ಡಿ ಎಮ್ ಕುರ್ಕೆ ಚೆಕ್ ಡ್ಯಾಮ್ ಗೆ ಶಾಸಕ ಕೆ ಎಂ ಶಿ ರವರಿಂದ ಭಾಗಿನ ಅರ್ಪಣೆ

0

ಡಿ ಎಮ್ ಕುರ್ಕೆ ಚೆಕ್ ಡ್ಯಾಮ್ ಗೆ ಶಾಸಕ ಕೆ ಎಂ ಶಿ ರವರಿಂದ ಭಾಗಿನ ಅರ್ಪಣೆ

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಮೊದಲಿನಿಂದಲೂ ಈ ಭಾಗದಲ್ಲಿ ಮಳೆ ಇಲ್ಲದೆ ಕೆರೆ ಕಟ್ಟೆ ಹಳ್ಳ ಗಳಲ್ಲಿ ನೀರಿಲ್ಲದೆ ಭರಿದಾಗಿತ್ತು,ಈ ವರ್ಷ ಈ ಭಾಗದಲ್ಲಿ ಅಭೂತಪೂರ್ವ ಮಳೆ ಹಾಗೆ ಬೆಳೆಯು ಉತ್ತಮವಾಗಿದೆ,ಕಣಕಟ್ಟೆ ಹೋಬಳಿಯ ಡಿ.ಎಂ.ಕುರ್ಕೆ ಗ್ರಾಮದ ಬಳಿ ಸುಮಾರು 50 ಲಕ್ಷ ವೆಚ್ಚದಲ್ಲಿ ಹಿರೇಹಳ್ಳಕ್ಕೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದು , ಚೆಕ್ ಡ್ಯಾಂ ಭರ್ತಿಯಾಗಿದ್ದು ಇಂದು ಅರಸೀಕೆರೆ ಶಾಸಕರಾದ ಶ್ರೀ ಕೆ ಎಂ ಶಿವಲಿಂಗೇಗೌಡ ರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಕೂಗಳತೆ ದೂರದಲ್ಲಿರುವ ಚೆಕ್ ಡ್ಯಾಮ್ ಗೆ ಸ್ಥಳೀಯ ಕಾರ್ಯಕರ್ತರೊಂದಿಗೆ ಬಾಗಿನ ಅರ್ಪಿಸಿದರು. ಎ.ಪಿ.ಎಂ.ಸಿ ಸದಸ್ಯ ಹರಳಕಟ್ಟ ಶಶಿಕುಮಾರ್, ಮುಖಂಡರಾದ ಡಿ.ಎಂ.ಕುರ್ಕೆ ಸುರೇಶ, ಹಿರಿಸಾದರಹಳ್ಳಿ , ಷಡಾಕ್ಷರಿ, ಗ್ರಾಮಸ್ಥರು, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರವೀಶ್ ಉಪಸ್ಥಿತಿಯಲ್ಲಿದ್ದರು

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here