ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ | ಶಾಸಕ ಮಹೇಶ ಕುಮಠಳ್ಳಿ 

0

ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ:

ಶಾಸಕ ಮಹೇಶ ಕುಮಠಳ್ಳಿ

ಅಥಣಿ : ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ.ಅಥಣಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ  ಎಂದು ಶಾಸ‌ಕ ಮಹೇಶ ಕುಮಠಳ್ಳಿ ಹೇಳಿದರು.

ಮಂಗಳವಾರ  ತಾಲೂಕಿನ ಕೊಹಳ್ಳಿ ಐಗಳಿ ಹಾಗೂ ತೇಲಸಂಗ ವಿಜಯಪುರ  ರಸ್ತೆ ಅಭಿವೃದ್ಧಿಗಾಗಿ ನಾಲ್ಕು ಕೋಟಿ ರೂಗಳ ವಿವಿಧ  ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ  ರಸ್ತೆ  ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ

ತೇಲಸಂಗದಲ್ಲಿ ಮಾತನಾಡಿದರು.

ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಆಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಬೇಕು. ಕಾಮಗಾರಿ ನಡೆಯುವಾಗ ಸ್ಥಳೀಯರು ನಿಂತು ಕಾಮಗಾರಿ ಮಾಡಿಸಿಕೊಳ್ಳಬೇಕು.

ಅಥಣಿ ಮತಕ್ಷೇತ್ರದ ಕಕಮರಿಯಲ್ಲಿ ಸುಮಾರು 8ಲಕ್ಷ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಸಕ ಕುಮಠಳ್ಳಿ ಭೂಮಿ ಪೂಜೆ  ನೇರವೇರಿಸಿದರು.  ವಿವಿಧ    ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳು ಮಂಜೂರಿ ಹಂತದಲಿದ್ದು ಕೆಲ ದಿನಗಳಲ್ಲಿಯೇ ಅವುಗಳಿಗೂ ಚಾಲನೆ ದೊರೆಯಲಿದೆ ಗುತ್ತಿಗೆದಾರರು

ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಕೊವಿಡ19 ತಡೆಗಟ್ಟಲು ಎಲ್ಲರೂ ಮನೆಯಲ್ಲಿ ಇದ್ದು ಮಾಸ್ಕ ಧರಿಸಿ ಸಾಮಾಜಿಕ ಅಂತರದೊಂದಿಗೆ ಈ ಪಿಡುಗನ್ನು ಹೊಗಲಾಡಿಸಬೇಕು.

ಯಾರೂ ಭಯಪಡದೇ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಇದರ ಜೊತೆ ಬದುಕುತ್ತ ಬಿಸಿ ನೀರು, ಕಾಷಾಯ ಕುಡಿದು ಸೂಕ್ತ ಕ್ರಮವಹಿಸಿ ಇದನ್ನು ಓಡಿಸಬೇಕಾಗಿದೆ.ರೋಗ ತಡೆಗೆ ಪ್ರಯತ್ನ ಮಾಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ.ಈಗಾಗಲೇ ಸಿಎಂ ಯಡಿಯೂರಪ್ಪಾಜೀ ಯಾವುದೇ ಕಾರಣಕ್ಕೆ ಲಾಕ್ ಡೌನ್ ವಿಸ್ತರಿಸುವದಿಲ್ಲವೆಂದು ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೊರೊನಾಗೆ ಹೆದರದೆ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ, ಜಿಪಂ ಸದಸ್ಯ ಗುರಪ್ಪ ದಾಶ್ಯಾಳ,ಜಿಪ ಸದಸ್ಯ ಬಸವರಾಜ ಬುಟಾಳಿ, ಇಮಾಮಸಾಬ ಬಿರಾದಾರ,ಶಾರೂಖಾನ ಬಿರಾದಾರ,

ಶಿವು ಜಗದೇವ,ಶ್ರೀಶೈಲ ಪೂಜಾರಿ,ರಂಗು ಜಂಬಗಿ,ಆಶೋಕ  ಗೌರಗೊಂಡ, ರಾವಸಾಬ ಬಿರಾದಾರ ಕಾರ್ಯನಿರ್ವಾಹಕ ಅಭಿಯಂತರ  ಜಿ.ಎಂ. ಗೂಳಪ್ಪನವರ,   ಸೇರಿದಂತೆ ಆಯಾ ಗ್ರಾಮಗಳಲ್ಲಿನ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು .

ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here