ತಾಲೂಕಿನಲ್ಲಿ 2 ಕೋವಿಡ್ ಸೆಂಟರ್ : ಡಾಕ್ಟರ್ ಅಜಯ್ ಸಿಂಗ್.
ಜೇವರ್ಗಿ: ತಾಲೂಕಿನ ಶಾಸಕರಾದ ಡಾll. ಅಜಯ್ ಸಿಂಗ್ ಅವರು ತಾಲೂಕಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ತಾಲೂಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ತಾಲೂಕಿನಲ್ಲಿ ಇಲ್ಲಿವರೆಗೂ 181 ಕೊರನಾ ವೈರಸ್ ಪಾಸಿಟಿವ್ ಬಂದಿದೆ ಹಾಗೂ 150 ಗುಣಮುಖರಾಗಿದ್ದಾರೆ 31 ದಿನ ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಟ್ಟು ನಮ್ಮ ಜೇವರ್ಗಿ ತಾಲೂಕ ಮತ್ತು ಯಡ್ರಾಮಿ ತಾಲೂಕಿನ ಸೋಂಕಿತರ ಸಂಖ್ಯೆ ಗುಣವಾಗುತ್ತಿರುವ ಸಂಖ್ಯೆ ಮತ್ತು ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಇದಾಗಿದೆ ಎಂದು ಹೇಳಿದರು.
ಧರ್ಮಸಿಂಗ್ ಫೌಂಡೇಶನ್ ಹಾಗೂ ತಾಲೂಕು ಆಡಳಿತ ವತಿಯಿಂದ ನಮ್ಮ ತಾಲೂಕಿನಲ್ಲಿ 2 ಕೋವಿಡ್ ಸೆಂಟರ್ ತೆರೆಯಲಾಗುತ್ತದೆ ಎಂದು ಹೇಳಿದರು.
ತಾಲೂಕಿನ ಬಸ್ ಡಿಪೋ ಹತ್ತಿರ ಇರುವ ಅಂಬೇಡ್ಕರ್ ವಸತಿ ನಿಲಯ ಹಾಗೂ ಯಾಳವರ ಕ್ರಾಸ್ ಹತ್ತಿರ ಇರುವ ಮುರಾರ್ಜಿ ವಸತಿ ಶಾಲೆಯಲ್ಲಿ ಸೆಂಟರ್ ತೆರೆಯಲಾಗುತ್ತದೆ ಎಂದು ಹೇಳಿದರು.
ಈ ಕೋವಿಡ ಸೆಂಟರಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಒದಗಿಸಲಾಗುತ್ತದೆ. ಹಾಗೂ ಧರಂಸಿಂಗ್ ಫೌಂಡೇಶನ್ ವತಿಯಿಂದ ಸೋಂಕಿತರಿಗೆ ಊಟ ಹಾಗೂ ಬೇಕಾಗಿರುವ ಬೆಡ್ ಸಿಟಿಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಸಿದ್ದರಾಯ ಬೋಸಗಿ, ತಾಲೂಕು ಪಂಚಾಯಿತಿ ಅಧಿಕಾರಿ ವಿಲಾಸ ರಾಜ್, ಪುರಸಭೆ ಮುಖ್ಯ ಅಧಿಕಾರಿ ಕೆ. ಲಕ್ಷ್ಮೀಶ್, ಸರ್ಕಲ್ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿ , ರೈಮಾನ್ ಪಟೇಲ್ ರಾಜಶೇಖರ್ ಸೀರೆ, ತಾಲೂಕು ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.