಾನ್​ ಕ್ಯಾಚ್​ ಮರುಸೃಷ್ಟಿಸಿ ಸಾಮರ್ಥ್ಯ ಪ್ರದರ್ಶಿಸಿದ ವಿರಾಟ್​!

0

ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕೆ ಇಳಿಯಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಸಿದ್ಧವಾಗಿದೆ. ಕಠಿಣ ತರಬೇತಿಯಲ್ಲಿ ಆರ್​ಸಿಬಿ ತಂಡ ತೊಡಗಿಕೊಂಡಿದ್ದು, ನಾಯಕ ವಿರಾಟ್​ ಕೊಹ್ಲಿ ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್​ ಅವರ ಲೆಂಜೆಂಡರಿ ಸೂಪರ್​ ಮ್ಯಾನ್​ ಕ್ಯಾಚ್​ ಅನ್ನು ಮರುಸೃಷ್ಟಿಸುವ ಮೂಲಕ ಎದುರಾಳಿ ತಂಡಕ್ಕೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಕಳೆದ ಸಂಜೆ ನಡೆದ ತರಬೇತಿ ವೇಳೆ ಕೊಹ್ಲಿ ಅವರು ಲೆಜೆಂಡರಿ ಸೂಪರ್​ ಮ್ಯಾನ್​ ಕ್ಯಾಚ್​ ಅನ್ನು ಮರು ಸೃಷ್ಟಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಆರ್​ಸಿಬಿ ಅಧಿಕೃತ ಖಾತೆಯಲ್ಲಿ ಫೋಟೋ ಪೋಸ್ಟ್​ ಮಾಡಲಾಗಿದೆ. ಚಿತ್ರದಲ್ಲಿ ಒಂದು ಕಡೆ ಎಬಿಡಿ ಮತ್ತೊಂದು ಕಡೆ ಕೊಹ್ಲಿ ಕ್ಯಾಚ್​ ಹಿಡಿಯುತ್ತಿರುವ ದೃಶ್ಯವಿದೆ. ಸದ್ಯ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

LEAVE A REPLY

Please enter your comment!
Please enter your name here