ತಾಪಂ 16ನೇ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮಹಾನಂದಾ ಸಾಲಕ್ಕಿ ಹಾಗೂ ಉಪಾದ್ಯಕ್ಷ ಸಂಜೀವಕುಮಾರ ಯಂಟಮಾನ ಜಂಟಿಯಾಗಿ ನಡೆಸಿದರು.

0

 

ಸಿಂದಗಿ; ತಾಪಂ ಸಾಮಾನ್ಯ ಸಭೆಗೆ ಬಾರದ ತಾಲೂಕಾ ಮಟ್ಟದ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಕೊಳ್ಳಬೇಕು, ತಾಲೂಕು ಪಂಚಾಯತಿಯ ಆಸ್ತಿಯನ್ನು ರಕ್ಷಣೆ ಮಾಡಬೇಕು, ಶಿಶು ಅಭಿವೃದ್ಧಿ ಅಧಿಕಾರಿಯನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ತಾಪಂ ಉಪಾಧ್ಯಕ್ಷ ಸಂಜೀವಕುಮಾರ ಎಂಟಮಾನ ತಾಪಂ ಅಧಿಕಾರಿ ಸುನೀಲ ಮದ್ದಿನ ಅವರಿಗೆ ಖಡಕ್ಕಾಗಿ ಸೂಚಿಸಿದರು.
ಪಟ್ಟಣದ ತಾಪಂ ಸಭಾ ಭವನದಲ್ಲಿ ಜರುಗಿದ ತಾಪಂ 16ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ,
ಸರಕಾರಿ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ತಾಪಂ ಸಾಮಾನ್ಯ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಾಗುತ್ತಿಲ್ಲ. ಅವರ ಪರವಾಗಿ ಪ್ರತಿನಿಧಿಗಳು ಸಭೆಗೆ ಬರುತ್ತಾರೆ. ಇದರಿಂದಾಗಿ ಇಲಾಖೆಯ ಯೋಜನೆಗಳು ಸ್ಪಷ್ಟವಾಗಿ ಸದಸ್ಯರಿಗೆ ಮಾಹಿತಿ ಸಿಗುವುದಿಲ್ಲ. ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೆ ಮಾಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಸದಸ್ಯ ಎಂ.ಎನ್. ಕಿರಣರಾಜ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಹಳೆ ಪ್ರವಾಸಿ ಮಂದಿರದ ಆಸ್ತಿ ತಾಪಂ ಒಂದೇ ಆಸ್ತಿಯಾಗಿದೆ. ತಾಪಂ ಆಢಳಿತ ಈ ಆಸ್ತಿಯ ರಕ್ಷಿಸುವಲ್ಲಿ ಮುಂದಾಗಬೇಕು. ತಾಪಂ ಆಸ್ತಿಯ ಒಂದು ಭಾಗದಲ್ಲಿ ಹಿರಿಯ ಪತ್ರಕರ್ತ ದಿ. ರೇ.ಚ. ರೇವಡಿಗಾರ ಪತ್ರಕಾಭವನ ನಿರ್ಮಾಣ ಮಾಡಲು ಸರಕಾರ ಅನುದಾನ ನೀಡಿದೆ. ಕೂಡಲೇ ಕಾಮಗಾರಿ ಪ್ರಾರಂಭವಾಗಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಡಾ. ಎಚ್.ವೈ. ಸಿಂಗೆಗೋಳ ಅವರು ಇಲಾಖೆಯ ಮಾಹಿತಿ ನೀಡುತ್ತಾ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸೂಕ್ತ ಮಳೆಯಾಗಿದೆ. ಬಿತ್ತನೆ ಗುರಿಗಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ರಸಗೊಬ್ಬರದ ಕೊರತೆಯಿಲ್ಲ. ಮುಂಗಾರು ಹಂಗಾಮಿನಲ್ಲಿ ಬೆಳೆದ ತೊಗರಿ, ಹತ್ತಿ, ಕಬ್ಬು ಮುಂತಾದ ಬೆಳೆಗಳು ಉತ್ತಮವಾಗಿ ಬಂದಿವೆ ಎಂದು ಹೇಳಿದರು.
ತಾಲೂಕಿನ ಗುಂದಗಿ ಗ್ರಾಮದಲ್ಲಿನ ಅಂಗನವಾಡಿ ಶಿಕ್ಷಕಿಯನ್ನು ಬದಲಾಯಿಸಬೇಕು ಎಂದು ಗ್ರಾಮಸ್ಥರು ಸಾಕಷ್ಟು ಸಲ ಶಿಶುಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮದ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಅಂಗನವಾಡಿ ಶಿಕ್ಷಕಿ ಪೌಷ್ಠಿಕ ಆಹಾರ ಸರಿಯಾಗಿ ನೀಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಹೀಗೆ ತಾಲೂಕಿನಲ್ಲಿ ನಡೆಯುತ್ತಿದೆ. ಆದ್ದರಿಂದ ಶಿಶುಅಭಿವೃದ್ಧಿ ಇಲಾಖೆ ಅಧಿಕಾರಿಯನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ತಾಪಂ ಉಪಾಧ್ಯಕ್ಷ ಸಂಜೀವಕುಮಾರ ಎಂಟಮಾನ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಸದಸ್ಯರಾದ ಶ್ರೀಶೈಲ ಚಳ್ಳಗಿ, ಶ್ರೀಶೈಲ ಕಬ್ಬಿನ, ಶಂಕರಲಿಂಗ ಕಡ್ಲೇವಾಡ ಅವರು ಚರ್ಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷೆ ಮಹಾನಂದ ಸಾಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಯೋಜನಾಧಿಕಾರಿ ಅವರು ವೇದಿಕೆ ಮೇಲೆ ಇದ್ದರು.
ವರದಿ :ಮಹಾಂತೇಶ ನೂಲಾನವರ, ಸಿಂದಗಿ…

LEAVE A REPLY

Please enter your comment!
Please enter your name here