ತೆಲುಗು ಬಿಗ್‌ಬಾಸ್-4 ಆರಂಭ: ಇಲ್ಲಿದೆ ಸ್ಪರ್ಧಿಗಳ ವಿವರ

0

ಮನೊರಂಜನಾ ಕ್ಷೇತ್ರದ ಮೇಲೆ ಕೊರೊನಾ ಪರಿಣಾಮ ಬಹಳ ದೊಡ್ಡದು. ಚಿತ್ರಮಂದಿರಗಳು ಬಾಗಿಲು ತೆರೆದು ಆರು ತಿಂಗಳಾದವು. ಕೊರೊನಾದಿಂದ ಹಿನ್ನಡೆ ಅನುಭವಿಸಿದ್ದ ಕಿರುತೆರೆ ಈಗ ನಿಧಾನಕ್ಕೆ ಚಲಿಸಲು ಆರಂಭಿಸಿದೆ.

ತೆಲುಗಿನಲ್ಲಿ ಬಿಗ್‌ಬಾಸ್‌ನ ಸೀಸನ್‌ ಪ್ರಸಾರ ಇಂದು (ಸೆಪ್ಟೆಂಬರ್ 6) ಆರಂಭವಾಗಿದೆ. ತೆಲುಗು ಬಿಗ್‌ಬಾಸ್‌ನ ನಾಲ್ಕನೇ ಅವತರಣಿಗೆ ಇದಾಗಿದ್ದು, ಈ ಬಾರಿ ನಟ ನಾಗಾರ್ಜುನಾ ಅವರು ಬಿಗ್‌ಬಾಸ್ ನಿರೂಪಕರಾಗಿದ್ದಾರೆ.

ಸ್ಟಾರ್ ಮಾ ಚಾನೆಲ್‌ನಲ್ಲಿ ಬಿಗ್‌ಬಾಸ್ ಪ್ರಸಾರವಾಗುತ್ತಿದ್ದು, ಸ್ಪರ್ಧಾಳುಗಳು ಒಬ್ಬೊಬ್ಬರಾಗಿ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಮೊದಲ ಸ್ಪರ್ಧಿಯಾಗಿ ನಟಿ ಮೊನಾಲ್ ಗಜ್ಜರ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

ನಟಿ ಮೋನಲ್ ಗುಜ್ಜರ್ ಮೊದಲ ಸ್ಪರ್ಧಿ

ತೆಲುಗು, ಗುಜರಾತಿ, ಮರಾಠಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಮೊನಾಲ್ ಗಜ್ಜರ್ ಮಾಡೆಲ್ ಸಹ ಆಗಿದ್ದಾರೆ. ತೆಲುಗು ಬಿಗ್‌ಬಾಸ್‌ನ ನಾಲ್ಕನೇ ಸೀಸನ್‌ನ ಮೊದಲ ಸ್ಪರ್ಧಿಯಾಗಿರುವ ಇವರು ಮನೆ ಪ್ರವೇಶಿಸಿದ್ದಾರೆ.

ಸತ್ಯಂ ಸಿನಿಮಾ ನಿರ್ದೇಶಕ ಸೂರ್ಯ ಕಿರಣ್

ಸತ್ಯಂ ಸಿನಿಮಾದ ನಿರ್ದೇಶಕ ಸೂರ್ಯ ಕಿರಣ್ ಬಿಗ್‌ಬಾಸ್‌ 4 ನ ಎರಡನೇ ಸ್ಪರ್ಧಿ. ಇತರ ಸ್ಪರ್ಧಾಳುಗಳನ್ನು ಅರ್ಥಮಾಡಿಕೊಂಡು ಅವರೊಟ್ಟಿಗೆ ಇರುತ್ತೇನೆ. ಅವರನ್ನು ಬದಲಾಯಿಸುವ ಯತ್ನ ಮಾಡುವುದಿಲ್ಲ ಎಂದು ಬಿಗ್‌ಬಾಸ್‌ ಮನೆ ಪ್ರವೇಶಿಸಿದರು ಸೂರ್ಯ ಕಿರಣ್.

ಟಿವಿ ನಿರೂಪಕಿ ಲಾಸ್ಯಾ ಮೂರನೇ ಸ್ಪರ್ಧಿ

ಟಿವಿ ನಿರೂಪಕಿ ಲಾಸ್ಯಾ ಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. 2012 ರಲ್ಲಿ ‘ಸಮ್‌ಥಿಂಗ್ ಸ್ಪೆಷಲ್’ ಎಂಬ ಕಾರ್ಯಕ್ರಮ ನಿರೂಪಕಿಯಾಗಿದ್ದ ಲಾಸ್ಯಾ, ಟಿವಿ ನಿರೂಪಣೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಬಾಯ್‌ಫ್ರೆಂಡ್ ಮಂಜುನಾಥ್ ಅವರನ್ನು ವಿವಾಹವಾಗಿರುವ ಲಾಸ್ಯಾ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಲೈಫ್ ಈಸ್ ಬ್ಯೂಟಿಫುಲ್ ನಟ ಅಭಿಜಿತ್ ಎಂಟ್ರಿ

ತೆಲುಗಿನ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದ ನಟ ಅಭಿಜಿತ್ ದುದ್ದಲ ನಾಲ್ಕನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿಯೂ ಅಭಿಜಿತ್ ದುದ್ದಲ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಗ್‌ಬಾಸ್ ನಿರೂಪಕ ನಾಗಾರ್ಜುನ ಪುತ್ರ ಅಖಿಲ್‌ ನ ಬಾಲ್ಯ ಸ್ನೇಹಿತ ಅಭಿಜಿತ್ ದುದ್ದಲ.

 

LEAVE A REPLY

Please enter your comment!
Please enter your name here