ದಲಿತ ಯುವಕನ ಬರ್ಬರ ಹತ್ಯೆ ಖಂಡಿಸಿ ಮನವಿ

0

ಸವದತ್ತಿ : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿ
ದಲಿತ ಯುವಕ ಸವರ್ಣೀಯರ ಕಟ್ಟೆಯ ಮೇಲೆ ಕುಳಿತಿದ್ದಕ್ಕೆ ಆತನನ್ನು
ಬರ್ಬರವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ
ಬುಧವಾರ ತಹಶೀಲ್ದಾರ ಪ್ರಶಾಂತ ಪಾಟೀಲ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ
ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ಡಿ.ಎಸ್.ಎಸ್ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕಟ್ಟಿಮನಿ ಮಾತನಾಡಿ ಆರ್ಥಿಕವಾಗಿ,
ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮುದಾಯದ ಮೇಲೆ ಪದೇ ಪದೇ
ಬಹಿμÁ್ಕರ, ದೌರ್ಜನ್ಯ, ಕೊಲೆಗಳಂತಹ ಪ್ರಕರಣಗಳು ನಿರಂತರವಾಗಿ
ನಡೆಯುತ್ತಲೇ ಇವೆ. ಈ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ.
ಭಾರತ ದೇಶಕ್ಕೆ 8 ದಶಕಗಳು ಕಳೆದರೂ ಕೂಡಾ ನಮ್ಮ ದೇಶದಲ್ಲಿ ದಲಿತರಿಗೆ
ಮಾತ್ರ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ದಲಿತ ಯುವಕನ ಬರ್ಬರವಾಗಿ ಹತ್ಯೆ ಮಾಡಿದ್ದನ್ನು
ಖಂಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಂಡು ಆರೋಪಿತರಿಗೆ ಗಲ್ಲು ಶಿಕ್ಷೆ
ವಿಧಿಸಬೇಕು. ಅತ್ಯಂತ ಕಟ್ಟಕಡೆ ಸಮುದಾಯದ ಪ್ರಕರಣಕ್ಕೆ ಸರಕಾರ ಸೂಕ್ತ
ಕ್ರಮ ತೆಗೆದುಕೊಂಡು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸದಿದ್ದಲ್ಲಿ ಕರ್ನಾಟಕ
ರಾಜ್ಯಾದ್ಯಂತ ದಲಿತ ಪರ ಸಂಘಟನೆಗಳು ಬೀದಿಗಿಳಿದು ಉಗ್ರವಾದ ಹೋರಾಟ
ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಈ ವೇಳೆ ಬೆಳಗಾವಿ ವಿಭಾಗೀಯ ಅಧ್ಯಕ್ಷ ಶ್ರೀಕಾಂತ ಮಾದರ, ರಮೇಶ
ಗಿಡ್ಡಪ್ಪಗೋಳ, ರಾಮವ್ವ ಕರೋಶಿ, ಲಕ್ಷ್ಮೀ ನಾಗನ್ನವರ, ಕಾಮಾಕ್ಷಿ ಬಾಜನವರ,
ಬಾಳಪ್ಪ ಹರಿಜನ, ಮೈಲಾರಿ ಬಡಕಲೂರ, ವೈ.ವೈ. ಕಾಳಪ್ಪನವರ ಮತ್ತಿತರರು
ಇದ್ದರು.

LEAVE A REPLY

Please enter your comment!
Please enter your name here