ಡ್ರಗ್ ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಇಂದ್ರಜಿತ್ ಲಂಕೇಶ್

0

ಡ್ರಗ್ಸ್ ದಂಧೆಯಲ್ಲಿ ಕೇವಲ ಇಬ್ಬರು ಮಾತ್ರ ನಟಿಯರಿದ್ದಾರಾ, ಬೇರೆ ಯಾರೂ ಇಲ್ವಾ? ಇಬ್ಬರು ನಟಿಯರು ಬಿಟ್ಟರೆ ಯಾಕೆ ಇದುವರೆಗೂ ಯಾವ ನಟ, ನಿರ್ದೇಶಕರ ಮಕ್ಕಳನ್ನು, ರಾಜಕಾರಣಿಗಳ ಮಕ್ಕಳನ್ನು ಬಂಧಿಸಿಲ್ಲ ಅಥವಾ ವಿಚಾರಣೆಗೆ ಕರೆದಿಲ್ಲ ಎಂಬ ಅನುಮಾನ ಕಾಡುವುದು ಸಹಜ. ಇದೇ ಅನುಮಾನವನ್ನು ಇಂದ್ರಜಿತ್ ಲಂಕೇಶ್ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ವಿಚಾರದಲ್ಲಿ ವಿರುದ್ಧವಾಗಿ ಧ್ವನಿ ಎತ್ತಿದ್ದ ಇಂದ್ರಜಿತ್ ಲಂಕೇಶ್ ಆರಂಭದಿಂದಲೇ ಚಿತ್ರರಂಗದ ಕೆಲವು ಸ್ಟಾರ್‌ಗಳು, ಹಿರಿಯ ನಿರ್ದೇಶಕರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಇವೆಂಟ್ ಆಯೋಜಕರು ಭಾಗಿಯಾಗಿದ್ದಾರೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದ್ರೆ, ಈ ಕೇಸ್‌ ಗಂಭೀರವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಇಂದ್ರಜಿತ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ….

ಸುಮ್ಮನೆ ವಿಚಾರಣೆ ಆಗ್ತಿದೆ ಅಷ್ಟೇ

ಪೊಲೀಸರು ಕೆಲಸ ಮಾಡುತ್ತಿದ್ದರೂ ಅವರ ಕೈಕಟ್ಟಿ ಹಾಕಿರುವಂತೆ ಕೆಲಸ ಕಾಣ್ತಿದೆ. ಇಬ್ಬರು ನಟಿಯರನ್ನು ಬಿಟ್ಟರೆ ಬೇರೆ ಯಾರನ್ನು ಬಂಧಿಸಿಲ್ಲ, ನಟ-ನಿರ್ದೇಶಕರ ಮಕ್ಕಳು, ರಾಜಕಾರಣಿಗಳ ಮಕ್ಕಳು ಈ ದಂಧೆಯಲ್ಲಿದ್ದಾರೆ. ಆದರೆ, ಬೇರೆ ಹಿಡಿದು ತನಿಖೆ ಮಾಡುವಂತೆ ಕಾಣುತ್ತಿಲ್ಲ. ಸುಮ್ಮನೆ ತನಿಖೆ ಮಾಡ್ತಿದ್ದಾರೆ ಅನಿಸುತ್ತಿದೆ” ಎಂದು ಇಂದ್ರಜಿತ್ ಲಂಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ನಿರ್ದೇಶಕನ ಮಗನನ್ನು ಏಕೆ ವಿಚಾರಣೆಗೆ ಕರೆದಿಲ್ಲ?

”ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಚಿತ್ರ ನಿರ್ದೇಶಕರ ಮಗನನ್ನು ಯಾಕೆ ಇನ್ನೂ ವಿಚಾರಣೆಗೆ ಪೊಲೀಸ್ ಇಲಾಖೆ ಕರೆದಿಲ್ಲ” ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನೆ ಮಾಡಿದ್ದಾರೆ. ಆದ್ರೆ, ಯಾರು ಆ ನಿರ್ದೇಶಕ ಎನ್ನುವುದನ್ನು ಹೇಳಿಲ್ಲ. ಇಂದ್ರಜಿತ್ ಅವರ ಸುಳಿವು ಪಡೆದು ನೋಡಿದರೆ ಹಿರಿಯ ನಿರ್ದೇಶಕರ ಹೆಸರು ಈ ಪ್ರಕರಣದಲ್ಲಿ ತಳುಕು ಹಾಕಿಕೊಳ್ಳುತ್ತಿದೆ.

ರಾಜಕಾರಣಿಯ ಒತ್ತಡ ಇದೆ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಬಲ ರಾಜಕಾರಣಿಗಳು ಸಿಸಿಬಿ ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟುಬಿಡಿ ಎಂದು ಹೇಳುತ್ತಿದ್ದಾರೆ. ಹಾಗಾಗಿ, ಈ ಕೇಸ್‌ ಸರಿಯಾದ ಮಾರ್ಗದಲ್ಲಿ ತನಿಖೆ ಆಗುತ್ತಿಲ್ಲ ಎಂದು ನನಗೆ ಅನಿಸುತ್ತಿದೆ.

ಸಿಬಿಐ ಸೂಕ್ತ ಮಾರ್ಗ!

ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಖಂಡಿತ ಹಲವು ರಾಜಕಾರಣಿಗಳ ಹೆಸರು ಹೊರಗೆ ಬರುತ್ತೆ, ರಾಜಕಾರಣಿಗಳ ಮಕ್ಕಳ ಹೆಸರು ಬರುತ್ತೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಆದ್ರೆ ಅವರ ನಾಯಕರಿಂದಲೇ ತನಿಖೆಗೆ ಅಡ್ಡಗಾಲು ಎದುರಾಗುತ್ತಿದೆ. ಸಿಬಿಐ ತನಿಖೆ ಮಾಡಿದ್ರೆ ಅಸಲಿ ಸತ್ಯ ಹೊರಗೆ ಬರುತ್ತದೆ” ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ.

(ಏಜೆನ್ಸೀಸ್​)

LEAVE A REPLY

Please enter your comment!
Please enter your name here