ತಳವಾರ ಸಮಾಜಕ್ಕೆ ಎಸ್.ಟಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯ

0

ಪತ್ರಕಾ ಪ್ರಕಟಣೆಗಾಗಿ: ತಳವಾರ ಸಮಾಜಕ್ಕೆ ಎಸ್.ಟಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯ….

ವಿಜಯಪುರ: ತಳವಾರ ಸಮಾಜಕ್ಕೆ ಎಸ್.ಟಿ.ಪ್ರಮಾಣ ಪತ್ರವನ್ನು ನೀಡುವಂತೆ ಕರ್ನಾಟಕ ಜನಬೆಂಬಲ ವೇದಿಕೆ

ಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಪ್ರಕಾಶ ದ ಕೋಳಿ(ತಳವಾರ ಸಮಾಜದ ಮುಂಖಡರು) ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಕಾ ಪ್ರಕಟಣೆ ನೀಡಿರುವ ಅವರು,ರಾಜ್ಯಾದ್ಯಂತ ತಳವಾರ ಸಮಾಜವು ಆರ್ಥಿಕವಾಗಿ ತೀರಾ

ಹಿಂದುಳಿದಿದ್ದು,ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.ತಳವಾರ ಸಮಾಜವನ್ನು ಅಭಿವೃದ್ಧಿಗೊಳಿಸಲು

ಕೇಂದ್ರ ಸರ್ಕಾರದಿಂದ ತಳವಾರ ಸಮಾಜಕ್ಕೆ ಎಸ್.ಟಿ.ಪ್ರಮಾಣ ಪತ್ರವನ್ನು ನೀಡುವಂತೆ ಆದೇಶ ಹೊರಡಿಸಿದರು

ಸಹ ಪ್ರಮಾಣ ಪತ್ರವನ್ನು ನೀಡದೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ.ನಮ್ಮ

ಬೇಡಿಕೆಯನ್ನು ಈಡೇರಿಸದೆ ನಿರ್ಲಕ್ಷ್ಯ ತೋರಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು

ಪಂಚಾಯಿತಿ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಹಾಗೂ ಜನಪ್ರತಿನಿದಿಗಳ ಧೋರಣೆಯನ್ನು

ಖಂಡಿಸಿ ಪ್ರತಿಭಟಸಲಾಗುವುದು ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here