ದಲಿತರ ಓಣಿಗಳಲ್ಲಿ ನಿರ್ಲಕ್ಷ

0

ದಲಿತರ ಓಣಿಗಳಲ್ಲಿ ನಿರ್ಲಕ್ಷ : ಆಕ್ರೋಶ
ಸಾವಳಗಿ : ಸಮೀಪದ ಟಕ್ಕೊಡ ಗ್ರಾಮದ ವಾರ್ಡ ನಂ.3 ರಲ್ಲಿ ಬರುವ ದಲಿತರ ಓಣಿಗಳಲ್ಲಿ ಯಾವುದೇ ಮೂಲಬೂತ ಸೌಲಭ್ಯಗಳನ್ನು ನೀಡದೇ ಪಂಚಾಯತ ಅಭಿವೃದ್ದಿ ಅಧಿಕಾರಿ ನಿರ್ಲಕ್ಷತಣ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದಲಿತ ಕಾಲೋನಿಗಳಲ್ಲಿ ಅಭಿವೃದ್ದಿ ಕಾಣದೇ ಚರಂಡಿ ಮದ್ಯದಲ್ಲಿ ದಲಿತ ಕುಟುಂಬಗಳು ವಾಸಿಸುತ್ತಿವೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಇಲ್ಲಿನ ನಿವಾಸಿಗಳು ಆಸ್ಪತ್ರೆ ಸೇರುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಕಾಲೋನಿಯಲ್ಲಿ ಪಂಚಾಯತ ವತಿಯಿಂದ ಯಾವುದೇ ನಯಾಪೈಸೆ ಖರ್ಚುಮಾಡದೇ ತಮ್ಮ ದರ್ಪ ತೋರಿಸುತ್ತಿದ್ದಾರೆ. ಮಳೆಗಾಲದಲ್ಲಿ ಚರಂಡಿಯಲ್ಲಿಯೇ ನಮ್ಮ ಜೀವನ ನಡೆದಿದೆ. ಯಾವುದೇ ರಸ್ತೆಗೂ ಸಿಸಿ, ಚರಂಡಿ, ವಿದ್ಯೂತ ದ್ವೀಪ ಹಾಗು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರತಿ ವರ್ಷ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಲಿತರ ಕಾಲೋನಿಗೆ ಹಲವಾರು ಕ್ರೀಯಾಯೋಜನೆಗಳನ್ನು ರೂಪಿಸಿದರೂ ಯಾವುದೇ ಕಾಮಗಾರಿಗಳು ಮಾತ್ರ ಪ್ರಾರಂಭವಾಗಲಿಲ್ಲ. ಅನುದಾನದಲ್ಲಿ ಎಸ್.ಸಿ.ಎಸ್.ಟಿ. ಕುಟುಂಬಗಳಿಗೆ ಮೀಸಲಾದ ಅನುದಾನವನ್ನು ಕೂಡಾ ಉಪಯೋಗಿಸಿಲ್ಲದಿರುವದು ಬಹಳ ಶೋಚನೀಯ ಸಂಗತಿ.
ಹಲವಾರು ಬಾರಿ ಪಿಡಿಓ ಅವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನೆಯಾಗಿಲ್ಲ. ಕೂಡಲೆ ಸಂಬಂದಪಟ್ಟ ಮೇಲಾಧಿಕಾರಿಗಳು ದಲಿತರ ಕಾಲೋನಿಯಲ್ಲಿ ಮೂಲಬೂತ ಸೌಲಭ್ಯಗಳನ್ನು ಒದಗಿಸಬೇಕು ಇಲ್ಲದಿದ್ದರೆ ಟಕ್ಕೊಡ ಗ್ರಾಮ ಬಂದ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾಲೋನಿಯ ನಿವಾಸಿಗಳಾದ ಸುನೀಲ ಟಕ್ಕೊಡ, ಆನಂದ ಕಾಂಬಳೆ, ವಿವೇಕ ನಾಟೀಕಾರ, ಮಾದೇವ ಕಾಂಬಳೆ, ಮುತ್ತು ಹಳ್ಯಾಳ, ಅನೀಲ ಕಾಂಬಳೆ, ಮುತ್ತಪ್ಪ ಕಾಂಬಳೆ ಸೇರಿದಂತೆ ಹಲವಾರು ಜನ ಆಗ್ರಹಿಸಿದ್ದಾರೆ.
ಪೋಟೊ ವಿವರ : ಟಕ್ಕೊಡ ಗ್ರಾಮದ ದಲಿತ ಕಾಲೋನಿಯಲ್ಲಿ ಮೂಲಬೂತ

LEAVE A REPLY

Please enter your comment!
Please enter your name here