ದೇಶಿಯ ಆಹಾರ ಪದ್ಧತಿಯನ್ನುರೂಡಿಸಿಕೋಳ್ಳಬೇಕು |ಕೊರೋನಾ ಸೋಂಕಿಗೆ ಹೆದರುವ ಅಗತ್ಯವಿಲ್ಲ.

0

ದೇಶಿಯ ಆಹಾರ ಪದ್ಧತಿಯನ್ನುರೂಡಿಸಿಕೋಳ್ಳಬೇಕು

ಕೊರೋನಾ ಸೋಂಕಿಗೆ ಹೆದರುವ ಅಗತ್ಯವಿಲ್ಲ. ಇದು ಒಂದು ಸಣ್ಣ ಕಾಯಿಲೆ ಅಷ್ಟೇ. ವೈದ್ಯರ ಸಲಹೆ ಸೂಚನೆ ಮಾರ್ಗದರ್ಶನವನ್ನು ಪಾಲಿಸಿದರೆ ಬೇಗ ಗುಣಮುಖರಾಗಬಹುದು ಎಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ, ಆರ್, ಎಸ್,  ಬಾಳಿಕಾಯಿ ಹೇಳಿದರು.

ಅವರುಸವದತ್ತಿ  ತಾಲೂಕಿನ ಮಳಗಲಿ ಗ್ರಾಮದಲ್ಲಿ ಕೊರೋನ ವೈರಾಣುವಿನ ಕುರಿತ ಜಾಗೃತಿ ಸಭೆಯಲ್ಲಿ ಮಾತನಾಡುತ್ತಾ, ನಮ್ಮ ದೇಶೀಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು, ಆ ಮೂಲಕ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಕೊಳ್ಳಬೇಕು, ಇದು ವೈರಸ್ ವಿರುದ್ಧ ರಕ್ಷಣೆ ಪಡೆಯಲು ಸಹಾಯಕವಾಗುತ್ತದೆ. ಪ್ರತಿದಿನ ಯೋಗ ಪ್ರಾಣಾಯಾಮ ಮಾಡಿ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಸೋಂಕಿಗೆಹೆದರುವಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಬೇಕು, ಸುರಕ್ಷಾ ನಿಯಮಗಳನ್ನು ಪಾಲಿಸಬೇಕು, ಸೋಂಕಿತರನ್ನು ನೋಡುವ ಭಾವನೆ ಬದಲಾಗಬೇಕು ಕಡ್ಡಾಯವಾಗಿ ಎಲ್ಲರೂ ಮಾಸ್ಕ್  ಧರಿಸಬೇಕು ಎಂದು ಗ್ರಾಮ ಪಂಚಾಯತ್ ಪಿಡಿಒ ಗುರುಪಾದ ಗಿರೇನ್ನವರ ಹೇಳಿದರು.

ಇದೇಸಂದರ್ಭದಲ್ಲಿಗ್ರಾಮಪಂಚಾಯತಿಉಪಾಧ್ಯಕ್ಷರಾದಯಲ್ಲಪ್ಪಾಮೆಟಗುಪ್ಪಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಊರಿನ ಪ್ರಮುಖರಾದ ಪಕೀರಪ್ಪ ಶಿರಸಂಗಿ, ಬೆಳ್ಯಪ್ಪ ರುದ್ರಪ್ಪನವರ, ತಿಮ್ಮಣ್ಣ ಬಂಡಿವಡ್ಡರ, ಪಕೀರಪ್ಪ

ವಕ್ಕುಂದ, ಶಿವರಾಜ ರುದ್ರಪ್ಪನವರ, ಪುಂಡಲೀಕ ಚಂದರಗಿ, ಚಿದಾನಂದ ರುದ್ರಪ್ಪನವರ, ಅನ್ವರ್ ಪೆಂಡಾರಿ ಹಾಜರಿದ್ದರು.

 

LEAVE A REPLY

Please enter your comment!
Please enter your name here