ದೇವರಾಜ ಅರಸರ 105ನೇ ಜಯಂತಿ

0

ಗುಡಿಬಂಡೆ ತಾಲೂಕು ಕಚೇರಿಯಲ್ಲಿ ಶ್ರೀ ದಿವಂಗತ ದೇವರಾಜ ಅರಸರ 105ನೇ ಜಯಂತಿಯನ್ನು ಆಚರಣೆ ಮಾಡಲಾಯಿತು ತಾಲೂಕು ಕಚೇರಿ ಆವರಣದಲ್ಲಿ ಬಿ.ಸಿ.ಎ ಮ್.ಬಿ. ಇಲಾಖೆ ಸಂಯೋಗದೊಂದಿಗೆ, ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ತಾಲೂಕು ಕಚೇರಿ ಸಿಬ್ಬಂದಿಗಳು ಭಾವಚಿತ್ರಕ್ಕೆ ಹೂವನ್ನು ಅರ್ಪಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು,

ಮುಖ್ಯ ಭಾಷಣಗಾರರಾಗಿ ಅನುರಾಧ ಶ್ರೀಮತಿ ಶ್ರೀ ಆನಂದ್ ಅವರು ಮಾತನಾಡಿ
ಶ್ರೀ ದಿವಂಗತ ದೇವರಾಜ ಅರಸರು ದೀನದಲಿತ ಬಡವರ ಆಶಾ ಸೂರ್ಯ ವೆಂದು ಹೆಸರಿನಿಂದ ಕರೆಯಲ್ಪಡುತ್ತಿದ್ದರು,
ನಾವೆಲ್ಲಾ ಭಾರತೀಯರು ಒಂದೇ ತಾಯಿ ಮಕ್ಕಳು ಹಿಂದೂ ಕ್ರೈಸ್ತ ಮುಸಲ್ಮಾನ ದೇಗುಲದಲ್ಲಿ ಒಂದೇ ತಾಯಿ ಮಕ್ಕಳು ಮಕ್ಕಳ ಹಾಗೆ ಜೀವನ ನಡೆಸಬೇಕು,1969 ರಿಂದ 1979 ವರೆಗೆ ಸಂಪೂರ್ಣ 10 ವರ್ಷಗಳ ದಶಕವನ್ನು ಅರಸು ದಶಕ ಎಂದು ಹೆಸರು ಬಂದಿದೆ ಕಾರಣ ದೇವರಾಜ ಅರಸರು ನಡೆದಂತಹ ದಾರಿ ಬಡಜನರಿಗೆ ಆಶಾಕಿರಣವಾಗಿ ಮೆರೆದಿದ್ದರು,
ದೇವರಾಜ ಅರಸರು ಸುಮಾರು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದರು ಅದೇ ಸಂದರ್ಭದಲ್ಲಿ ದೇಶವೇ ಅವರನ್ನು ನೋಡುವಂತೆ ಬಡಬಗ್ಗರಿಗೆ ಸಹಾಯಾರ್ಥವಾಗಿ ನಿಂತರು,

ಇದೇ ಸಂದರ್ಭದಲ್ಲಿ ಗುಡಿಬಂಡೆ ತಾಲೂಕು ಕಚೇರಿಯ ತಾಸಿಲ್ದಾರ್ ಅವರಾದ ಸಿಬ್ಗ್ ತುಲ್ , ಬಿಸಿಎಂಬಿ ಅಧಿಕಾರಿ ರಾಮಯ್ಯ, ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕರ್ನಾಟಕ ರಾಜ್ಯ ಗುಡಿಬಂಡೆ ನೌಕರರ ಸಂಘದ ಅಧ್ಯಕ್ಷರು ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಶಿಕ್ಷಕರು ಇಲಾಖೆ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವರದಿ ಸತೀಶ್ ಬಾಬು.ಎ ಗುಡಿಬಂಡೆ ತಾಲೂಕು

LEAVE A REPLY

Please enter your comment!
Please enter your name here