ಡೊನಾಲ್ಡ್ ಟ್ರಂಪ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಿರುವ ಟಿಕ್‌ಟಾಕ್‌

0

ತಮ್ಮ ಮೂಲ ಕಂಪನಿ ಬೈಟ್ ಡ್ಯಾನ್ಸ್ ನೊಂದಿಗಿನ ವ್ಯವಹಾರಗಳನ್ನು ನಿಷೇಧಿಸಿದ ಕಾರ್ಯಕಾರಿ ಆದೇಶ ಹೊರಡಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸುವುದಾಗಿ ಚೀನಾ ಮೂಲದ ವಿಡಿಯೋ ಹಂಚಿಕೆ ಮಾಡುವ ಆಯಪ್ ಟಿಕ್ಟಾಕ್ ತಿಳಿಸಿದೆ.

ಮುಂದಿನ ವಾರದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೈಟ್ ಡ್ಯಾನ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನಮ್ಮ ಕಂಪನಿ ಮತ್ತು ಬಳಕೆದಾರರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯಕಾರಿ ಆದೇಶವನ್ನು ಪ್ರಶ್ನಿಸದೆ ಬೇರೆ ಆಯ್ಕೆಯಿಲ್ಲ ಎಂದು ಟಿಕ್ಟಾಕ್ ವಕ್ತಾರರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಟಿಕ್ಟಾಕ್ ಮತ್ತು ವೀಚಾಟ್ ಕಂಪನಿಗಳು ತಮ್ಮ ಷೇರುಗಳನ್ನು ಸೆ.15ರೊಳಗೆ ಅಮೆರಿಕ ಮೂಲದ ಕಂಪನಿಗಳಿಗೆ ಮಾರಾಟ ಮಾಡದಿದ್ದಲ್ಲಿ ಅವುಗಳನ್ನು ನಿಷೇಧಿಸುವುದಾಗಿ ಟ್ರಂಪ್ ಬೆದರಿಕೆಯೊಡ್ಡಿದ್ದರು.

ಬೈಟ್ ಡ್ಯಾನ್ಸ್ ಸದ್ಯ ಮೈಕ್ರೋಸಾಫ್ಟ್ ಮತ್ತು ಓರಾಕಲ್ ನಡುವೆ ಮಾತುಕತೆ ನಡೆಸುತ್ತಿದೆ.

LEAVE A REPLY

Please enter your comment!
Please enter your name here