ದೈತ್ಯ ಮೊಸಳೆ ಕೊಂದು ರುಂಡ-ಮುಂಡ ಪ್ರತ್ಯೇಕ ಸಮಾಧಿ ಮಾಡಿದ ಗ್ರಾಮಸ್ಥರು: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

0

ಮೂಢನಂಬಿಕೆಗೆ ಜೋತುಬಿದ್ದ ಇಂಡೋನೇಷ್ಯಾದ ಗ್ರಾಮಸ್ಥರು 14 ಅಡಿ ಉದ್ದದ ಬೃಹತ್​ ಮೊಸಳೆಯೊಂದನ್ನು ಬೇಟೆಯಾಡಿ ಅದರ ರುಂಡ ಚೆಂಡಾಡಿರುವ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು ಅರ್ಧ ಟನ್​ ತೂಗುವ 50 ವರ್ಷದ ದೈತ್ಯ ಮೊಸಳೆಯು ಅನೇಕರ ಮೇಲೆ ದಾಳಿ ಮಾಡಿ ಬಲಿ ಪಡೆದುಕೊಂಡ ಹಿನ್ನೆಲೆಯಲ್ಲಿ ಉದ್ರಿಕ್ತ ಗ್ರಾಮಸ್ಥರು ಮೊಸಳೆಯನ್ನು ಕೊಂದಿದ್ದಾರೆ.

ಹೇಗೆ ಹಿಡಿದರು?
ಇಂಡೋನೇಷ್ಯಾದ ಬಂಕಾ ಬೆಲಿಟುಂಗ್ ದ್ವೀಪದಲ್ಲಿ ಗ್ರಾಮಸ್ಥರು ಮೊಸಳೆ ಹಿಡಿಯಲೆಂದೇ ಸಂಚು ರೂಪಿಸಿದ್ದರು. ಬಲೆಯೊಂದನ್ನು ಸಿದ್ಧಪಡಿಸಿ, ಅದಕ್ಕೆ ತುಂಬಾ ಹರಿತವಾದ ಬ್ಲೇಡ್​ಗಳನ್ನು ಅಳವಡಿಸಿ ಇಲ್ಲಿನ ಕಯುಬೆಸಿ ನದಿಯಲ್ಲಿ ಮೊಸಳೆಯನ್ನು ಹಿಡಿದಿದ್ದಾರೆ. ಬಳಿಕ ಅದರ ತಲೆಯನ್ನು ಕತ್ತರಿಸಿದ್ದಾರೆ.

ವಿಚಿತ್ರವಾಗಿ ನಡೆದ ಮೊಸಳೆ ಸಮಾಧಿ
ಊರಿನ ಜನರು ಮೊಸಳೆಯನ್ನು ಕೊಂದ ಬಳಿಕ ಅದನ್ನು ವಿಚಿತ್ರವಾಗಿ ಸಮಾಧಿ ಮಾಡಿದ್ದಾರೆ. ಅಂದರೆ, ದೇಹ ಒಂದು ಕಡೆ ಹಾಗೂ ತಲೆಯನ್ನು ಒಂದು ಕಡೆ ಹೂತಿದ್ದಾರೆ. ಹೀಗ್ಯಾಕೆ ಮಾಡಿದರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಮುಂದೆ ಓದಿ. ಮೊಸಳೆಯೊಂದು ದುಷ್ಟ ಶಕ್ತಿ ಎಂದು ನಂಬಿರುವ ಅಲ್ಲಿನ ಜನ ಈ ರೀತಿ ಸಮಾಧಿ ಮಾಡಿದರೆ ಮೊಸಳೆ ಬೇಟೆಯಾಡಲು ಮತ್ತೆ ಬರುವುದಿಲ್ಲ ಎಂಬುದು ಜನರ ನಂಬಿಕೆಯಾಗಿದೆ.

ಮೊಸಳೆಯನ್ನು ಹಿಡಿದ ಎರಡು ದಿನಗಳ ಬಳಿಕ ಅದು ಬಳಲಿ ಸಾವಿಗೀಡಾಗಿದೆ. ಅದಾದ ಬಳಿಕ ಮೊಸಳೆಯನ್ನು ಬುಲ್ಡೋಜರ್​ ಸಹಾಯದಿಂದ ಸಮಾಧಿ ಸ್ಥಳಕ್ಕೆ ಕೊಂಡೊಯ್ದು, ತಲೆ ಕಡಿದು ಪ್ರತ್ಯೇಕವಾಗಿ ಸಮಾಧಿ ಮಾಡಿದ್ದಾರೆ.

ಇನ್ನು ತಾವು ಸೆರೆಹಿಡಿದ ಮೊಸಳೆಯನ್ನು ಪ್ರಾಣಿ ಸಂರಕ್ಷಣಾ ಇಲಾಖೆ ವಶಕ್ಕೆ ನೀಡಲು ಗ್ರಾಮಸ್ಥರು ನಿರಾಕರಿಸಿದ್ದಾರೆ. ಕಾರಣ ಅವರಿಗೆ ಒಪ್ಪಿಸಿದರೆ ಸ್ಥಳೀಯರು ಇದರಿಂದ ಅವನತಿ ಹೊಂದಬೇಕಾಗುತ್ತದೆ ಎಂಬ ಭಯದಿಂದ ತಾವೇ ಮೊಸಳೆಯನ್ನು ಕೊಂದು ಸಮಾಧಿ ಮಾಡಿದ್ದಾರೆ. 

LEAVE A REPLY

Please enter your comment!
Please enter your name here