ದಲಿತ ಯುವತಿ ಮೇಲೆ ನಡೆದಿರುವ ಅಮಾನುಷ ಅತ್ಯಾಚಾರ ಘಟನೆ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಲು ಆಗ್ರಹಿಸಿ ಡಿಎಸ್‍ಎಸ್‍ನಿಂದ

0

ಹರಿಹರ
ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ದಲಿತ ಯುವತಿ ಮೇಲೆ ನಡೆದಿರುವ ಅಮಾನುಷ ಅತ್ಯಾಚಾರ ಘಟನೆ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಲು ಆಗ್ರಹಿಸಿ ಡಿಎಸ್‍ಎಸ್‍ನಿಂದ (ಕೃಷ್ಣಪ್ಪ ಸ್ಥಾಪಿತ) ಶುಕ್ರವಾರ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಪಕ್ಕೀರಸ್ವಾಮಿ ಮಠದಿಂದ ಆರಂಭಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ತಮಟೆ ಭಾರಿಸುತ್ತಾ ಯುಪಿ ಸಿಎಂ ಆದಿತ್ಯನಾಥರ ಅಣಕು ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಛೇರಿ ಆಗಮಿಸಿ ಕೆಲ ಹೊತ್ತು ಧರಣಿ ಸತ್ಯಾಗ್ರಹ ನಡೆಸಿದರು.

ನಂತರ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಸೆ.14ರಂದು ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ 19 ವರ್ಷದ ಮನೀಶಾ ವಾಲ್ಮೀಕಿ ಎಂಬ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಪೈಶಾಚಿಕ ದಾಳಿ ಮಾಡಿರುವ ಮೇಲ್ಜಾತಿಯ ಆರೋಪಿಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ರಕ್ಷಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.
ಅತ್ಯಾಚಾರ ನಡೆಸಿದ ನರರಕ್ಕಸರು ನಾಲಿಗೆ ಕತ್ತರಿಸಿದ್ದಲ್ಲದೆ, ಬೆನ್ನು ಮೂಳೆಯನ್ನು ಮುರಿದು ಹಾಕಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ. ಸಾವಿನ ಬಳಿಕ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನವಾಗಿ ಪೆÇಲೀಸರು ಶವವನ್ನು ನೋಡಲೂ ಅವಕಾಶವಾಗದಂತೆ ಮನೆಯವರನ್ನು ಕೂಡಿ ಹಾಕಿ, ಅರ್ಧರಾತ್ರಿ ವೇಳೆ ಶವ ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶ ಮಾಡಿರುವುದು ಸಂವಿಧಾನ ಬದ್ದ ದೇಶಕ್ಕೆ ಕಳಂಕಕಾರಿಯಲ್ಲದೆ, ಕಾನೂನಿನ ಆಡಳಿತ ನಡೆಯುವ ಬಗ್ಗೆಯೇ ಅನುಮಾನ ಮೂಡಿಸುವಂತಿದೆ ಎಂದರು.
ಘಟನೆ ಕುರಿತು ಯುವತಿಯ ತಂದೆ ದೂರು ನೀಡಿದ್ದರೂ, ಪೆÇಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಹೋರಾಟದ ನಂತರ ಎಫ್‍ಐಆರ್ ದಾಖಲಿಸಿದ್ದರೂ ಅತ್ಯಾಚಾರಿಗಳ ರಕ್ಷಣೆಗಾಗಿ 20 ದಿನಗಳ ಕಾಲ ಇಡೀ ಸರ್ಕಾರಿ ಆಡಳಿತ ಯಂತ್ರವನ್ನೆ ನಿಯೋಜಿಸಿ ದಲಿತ ಕುಟುಂಬ ಮತ್ತು ಅವರ ಪರವಾಗಿ ದನಿ ಎತ್ತುವರರನ್ನು ಸದೆಬಡಿಯಲು ಟೊಂಕ ಕಟ್ಟಿ ನಿಂತಿತ್ತು. ಅತ್ಯಾಚಾರಿಗೆ ಶಿಕ್ಷೆ ಕೊಡಿಸುವುದು ಬಿಟ್ಟು, ಹೀನಾಯ ಅಪರಾಧವೆಸಗಿದ, ಮೃಗೀಯ ಅಪರಾಧಿಗಳ ನೆರವಿಗೆ ನಿಂತಂತಿರುವ ಯೋಗಿ ಆದಿತ್ಯನಾಥ್‍ರಂಥವರು ಕಾವಿ ಬಟ್ಟೆಗೆ ಕಳಂಕ. ಸಂವಿಧಾನಬದ್ದ ಸ್ಥಾನದಲ್ಲಿ ಹರಿಹರ
ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ದಲಿತ ಯುವತಿ ಮೇಲೆ ನಡೆದಿರುವ ಅಮಾನುಷ ಅತ್ಯಾಚಾರ ಘಟನೆ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಲು ಆಗ್ರಹಿಸಿ ಡಿಎಸ್‍ಎಸ್‍ನಿಂದ (ಕೃಷ್ಣಪ್ಪ ಸ್ಥಾಪಿತ) ಶುಕ್ರವಾರ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಪಕ್ಕೀರಸ್ವಾಮಿ ಮಠದಿಂದ ಆರಂಭಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ತಮಟೆ ಭಾರಿಸುತ್ತಾ ಯುಪಿ ಸಿಎಂ ಆದಿತ್ಯನಾಥರ ಅಣಕು ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಛೇರಿ ಆಗಮಿಸಿ ಕೆಲ ಹೊತ್ತು ಧರಣಿ ಸತ್ಯಾಗ್ರಹ ನಡೆಸಿದರು.
