ದೇಶದ ಅಭಿವೃದ್ಧಿಗೆ ಹೆಣ್ಣು ಮಕ್ಕಳ ಪಾತ್ರ ಬಹಳ ಮುಖ್ಯ :- ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್

0

ಬಾಗೇಪಲ್ಲಿ :- ದೇಶದ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಪೂರಕವಾದಂತಹ ಸಂಪನ್ಮೂಲ ವ್ಯಕ್ತಿಗಳು ಈ ದೇಶದಲ್ಲಿ ಜನಿಸಿ ಬೇಕಾದರೆ ಹೆಣ್ಣು ಮಕ್ಕಳ ಪಾತ್ರ ಬಹಳ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್ ದೇವರಾಜ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲೂಕು ಆಡಳಿತ ಅಪರ್ಣ ಸಂಸ್ಥೆ ಬಾಗೇಪಲ್ಲಿ , ಚೈಲ್ಡ್ ರೈಟ್ಸ್ ಟ್ರಸ್ಟ್, ತಾಲ್ಲೂಕು ಕಾನೂನು ಸೇವಾ ಸಮಿತಿ, ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕಾನೂನು ಸಮಾಲೋಚನೆ ಹಾಗೂ ಹೆಣ್ಣು ಮಕ್ಕಳಿಗಾಗಿ ಜೀವನ ಕೌಶಲ್ಯ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು .

ನಮ್ಮ ದೇಶದ ನಮ್ಮ ಸಮಾಜದ ಹಾಗೂ ನಮ್ಮ ಸರ್ಕಾರದ ಹಿತರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲೆ ಅಡಗಿದೆ.
ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸೂಕ್ತ ಪೂರಕವಾದಂತಹ ಮಾನವ ಸಂಪನ್ಮೂಲವನ್ನು ನಾವು ದೇಶಕ್ಕೆ ನೀಡಬೇಕಾಗಿದೆ. ಒಂದು ಕೊಡುಗೆ ಹೆಣ್ಣು ಮಕ್ಕಳಿಂದ ಸಾಧ್ಯ ಇಂತಹ ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಮೇಲಿದೆ ಆದುದರಿಂದ ಬಾಲ್ಯ ವಿವಾಹ ನಿಷೇಧ ಮಾಡಿ ಸೂಕ್ತ ವಯಸ್ಸಿಗೆ ಬಂದ ನಂತರ ಹೆಣ್ಣು ಮಕ್ಕಳಿಗೆ ಮದುವೆ ಮಾಡುವಂತಹ ಜವಾಬ್ದಾರಿ ಪೋಷಕರಲ್ಲಿ ನಮ್ಮ ಮೇಲೆ ಇದೆ.
ಬಾಲ್ಯ ವಿವಾಹವನ್ನು ನಿಷೇಧ ಮಾಡಬೇಕಾಗಿದೆ ಇದರ ಜವಾಬ್ದಾರಿಯನ್ನು ಪ್ರತಿಯೊಬ್ಬ ನಾಗರಿಕನು ಅರಿಯಬೇಕಾಗಿದೆ ಎಂದು ತಿಳಿಸಿದರು .

ಇದೇ ಸಂದರ್ಭದಲ್ಲಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಎಸ್ ಎಂ ಅಟರಗಿ ಮಾತನಾಡಿ ಈ ದೇಶದ ಸಾಮಾಜಿಕ ಪಿಡುಗು ಈ ಬಾಲ್ಯ ವಿವಾಹ ಈ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಾವು ನಿಷೇಧಿಸಬೇಕಾಗಿದೆ.

ಬಾಲ್ಯ ವಿವಾಹವನ್ನು ನಡೆಸಿದಂತಹ ಪೋಷಕರಿಗೆ ಹಾಗೂ ಅಲ್ಲಿ ಸೇರಿದಂತಹ ಎಲ್ಲರ ಮೇಲೂ ಕಾನೂನು ಕ್ರಮವನ್ನು ಕೈಗೊಳ್ಳುತ್ತದೆ ಆದುದರಿಂದ ಬಾಲ್ಯ ವಿವಾಹ ನಿಷೇಧ ಕಾಯಿದೆ ಅಥವಾ ಕಾನೂನಿನ ಬಗ್ಗೆ ಜನರು ಅರಿವನ್ನು ಪಡೆದು ಅದರ ಜವಾಬ್ದಾರಿಯನ್ನು ಅರಿತು ಬಾಲ್ಯ ವಿವಾಹವನ್ನು ನಿಷೇಧ ಮಾಡಿ ಈ ದೇಶದ ಅಭಿವೃದ್ಧಿಗೆ
ನಾವೆಲ್ಲರೂ ಕೈಜೋಡಿಸಬೇಕಾಗಿದೆ ಹೆಣ್ಣುಮಕ್ಕಳ ಮಕ್ಕಳ ರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು .

ಹೆಣ್ಣು ಮಕ್ಕಳು ಈ ದೇಶದ ಆಸ್ತಿ ಇಂತಹ ಹೆಣ್ಣು ಮಕ್ಕಳಿಗೆ ಶಿಕ್ಷಣ ಜ್ಞಾನವನ್ನು ನೀಡಿ ಉನ್ನತವಾದ ಹುದ್ದೆಗಳನ್ನು ಅಲಂಕರಿಸಲು ಸಹಾಯವನ್ನು ಮಾಡಬೇಕಾಗಿದೆ .
ಇತ್ತೀಚಿನ ದಿನಗಳಲ್ಲಿ ಸರ್ಕಾರ ಹೆಣ್ಣು ಮಕ್ಕಳಿಗಾಗಿ ಅನೇಕ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಅದರ ಸದುಪಯೋಗವನ್ನು ಪಡೆದು ದೇಶದ ಅಭಿವೃದ್ಧಿಗೆ ನಾವು ಸಹಾಯ ಮಾಡಬೇಕಾಗಿದೆ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ, ತಾಲ್ಲೂಕು ಪಂಚಾಯಿತಿ ಇಒ ಎಚ್ ಎನ್ ಮಂಜುನಾಥ್, ತಾಲ್ಲೂಕಾ ಆರೋಗ್ಯಾಧಿಕಾರಿಗೆ ಸತ್ ನಾರಾಯಣ ರೆಡ್ಡಿ, ಸಿಡಿಪಿಒ ರಾಜೇಂದ್ರ ಪ್ರಸಾದ್, ತಾಲ್ಲೂಕು ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ , ವಕೀಲರ ಸಂಘದ ಅಧ್ಯಕ್ಷ ನಂಜುಂಡಪ್ಪ ಅತಿಥಿಗಳಾದ ವೆಂಕಟೇಶ್, ಸುವರ್ಣ ಸುಬ್ಬರಾಯಪ್ಪ, ನಾರಾಯಣಸ್ವಾಮಿ, ಕೆ ಬಾಲರಾಜು, ಇತರರು ಹಾಜರಿದ್ದರು .

LEAVE A REPLY

Please enter your comment!
Please enter your name here