ಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಓಬಳಾಪುರ,ಓಬಳಾಪುರ ಕೆರೆಯು ತುಂಬಿದರೆ ಓಬಳಾಪುರ ಗ್ರಾಮ ಸೇರಿದಂತೆ ಹುರುಳಿಹಾಳು,ಗುಂಡುಮುಣುಗು,ಸಿದ್ಧಾಪುರ,ಸಿದ್ಧಾಪುರ ಗೊಲ್ಲರಹಟ್ಟಿ,ಸಿದ್ಧಾಪುರ ವಡ್ರಟ್ಟಿ ಗ್ರಾಮಗಳ ರೈತರಿಗೆ ಹಾಗೂ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಲಿದೆ.ಮಳೆಗಾಲ ಆರಂಭವಾಗಿ ಈವರೆಗೂ ಈ ಕೆರೆ ತುಂಬಿಲ್ಲ,ಮಳೆ ಬಂದು ನೆರೆ ಹೊರೆಯ ಕೆರೆಗಳು ತುಂಬಿವೆ.ಆದ್ರೆ ಓಬಳಾಪುರ ಕೆರೆಯು ತುಂಬಿಲ್ಲ,ಅದಕ್ಕೆ ಅಗತ್ಯವಾದಷ್ಟು ಮಳೆ ಆಗಿಲ್ಲ ಎನ್ನುತ್ತಾರೆ ಗ್ರಾಮಗಳ ಹಿರಿಯರು.ಸಂತೃಪ್ತಿಯಾಗುವಷ್ಟು ಮಳೆಯಾಗಿ ಓಬಳಾಪುರ ಕೆರೆ ತುಂಬಿ ಕೋಡಿ ಮೀರಿ ನೀರು ಹಾಯಲೆಂದು,ಗ್ರಾಮಸ್ಥರು ವರುಣದೇವರ ಕೃಪೆಗಾಗಿ ಕೂಡ್ಲಿಗಿ ಹಿರೇಮಠ ಶ್ರೀಪ್ರಶಾಂತ ಸಾಗರ ಸ್ವಾಮೀಜಿ ಮತ್ತು ಕೆಂಚಮಲ್ಲನಹಳ್ಳಿ ಶ್ರೀರವಿಶಾಸ್ತ್ರೀ ರವರ ನೇತೃತ್ವದಲ್ಲಿ,ಪೂಜೆ ಹವನ ಹೋಮಾದಿಳನ್ನು ಆ7ರಂದು ಶುಕ್ರವಾರ ಓಬಳಾಪುರ ಗ್ರಾಮಸ್ಥರು ಆಯೋಜಿಸಿದ್ದರು.ಸಾನಿಧ್ಯ ವಹಿಸಿ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಆಶೀವ೯ಚನ ನೀಡಿದರು.ಪೂಜೆ ಹವನ ಹೋಮಗಳು ಭಾವನೆಗಳಿಗೆ ಸಂಬಂದಿಸಿದ್ದು,ಧಾಮಿ೯ಕ ಸಂಪ್ರದಾಯ ಕೈಂ ಕಯ೯ಗಳೊಂದಿಗೆ ವೈಜ್ಞಾನಿಕವಾಗಿಯೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.ಕೆರೆ ಸಂರಕ್ಷಣೆ ಹಾಗು ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರೊಂದಿಗೆ ತಾವು ಚಚಿ೯ಸುವುದಾಗಿ ತಿಳಿಸಿದರು.ಗ್ರಾಮದ ಹಿರಿಯರು ಮಾತನಾಡಿ ಹಲವು ಗ್ರಾಮಗಳಿಗೆ ನೀರಿನ ಸೆಲೆಯಾಗಿದೆ,ಈ ಭಾಗದ ರೈತರ ಜೀವನಕ್ಕೆ ಜೀವಾಳವಾಗಿರೋ ಓಬಳಾಪುರ ಕೆರೆ ಸುಮಾರು 25 ವರ್ಷಗಳಿಂದ ತುಂಬಿಲ್ಲ,ಕಾರಣ ಆಧ್ಯಾತ್ಮ ಚಿಂತಕರ ಸಲಹೆಯಂತೆ ಹೋಮ ಮತ್ತು ಅನ್ನಸಂತರ್ಪಣೆ ಪೂಜಾ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಓಬಳಪುರ ಗ್ರಾಮ,ಹುರಳಿಹಾಳು, ಗುಂಡುಮುಣಗು,ಸಿದ್ದಾಪುರ ಗೊಲ್ಲರಹಟ್ಟಿ,ಸಿದ್ದಾಪುರ ವಡ್ಡರಹಟ್ಟಿ ಹಾಗೂ ಸಿದ್ದಾಪುರ ಗ್ರಾಮಸ್ಥರು,ಹಿರಿಯರು,ಮಹಿಳೆಯರು ಮಕ್ಕಳು ಭಾಗವಸಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