ನಂತರ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಸೆ.14ರಂದು ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ 19 ವರ್ಷದ ಮನೀಶಾ ವಾಲ್ಮೀಕಿ ಎಂಬ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಪೈಶಾಚಿಕ ದಾಳಿ ಮಾಡಿರುವ ಮೇಲ್ಜಾತಿಯ ಆರೋಪಿಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ರಕ್ಷಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.
ಅತ್ಯಾಚಾರ ನಡೆಸಿದ ನರರಕ್ಕಸರು ನಾಲಿಗೆ ಕತ್ತರಿಸಿದ್ದಲ್ಲದೆ, ಬೆನ್ನು ಮೂಳೆಯನ್ನು ಮುರಿದು ಹಾಕಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ. ಸಾವಿನ ಬಳಿಕ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನವಾಗಿ ಪೆÇಲೀಸರು ಶವವನ್ನು ನೋಡಲೂ ಅವಕಾಶವಾಗದಂತೆ ಮನೆಯವರನ್ನು ಕೂಡಿ ಹಾಕಿ, ಅರ್ಧರಾತ್ರಿ ವೇಳೆ ಶವ ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶ ಮಾಡಿರುವುದು ಸಂವಿಧಾನ ಬದ್ದ ದೇಶಕ್ಕೆ ಕಳಂಕಕಾರಿಯಲ್ಲದೆ, ಕಾನೂನಿನ ಆಡಳಿತ ನಡೆಯುವ ಬಗ್ಗೆಯೇ ಅನುಮಾನ ಮೂಡಿಸುವಂತಿದೆ ಎಂದರು.
ಘಟನೆ ಕುರಿತು ಯುವತಿಯ ತಂದೆ ದೂರು ನೀಡಿದ್ದರೂ, ಪೆÇಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಹೋರಾಟದ ನಂತರ ಎಫ್‍ಐಆರ್ ದಾಖಲಿಸಿದ್ದರೂ ಅತ್ಯಾಚಾರಿಗಳ ರಕ್ಷಣೆಗಾಗಿ 20 ದಿನಗಳ ಕಾಲ ಇಡೀ ಸರ್ಕಾರಿ ಆಡಳಿತ ಯಂತ್ರವನ್ನೆ ನಿಯೋಜಿಸಿ ದಲಿತ ಕುಟುಂಬ ಮತ್ತು ಅವರ ಪರವಾಗಿ ದನಿ ಎತ್ತುವರರನ್ನು ಸದೆಬಡಿಯಲು ಟೊಂಕ ಕಟ್ಟಿ ನಿಂತಿತ್ತು. ಅತ್ಯಾಚಾರಿಗೆ ಶಿಕ್ಷೆ ಕೊಡಿಸುವುದು ಬಿಟ್ಟು, ಹೀನಾಯ ಅಪರಾಧವೆಸಗಿದ, ಮೃಗೀಯ ಅಪರಾಧಿಗಳ ನೆರವಿಗೆ ನಿಂತಂತಿರುವ ಯೋಗಿ ಆದಿತ್ಯನಾಥ್‍ರಂಥವರು ಕಾವಿ ಬಟ್ಟೆಗೆ ಕಳಂಕ. ಸಂವಿಧಾನಬದ್ದ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆಯಿಲ್ಲದ ಅವರು ಕೂಡಲೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಒಂದು ಕಡೆ ಬಂಧಿತ ಆರೋಪಿಗಳ ಪರ ಮೇಲ್ಜಾತಿಯವರು ನಿರಂತರ ಸಭೆಗಳನ್ನು, ಪ್ರತಿಭಟನೆ ನಡೆಸಲು ಅವಕಾಶ ನೀಡಿ, ಮತ್ತೊಂದು ಕಡೆ ಸಂತ್ರಸ್ತರ ಕುಟುಂಬದವರನ್ನು ಪೊಲೀಸ್ ಕಾವಲಿನಲ್ಲಿರಿಸಿ, ಮಾದ್ಯಮಗಳೊಂದಿಗೆ ಮಾತನಾಡದಂತೆ ಜಿಲ್ಲಾಧಿಕಾರಿ ಸೇರಿ ಇಡೀ ಆಡಳಿತ ವ್ಯವಸ್ಥೆ ಹೆದರಿಸಿ, ಬೆದರಿಸಿ ಒತ್ತಡ ಹೇರುತ್ತಿರುವುದು ರಾಮ ರಾಜ್ಯದ ಲಕ್ಷಣವಲ್ಲ ಎಂಬುದನ್ನು ರಾಮರಾಜ್ಯ ಕಟ್ಟುವ ಭರವಸೆಯೊಂದಿಗೆ ಗೆದ್ದು ಬಂದಿರುವ ದೇಶದ ಮಾದರಿ ಸಿಎಂಗೆ (?) ಅರ್ಥ ಮಾಡಿಸಬೇಕಿದೆ ಎಂದರು.
