ದುಬಾರಿ ಕಾರಿನ ಮಾಲೀಕ ಈಗ ಕಂಗಾಲು.!

0

ಐಷಾರಾಮಿ ಕಾರು ಪಡೆದವರು ಸರಿಯಾದ ಪಾರ್ಕಿಂಗ್‌ ಮಾಡಿಕೊಳ್ಳದಿದ್ದರೆ ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ.

ಹೌದು, ಯು.ಕೆ.ದ ದೇವೊನ್‌ ಎನ್ನುವ ಪ್ರದೇಶದಲ್ಲಿ 1.1 ಕೋಟಿ ರೂ. ಮೌಲ್ಯದ ಆಸ್ಟಾನ್‌ ಮಾರ್ಟಿನ್‌ ವಿ8 ಕಾರು ಒಂದನ್ನು ಹಲವು ದಿನಗಳಿಂದ ಒಂದೇ ಕಡೆ ಪಾರ್ಕ್‌ ಮಾಡಲಾಗಿತ್ತು. ಆದರೆ ಈ ಸ್ಥಳದಲ್ಲಿ ಮೀನುಗಾರರಿಗೆ ಮಾತ್ರ ತಮ್ಮ ವಾಹನ ನಿಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಅಪರಿಚಿತ ವಾಹನ ಎಷ್ಟು ದಿನವಾದರೂ ತೆಗೆಯದೇ ಇದಿದ್ದರಿಂದ ಮೀನುಗಾರರೆಲ್ಲ ಸೇರಿ ಕಾರಿನ ಮೇಲೆ ಸತ್ತ ಮೀನುಗಳಿಂದ ದಾಳಿ ನಡೆಸಿದ್ದಾರೆ.

ಸತ್ತ ಮೀನುಗಳನ್ನು ಕಾರಿನ ಮೇಲೆ ಬಿಸಾಕುವ ಮೂಲಕ ಮೀನುಗಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ರೀತಿ ಮೀನು ಬಿಸಾಡಿರುವುದರಿಂದ, ಐಷಾರಾಮಿ ಕಾರಿನ ಗಾಜು ಬಿರುಕು ಬಿಟ್ಟಿದೆ. ಇದೀಗ ಕಾರಿನ ಮೇಲೆ ಮೀನಿನಿಂದ ದಾಳಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಅನೇಕರು ಕಾರಿನ ಮಾಲೀಕನ ಯಾತನೆಯನ್ನು ಯೋಚಿಸಿದರೆ, ಇನ್ನು ಕೆಲವರು ಇಂತಹ ಕಾರನ್ನು ಬೀದಿಬದಿಯಲ್ಲಿ ನಿಲ್ಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here