ತಾಲೂಕಾ ಮಡಿವಾಳ ಮಾಚಿದೇವ ಸೇವಾ ಸಂಘದ ಪರವಾಗಿ ಮುಖ್ಯ ಶಿಕ್ಷಕ ಶಿವಾನಂದ ಶಹಾಪೂರ ಅವರಿಗೆ ಗೌರವಿಸಲಾಯಿತು.

0

ಸಿಂದಗಿ: ಕಾಯಕವನ್ನು ಜೀವನ ನಡೆಸುತ್ತಿರುವ ಮಡಿವಾಳ ಸಮಾಜದ ಜನತೆಗೆ ಶಿಕ್ಷಣದ ಕೊರತೆಯಾಗದಂತೆ ಕಟ್ಟಕಡೆ ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವಂತೆ ಸಂಘವು ಪಾಲಕರಿಗೆ ಪ್ರೇರಣೆ ನೀಡಬೇಕು ಎಂದು ಹೆಗ್ಗಣದೊಡ್ಡಿ ಕಲ್ಯಾಣ ಕರ್ನಾಟಕ ಟ್ರಸ್ಟ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕಾ ಮಡಿವಾಳ ಮಾಚಿದೇವ ಸೇವಾ ಸಂಘದತಿಯಿಂದ ಪಟ್ಟಣದ ಸರಕಾರಿ ಪ್ರೌಡ ಶಾಲೆಯ ಮುಖ್ಯ ಗುರು ಶಿವಾನಂದ ಶಹಾಪೂರ ಅವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಶ್ತಿ ಹಾಗೂ ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿ ಪುರಷ್ಕøತರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರು ತಮ್ಮ ಸೇವಾ ನಿಷ್ಠೆಯಿಂದ ಉತ್ತಮ ಕಾರ್ಯ ಮಾಡುವ ಮೂಲಕ ವಿಧ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ತಾಲೂಕಾ ಕಸಾಪ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಮಾತನಾಡಿ ಸಮಾಜವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಾಹಳ ಪ್ರಮುಖವಾದದ್ದು, ಪ್ರತಿಯೊಬ್ಬರು ವಿಧ್ಯಾರ್ಥಿಗಳಿಗೆ ಅಕ್ಷರ ತಿದ್ದಿ, ತೀಡಿ ಅವರ ಮುಂದಿನ ಬದುಕಿನ ಗುರಿಯನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮೇಲು ಕಾಣಬೇಕು ಎಂದರು.
ಕಾನಿಪಾ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ ಗುರು ತೋರಿರುವ ಉತ್ತಮ ಮಾರ್ಗದರ್ಶನವನ್ನು ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳಡಿಸಿಕ್ಕೊಂಡು ಸಮಾಜದಲ್ಲಿ ಉತ್ತಮ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಲು ಶಿಕ್ಷಕರು ಸತತ ಪರಿಶ್ರಮ ಪಡಬೇಕಾಗುತ್ತದೆ ಎಂದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ ಈರಣ್ಣ.ಬ.ಮಡಿವಾಳರ್, ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ದುಂಡಪ್ಪ ಅಗಸರ, ಶಿಕ್ಷಕ ರಂಗನಾಥ ಪರೀಟ ಮಾತನಾಡಿದರು
ಇದೇ ಸಮಾರಂಭದಲ್ಲಿ ಸನ್ಮಾನಿಸಿದ ಶಿವಾನಂದ ಶಹಾಪೂರ ಮಾತನಾಡಿ, ಶಿಕ್ಷಕರ ಅಂತರಂಗ ಮನಸ್ಸು ಪರಿಶುದ್ದವಾಗಿ ಇರುವ ಮೂಲಕ ಸಜ್ಜನರ ಸಂಘದಲ್ಲಿ ಇರುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರಿಂದ ಸರಕಾರ, ಸಂಘ, ಸಂಸ್ಥೆ, ಸಮಾಜ, ಗೌರವಿಸಿ ಗೌರವದಿಂದ ಕಾಣುತ್ತಾರೆ ಎಂದರು.
ಸಮಾರಂಭದಲ್ಲಿ ತಿಪ್ಪಣ್ಣ ಅಗಸರ, ಮಲ್ಲು ಬಂದಾಳ, ಚಂದ್ರಶೇಖರ ಮಡಿವಾಳರ, ಶಂಕರ ಮಡಿವಾಳರ, ಭೀಮಾಶಂಕರ ಮಾಡಬಾಳ, ವಿಜಯಕುಮಾರ ಬೋರಗಿ, ಶಂತು ಖೈನೂರ, ಶಾಂತೂ ಬಂಕಲಗಿ, ಮಡು ಮಡಿವಾಳರ, ಸಾಹಿತಿ ಬಸವರಾಜ ಭೂತಿ, ಮಲ್ಲುಗೌಡ, ಕವಿ ಕಲಾವಿದ ಮುತ್ತು ಬ್ಯಾಕೋಡ, ಶ್ರೀಶೈಲ ಹದಗಲ್ಲ ಮತ್ತಿತರರು ಭಾಗವಿಹಿಸಿದ್ದರು.
ಶಿಕ್ಷಕ ಬಸವರಾಜ ಅಗಸರ ಸ್ವಾಗತಿಸಿ ವಂಧಿಸಿದರು
ವರದಿ: ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here