ಬನ್ನಿಕೋಡು ವಾಗೀಶ್ ಮಾತನಾಡಿ, ಸದಾ ಮೇಲ್ಜಾತಿ ಪರ ವರದಿಗಾರಿಕೆ ಮಾಡಲು ತುದಿಗಾಲಲ್ಲಿರುವ ಕೆಲವು ಮಾಧ್ಯಮಗಳು ವಾರಗಟ್ಟಲೆ ಪ್ರಕರಣದ ಬಗ್ಗೆ ಸೊಲ್ಲೆತ್ತದಿರುವುದು ಆಶ್ಚರ್ಯವೇನಲ್ಲ. ಆಳುವ ಸರ್ಕಾರಗಳ ಬಾಲಂಗೋಚಿಗಳಾಗಿರುವ ಇಂತಹ ಮಾಧ್ಯಮಗಳಿಂದ ಹೆಚ್ಚೇನನ್ನೂ ನಿರೀಕ್ಷಿಸಲೂ ಸಾದ್ಯವಿಲ್ಲ.
ಭಾನುವಳ್ಳಿ ಹರೀಶ್ ಮಾತನಾಡಿ, ಎಸ್‍ಐಟಿ, ಸಿಬಿಐ ತನಿಖೆಗಳು ದಲಿತ ವಿರೋಧಿ ಮನಸ್ಥಿತಿಯ ಆಳುವ ಸರ್ಕಾರಗಳ ಒತ್ತಡಕ್ಕೆ ಮಣಿದು ಹಾದಿ ತಪ್ಪುವ ಸಾಧ್ಯತೆ ಇರುವುದರಿಂದ ಸಂತ್ರಸ್ತೆಯ ಕುಟುಂಬಸ್ಥರ ಮನವಿಯಂತೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯಬೇಕು ಎಂದರು.
ನಿಟ್ಟೂರು ಅಂಜನಪ್ಪ ಮಾತನಾಡಿ, ಆದಷ್ಟು ಬೇಗ ವಿಚಾರಣೆ ನಡೆಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಅಲ್ಲದೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಿರುವ, ಸಾಕ್ಷ್ಯ ನಾಶ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆದಿ ದ್ರಾವಿಡ ಚಲವಾದಿ ಸಮಾಜದ ಅಧ್ಯಕ್ಷ ಡಾ|ಜಗನ್ನಾಥ್, ಹೆಚ್.ಎಂ.ಗುಡದಯ್ಯ ರಾಜನಹಳ್ಳಿ, ಸುರೇಶ್, ಪ್ರದೀಪ ಜಿಗಳಿ, ರಂಗನಾಥ್, ಯುವರಾಜ ಹೊಸಪಾಳ್ಯ, ಹಾಲೇಶ್, ಆಕಾಶ್ ಎಸ್.ಬಸವರಾಜ ಎಂ., ಚಂದ್ರು ಎಸ್.ಪಿ., ಹನುಮಂತ, ರಾಜ್, ರಾಘವೇಂದ್ರ, ದರ್ಶನ್ ಡಿ., ಪ್ರದೀಪ್, ಪ್ರಶಾಂತ, ಮನೋಜ್, ಕಿರಣ್, ನಾಗರಾಜ್ ಮತ್ತಿತರರಿದ್ದರು.ಮುಂದುವರಿಯಲು ಅರ್ಹತೆಯಿಲ್ಲದ ಅವರು ಕೂಡಲೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಒಂದು ಕಡೆ ಬಂಧಿತ ಆರೋಪಿಗಳ ಪರ ಮೇಲ್ಜಾತಿಯವರು ನಿರಂತರ ಸಭೆಗಳನ್ನು, ಪ್ರತಿಭಟನೆ ನಡೆಸಲು ಅವಕಾಶ ನೀಡಿ, ಮತ್ತೊಂದು ಕಡೆ ಸಂತ್ರಸ್ತರ ಕುಟುಂಬದವರನ್ನು ಪೊಲೀಸ್ ಕಾವಲಿನಲ್ಲಿರಿಸಿ, ಮಾದ್ಯಮಗಳೊಂದಿಗೆ ಮಾತನಾಡದಂತೆ ಜಿಲ್ಲಾಧಿಕಾರಿ ಸೇರಿ ಇಡೀ ಆಡಳಿತ ವ್ಯವಸ್ಥೆ ಹೆದರಿಸಿ, ಬೆದರಿಸಿ ಒತ್ತಡ ಹೇರುತ್ತಿರುವುದು ರಾಮ ರಾಜ್ಯದ ಲಕ್ಷಣವಲ್ಲ ಎಂಬುದನ್ನು ರಾಮರಾಜ್ಯ ಕಟ್ಟುವ ಭರವಸೆಯೊಂದಿಗೆ ಗೆದ್ದು ಬಂದಿರುವ ದೇಶದ ಮಾದರಿ ಸಿಎಂಗೆ (?) ಅರ್ಥ ಮಾಡಿಸಬೇಕಿದೆ ಎಂದರು.
ಬನ್ನಿಕೋಡು ವಾಗೀಶ್ ಮಾತನಾಡಿ, ಸದಾ ಮೇಲ್ಜಾತಿ ಪರ ವರದಿಗಾರಿಕೆ ಮಾಡಲು ತುದಿಗಾಲಲ್ಲಿರುವ ಕೆಲವು ಮಾಧ್ಯಮಗಳು ವಾರಗಟ್ಟಲೆ ಪ್ರಕರಣದ ಬಗ್ಗೆ ಸೊಲ್ಲೆತ್ತದಿರುವುದು ಆಶ್ಚರ್ಯವೇನಲ್ಲ. ಆಳುವ ಸರ್ಕಾರಗಳ ಬಾಲಂಗೋಚಿಗಳಾಗಿರುವ ಇಂತಹ ಮಾಧ್ಯಮಗಳಿಂದ ಹೆಚ್ಚೇನನ್ನೂ ನಿರೀಕ್ಷಿಸಲೂ ಸಾದ್ಯವಿಲ್ಲ.
ಭಾನುವಳ್ಳಿ ಹರೀಶ್ ಮಾತನಾಡಿ, ಎಸ್‍ಐಟಿ, ಸಿಬಿಐ ತನಿಖೆಗಳು ದಲಿತ ವಿರೋಧಿ ಮನಸ್ಥಿತಿಯ ಆಳುವ ಸರ್ಕಾರಗಳ ಒತ್ತಡಕ್ಕೆ ಮಣಿದು ಹಾದಿ ತಪ್ಪುವ ಸಾಧ್ಯತೆ ಇರುವುದರಿಂದ ಸಂತ್ರಸ್ತೆಯ ಕುಟುಂಬಸ್ಥರ ಮನವಿಯಂತೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯಬೇಕು ಎಂದರು.
ನಿಟ್ಟೂರು ಅಂಜನಪ್ಪ ಮಾತನಾಡಿ, ಆದಷ್ಟು ಬೇಗ ವಿಚಾರಣೆ ನಡೆಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಅಲ್ಲದೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಿರುವ, ಸಾಕ್ಷ್ಯ ನಾಶ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆದಿ ದ್ರಾವಿಡ ಚಲವಾದಿ ಸಮಾಜದ ಅಧ್ಯಕ್ಷ ಡಾ|ಜಗನ್ನಾಥ್, ಹೆಚ್.ಎಂ.ಗುಡದಯ್ಯ ರಾಜನಹಳ್ಳಿ, ಸುರೇಶ್, ಪ್ರದೀಪ ಜಿಗಳಿ, ರಂಗನಾಥ್, ಯುವರಾಜ ಹೊಸಪಾಳ್ಯ, ಹಾಲೇಶ್, ಆಕಾಶ್ ಎಸ್.ಬಸವರಾಜ ಎಂ., ಚಂದ್ರು ಎಸ್.ಪಿ., ಹನುಮಂತ, ರಾಜ್, ರಾಘವೇಂದ್ರ, ದರ್ಶನ್ ಡಿ., ಪ್ರದೀಪ್, ಪ್ರಶಾಂತ, ಮನೋಜ್, ಕಿರಣ್, ನಾಗರಾಜ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here