‘ದಾವೂದ್​ ಮನೆಯನ್ನು ಧ್ವಂಸ ಮಾಡುವ ತಾಕತ್ತಿಲ್ಲದವರು ಕಂಗನಾ ಕಚೇರಿ ಕೆಡವಿದ್ದಾರೆ.’

0

ಮುಂಬೈ: ಸದ್ಯ ಮುಂಬೈನಲ್ಲಿ ಕಂಗನಾದೇ ಸುದ್ದಿ. ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ನಡುವೆ ದೊಡ್ಡ ಜಟಾಪಟಿಯೇ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ನಾಯಕರು ನಟಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ಕಂಗನಾ ರಣಾವತ್​ ಕಚೇರಿಯನ್ನು ಧ್ವಂಸ ಮಾಡಿದ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಿಡಿಕಾರಿದ್ದಾರೆ. ನಿಮಗೆ ಗ್ಯಾಂಗ್​ಸ್ಟರ್​ ದಾವೂದ್​ ಅವರ ಮನೆಯನ್ನು ಧ್ವಂಸಗೊಳಿಸುವ ತಾಕತ್ತು ಇಲ್ಲ..ದೊಡ್ಡದಾಗಿ ಕಂಗನಾ ಕಚೇರಿಯನ್ನು ನಾಶ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಗನಾ ರಣಾವತ್​ ಬಾಂದ್ರಾದಲ್ಲಿ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆ. ಹಾಗಾಗಿಯೇ ಧ್ವಂಸ ಮಾಡಲಾಗಿದೆ ಎಂದು ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೋರೇಶನ್​ ಹೇಳಿದೆ. ಆದರೆ ಈ ಕ್ರಮಕ್ಕೆ ರಾಷ್ಟ್ರಾದ್ಯಂತ ಅಪಾರ ವಿರೋಧ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here