ಭಾರತದ ಮೂರು ಸಶಸ್ತ್ರ ಪಡೆಗಳ ಬತ್ತಳಿಕೆಗೆ ಮತ್ತೊಂದು ಅತ್ಯಾಧುನಿಕ ಶಸ್ತ್ರಾಸ್ತ್ರ ಸೇರ್ಪಡೆಯಾಗಲಿದೆ. ಭೂ ಸೇನೆ, ವಾಯು ಪಡೆ, ಮತ್ತು ನೌಕಾ ದಳ – ಈ ಮೂರು ಸಶಸ್ತ್ರ ಪಡೆಗಳಿಗೂ ಅತ್ಯಂತ ಉಪಯುಕ್ತವಾದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತ ಯಶಸ್ಸು ಸಾಸಿದೆ.
ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‍ಡಿಒ) ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವ ಭೂಮಿಯಿಂದ ಭೂಮಿಗೆ ಚಿಮ್ಮುವ ಸೂಪರ್ ಸಾನಿಕ್ ಮಿಸೈಲ್ (ಎಲ್‍ಎಸಿಎಂ-ಲ್ಯಾಂಡ್ ಅಟಾಕ್ ಕ್ರೂಯಿಸ್ ಮಿಸೈಲ್) ಕ್ಷಿಪಣಿಯನ್ನು ಒಡಿಶಾದ ಬಾಲಸೂರ್ ಪರೀಕ್ಷಾ ವಲಯದಲ್ಲಿ ಯಶಸ್ವಿಯಾಗಿ ಉಡಾಯಿಸಲಾಯಿತು.
ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಚಲಿಸಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯು ವೈರಿ ಪಡೆಗಳ ನೆಲೆಗಳನ್ನು ಕ್ಷಣಾರ್ಧದಲ್ಲೇ ಧ್ವಂಸಗೊಳಿಸುವ ಅಗಾಧ ಸಾಮಥ್ರ್ಯ ಹೊಂದಿದೆ ಎಂದು ಡಿಆರ್‍ಡಿಒ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕ್ಷಿಪಣಿಯನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು , ಅತ್ಯಂತ ನಿಖರತೆಯ ಕಾರ್ಯ ಕ್ಷಮತೆ ಹೊಂದಿದೆ. ಈ ಅತ್ಯಾಧುನಿಕ ಕ್ಷಿಪಣಿಯು ಭಾರತದ ಮೂರು ಸೇನಾ ಪಡೆಗಳಿಗೂ ಅತ್ಯಂತ ಉಪಯೋಗವಾಗುತ್ತದೆ.
ಭೂಮಿ, ಆಗಸ ಮತ್ತು ಜಲ ಪ್ರದೇಶಗಳಿಂದಲೂ ಈ ಕ್ಷಿಪಣಿಯನ್ನು ನಿಖರ ಗುರಿಯತ್ತ ಉಡಾಯಿಸಬಹುದು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಇಂಡೋ ಚೀನಾ – ಇಂಡೋ ಪಾಕಿಸ್ತಾನ ಗಡಿ ಭಾಗಗಳಲ್ಲಿ ವೈರಿಗಳಿಂದ ನಿರಂತರ ಆತಂಕ ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲೇ ಭಾರತೀಯ ಸೇನೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದುತ್ತಿದ್ದು, ಈ ಕ್ಷಿಪಣಿ ಸೇರ್ಪಡೆಯಾಗಿದೆ.
ಈಗಾಗಲೇ ಭಾರತೀಯ ಸೇನಾ ಪಡೆ ಬಳಿ ಬ್ರಹ್ಮೋಸ್ ಮತ್ತು ನಿರ್ಭಯ್ ಕ್ಷಿಪಣಿಗಳು ಸೇನಾ ಪಡೆಗಳ ಸಾಮಥ್ರ್ಯವನ್ನು ಹೆಚ್ಚಿಸಿದ್ದು ಹೊಸ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳು ಗಜ ಬಲ ನೀಡಿದಂತಾಗಿದೆ.
ಇತ್ತೀಚೆಗಷ್ಟೇ ಒಡಿಶಾದ ಕರಾವಳಿ ಪ್ರದೇಶ ಬಾಲಸೂರ್‍ನ ಕಲಾಂ ದ್ವೀಪದಲ್ಲಿ ಡಿಆರ್‍ಡಿಒ ವಿಜ್ಞಾನಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದ್ದರು.