ತಳವಾರ-ಪರಿವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಪಕ್ಷಾತೀತವಾಗಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

0

ಸಿಂದಗಿ-ತಳವಾರ ಮತ್ತು ಪರಿವಾರ ಸಮಾಜಕ್ಕೆ ಎಸ್ಟಿ ಜಾತಿ ಪ್ರಮಾಣ ಪತ್ರ ನಿಡುವಲ್ಲಿ ಹಿಂದೇಟು ಹಾಕುತ್ತಿರುವ ರಾಜ್ಯ ಅಧಿಕಾರಿಗಳ ವಿರುದ್ದ ಮತ್ತು ಕೂಡಲೇ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಬೃಹತ ಪ್ರಮಾಣದಲ್ಲಿ ಪಕ್ಷಾತೀತವಾಗಿ ಸ್ಥಳಿಯ ಗಾಂಧಿ ವೃತ್ತದಿಂದ ತಹಶೀಲ್ದಾರ ಕಛೇರಿಯ ವರೆಗೆ ಮೌನ ಮೆರವಣಿಗೆ ಮಾಡುವ ಮೂಲಕ ರಕ್ತದಾನ ಚಳುವಳಿಯನ್ನು ಮಾಡಿ ತಹಶೀಲ್ದಾರ ಸಂಜೀವಕುಮಾರ ದಾಸರ ಮೂಲಕ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಶಾಸಕ ಎಮ್.ಸಿ.ಮನಗೂಳಿ ತಳವಾರ ಮತ್ತು ಪರಿವಾರ ಸಮಾಜವನ್ನು ಕೇಂದ್ರ ಸರ್ಕಾರ ಎಸ್ಟಿ ಎಂದು ಪರಿಗಣಿಸಿ ಸರ್ಕಾರದ ಸುತ್ತೋಲೆ ಹೊರಡಿಸಿದೆ ಆದರೆ ರಾಜ್ಯ ಸರ್ಕಾರ ಮತ್ತು ಸಂಭಂಧಿಸಿದ ಅಧಿಕಾರಿ ವರ್ಗ ಆ ಸಮೂದಾಯಕ್ಕೆ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡಲು ಮೀನಾಮೇಷ ತಾಳುತ್ತಿದ್ದಾರೆ ಇದರ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಯಾವ ಕಾರಣಕ್ಕೆ ಇದು ತಡೆಹಿಡಿಯಲಾಗಿದೆ ಎಂಬುದು ಬಹಿರಂಗ ಪಡಿಸಬೇಕು ಈ ಸಮೂದಾಯದ ಹೋರಾಟಕ್ಕೆ ನಾನು ಸದಾ ಬೆಂಬಲ ನೀಡುವುದರ ಜೊತೆಗೆ ಪ್ರಮಾಣ ಪತ್ರಕ್ಕಾಗಿ ಸಿಎಂ ಮನೆಯ ಮುಂದೆಧರಣಿ ಮಾಡಲು ಸಿದ್ದನಾಗಿದ್ದೇನೆ ಎಂದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ತಳವಾರ ಮತ್ತು ಪರಿವಾರ ಸಮೂದಾಯ ಈಗಾಗಲೆ ಎಸ್ಟಿಗೆ ಸೇರಿಸಲಾಗಿದೆ ಆದರೆ ಅಧಿಕಾರಿಗಳ ತಪ್ಪಿನಿಂದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಆಗುವ ತೊಂದರೆ ಬಗ್ಗೆ ಸಂಭಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿ ಮಾಡುತ್ತೇನೆ ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಡಾ.ಶಾಂತವೀರ ಮನಗೂಳಿ, ರಾಜಶೇಖರ ಕೂಚಬಾಳ, ಹಾಸಿಂ ಆಳಂದ ಸೇರಿದಂತೆ 50ಕ್ಕೆ ಅಧಿಕ ಜನರು ರಕ್ತದಾನ ಮಾಡಿದರು.
ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮಲ್ಲು ಘತ್ತರಗಿ ವಕೀಲರು ಮಾತನಾಡಿ, ದೇಶಕ್ಕೆ ಅಗಷ್ಠ 15 ರಂದು ಸ್ವಾತಂತ್ರ ಸಿಕ್ಕಿದ ದಿನ ಆದರೆ ತಳವಾರ ಸಮಾಜಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಆದರಿಂದ ನಾಡೀನ ಜನರಿಗೆ ಉಪಯೋಗವಾಗಲೆಂದು ರಕ್ತದಾನ ಮಾಡುವದರ ಮುಖಾಂತರ ನಾವು ರಕ್ತ ನೀಡುತ್ತೇವೆ ನೀವು ಜ|ಆತಿ ಪ್ರಮಾಣ ಪತ್ರಗಳನನು ನೀಡಿ ಎಂಬ ಸಂದೇಶದೊಂದಿಗೆ ಈ ಸಮಾಜದಿಂದ ರಕ್ತದಲ್ಲಿ ಬರೆದ ಮನವಿ ಪತ್ರಗಳನನು ಕೊವಿಡ್-19 ವೈರಸ್ ಗಣನೆಗೆ ತೆಗೆದುಕೊಂಡು ಮೌನ ಮೆರವಣಿಗೆ ಮೂಲಕ ಶಾಂತಿಯುತವಾಗಿ ಚಳವಳಿ ನಡೆಸಿದ್ದೇವೆ ಮುಂದೆ ಯವ ಸ್ವರೂಪ ಪಡೆಯುತ್ತದೆ ಗೊತ್ತಿಲ್ಲ ಕೂಡಲೇ ಜಾತಿ ಪ್ರಮಾಣ ಪತ್ರ ನೀಡಲು ಮುಂದಾಗಬೇಕು ಇಲ್ಲದಿದ್ದರೆ ಸರಕಾರ ಮತ್ತು ಅದಿಕಾರಿಗಳೆ ನೆರವ ಹೊಣೆಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡ ಅಶೋಕ ಮನಗೂಳಿ, ತಳವಾರ, ಪರಿವಾರ ಸೆವಾ ಸಮಿತಿ ಅದ್ಯಕ್ಷ ಶ್ರೀಶೈಲ ಬೂಯ್ಯಾರ, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಜೆಡಿಎಸ್ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ, ಸಿದ್ದು ಬುಳ್ಳಾ, ಎಪಿಎಂಸಿ ಅಧ್ಯಕ್ಷ ಗೋಲ್ಲಾಳಪ್ಪಗೌಡ ರೂಗಿ, ಪುರಸಭೆಯ ಸದಸ್ಯರಾದ ಬಸವರಾಜ ಯರನಾಳ, ಸಂದೀಪ ಚೌರ, ಪ್ರತಿಭಾ ಕಲ್ಲೂರ, ಹಣಮಂತ ಸುಣಗಾರ ಮಹಾಂತಗೌಡ ಬಿರಾದಾರ, ಮತ್ತು ಈರಗಂಟೇಪ್ಪ ದೇವಣಗಾಂವ, ಮಹೇಶ ಸುಣಗಾರ, ಪ್ರಶಾಂತ ಸುಣಗಾರ, ಶಂಕರ ಬಳೂಂಡಗಿ, ಅನೀಲ ಕಡಕೋಳ, ಸಂತೋಷ ಹರನಾಳ, ಎಂಎಂ.ತಳವಾರ, ಶಂಕರ ಕುರಿ, ಅಂಬ್ರೀಶ ತಳವಾರ, ರೇವಪ್ಪ ಬಿರಾದಾರ, ಮಹಾವೀರ ಸುಲ್ಪಿ ಸೇರಿದಂತೆ ಅನೇಕರು ಇದ್ದರು.

ವರದಿ: ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here