ದಸಂಸ ಕಟ್ಟಾಳು ಅರಸೀಕೆ‌ ನಗರಸಭೆ ಕೌನ್ಸಿಲರ್ ಡಿಎಸ್ಎಸ್ ರಾಮು ಇನ್ನಿಲ್ಲ…

0

ಅರಸೀಕೆರೆ ನಗರಸಭೆ ಕೌನ್ಸಿಲರ್ ಡಿಎಸ್ ಎಸ್ ರಾಮು ಎಂದೇ ಕರೆಯಲ್ಪಡುತ್ತಿದ್ದ ರಾಮಣ್ಣ ಇಂದು ಕೋವಿಡ್ ನಿಂದ ಮೃತಪಟ್ಟಿದ್ದಾರೆ.

ಅರಸೀಕೆರೆಯಲ್ಲಿ ಪೌರ ಕಾರ್ಮಿಕನ ಮಗ ಒಬ್ಬ ಕೌನ್ಸಿಲರ್ ಆಗಿದ್ದು ಒಂದು ಹೆಮ್ಮೆಯ ವಿಷಯ

ಬಿ.‌ಕೃಷ್ಣಪ್ಪ ಅವರ ಕಟ್ಟಾ ಅನುಯಾಯಿಯಾಗಿದ್ದ ರಾಮು ಅವರನ್ನು ಹಾಸನದ ಒಂದು ಕಾರ್ಯಕ್ರಮದಲ್ಲಿ ಸನ್ಮಾನಿಸಿದಾಗ ಹೇಳಿದ ಮಾತುಗಳು ಇನ್ನೂ ಕಿವಿಯಲ್ಲಿದೆ.

ದಸಂಸದ ಕಟ್ಟಾಳು ಆದ ರಾಮಣ್ಣ ಬಿ.‌ಕೃಷ್ಣಪ್ಪ ಅವರು ಮೃತಪಟ್ಟಾಗ ಅವರ ಸಮಾಧಿ ಬಳಿ ಒಂದು ಶಪಥ ಮಾಡಿದ್ದರಂತೆ. ”ನಾನು ಡಿಎಸ್ಎಸ್ ನಲ್ಲಿರುವವರೆಗೂ ಸಂಘಟನೆಗಾಗಿ ಅಥವಾ ಕೆಲಸ ಮಾಡಿಸಲು ನಮ್ಮವರಿಂದ ಒಂದು‌ ರೂಪಾಯಿ ಹಣ ಮುಟ್ಟುವುದಿಲ್ಲ” ಎಂದು ಶಪಥಗೈದು ಅದರಂತೆ ಬದುಕಿದವರು.

ಕಳೆದ ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡದೆ ತಮ್ಮ ಏರಿಯಾದಲ್ಲಿ ಕೊಟ್ಟ ಹಣದಿಂದ ಗೆದ್ದಿದ್ದು ಇವರ ಹೆಗ್ಗಳಿಕೆ.

ಮೀಸೆ ರಾಮು‌ ಕರೆಯಲ್ಪಡುತ್ತಿದ್ದ ರಾಮು ಅರಸೀಕೆರೆ ದಲಿತ ಸಂಘಟನೆಯ ಸಂಚಾಲಕರು ಕೂಡ ಹೌದು.
ಪೌರ ಕಾರ್ಮಿಕರ ಪರವಾಗಿ ಹೋರಾಡುತ್ತಿದ್ದ ರಾಮಣ್ಣ. ದಲಿತರಿಗೆ ಎಲ್ಲೇ ಅನ್ಯಾಯವಾದರೂ ಹೋಗಿ ಪ್ರತಿಭಟಿಸುತ್ತಿದ್ದರು. ದಸಂಸದ ಕಟ್ಟಾಳು ಇಷ್ಟು ಬೇಗ ಹೋಗಬಾರದಿತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅರಸೀಕೆರೆ ಜನತೆಯ ಒತ್ತಾಸೆ

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here